ನವದೆಹಲಿ: 60 ಪ್ರಾಥಮಿಕ ಶಾಲೆಯ 17,000 ಶಾಲಾ ಮಕ್ಕಳಿಗೆ ಚೀನಾ ಸರ್ಕಾರ ಜಿಪಿಎಸ್ ಶಕ್ತಗೊಂಡ ಸ್ಮಾರ್ಟ್ ವಾಚ್ಗಳನ್ನು ವಿತರಿಸಿದೆ. ಇದರಿಂದ ಪೋಷಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಚೀನಾದ ಮಾಧ್ಯಮ ವರದಿ ತಿಳಿಸಿದೆ.
ಗುವಾಂಗ್ಜೌ ಡೈಲಿಯ ವರದಿಯ ಪ್ರಕಾರ, ದಕ್ಷಿಣ ಗುವಾಂಗ್ಜೌ ನಗರದಲ್ಲಿ ಈ ಕೈಗಡಿಯಾರಗಳನ್ನು ವಿತರಿಸಿದ್ದು, ಅವುಗಳನ್ನು “ಸುರಕ್ಷಿತ ಕ್ಯಾಂಪಸ್ ಸ್ಮಾರ್ಟ್ವಾಚ್ಗಳು” ಎಂದು ಕರೆಯಲಾಗಿದೆ. ಚೀನಾದ ಈ ವಾಚ್ಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಬೀಡೌಗೆ ಲಿಂಕ್ ಮಾಡಲಾಗಿದೆ ಮತ್ತು ಅವುಗಳನ್ನು ಧರಿಸಿರುವ ಮಕ್ಕಳನ್ನು 10 ಮೀಟರ್ ಒಳಗೆ ಟ್ರ್ಯಾಕ್ ಮಾಡಬಹುದು ಎನ್ನಲಾಗಿದೆ.
ಇದರಿಂದ ಪಾಲಕರು ತಮ್ಮ ಮಕ್ಕಳಿರುವ ಸ್ಥಳವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಮಗು ತುರ್ತು ಅಥವಾ ಸೋಸ್ ಎಚ್ಚರಿಕೆಯನ್ನು ಕಳುಹಿಸಿದರೆ ಅಧಿಸೂಚನೆಯನ್ನು ಸಹ ಪಡೆಯಬಹುದು.
ಜಿಪಿಎಸ್- ಸ್ಮಾರ್ಟ್ ವಾಚ್ಗಳನ್ನು ಧರಿಸುವುದರಿಂದ, ಮಕ್ಕಳು ಯಾವುದೇ ನೀರಿನ ಅಪಾಯಕ್ಕೆ ತುಂಬಾ ಹತ್ತಿರದಲ್ಲಿದ್ದರೆ ಪೋಷಕರಿಗೆ ಎಚ್ಚರಿಕೆಯ ಸಂದೇಶ ಬರುತ್ತದೆ. ಇದರಿಂದ ಮಕ್ಕಳು ನೀರಿನಲ್ಲಿ ಮುಳುಗುವ ಅಪಾಯವನ್ನು ತಡೆಯಬಹುದು.
ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿಯ ಪ್ರಕಾರ, 2019 ರಲ್ಲಿ ಧರಿಸಬಹುದಾದ ಸಾಧನಗಳು ಮಾರುಕಟ್ಟೆಯಲ್ಲಿ 222.9 ಮಿಲಿಯನ್ ಯುನಿಟ್ಗಳ ಜಾಗತಿಕ ಸಾಗಣೆಯನ್ನು ತಲುಪುವ ನಿರೀಕ್ಷೆಯಿದೆ. 2023 ರ ವೇಳೆಗೆ ಧರಿಸಬಹುದಾದ ಎಲ್ಲಾ ಸಾಗಣೆಗಳಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರಾಬಲ್ಯ ಹೊಂದಲಿವೆ.
ಪ್ರಸ್ತುತ, ಚೀನಾದ ಬ್ರಾಂಡ್ಗಳಾದ ಶಿಯೋಮಿ ಮತ್ತು ಹುವಾವೇ ರಿಸ್ಟ್ಬ್ಯಾಂಡ್ ಧರಿಸಬಹುದಾದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಎಲ್ಲಾ ರಿಸ್ಟ್ಬ್ಯಾಂಡ್ಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಚೀನಾದಲ್ಲಿ ರವಾನಿಸುವ ನಿರೀಕ್ಷೆಯಿದೆ.