COP26 Summit Trending Video: 'ನಮ್ಮ ದೇಶದಲ್ಲಿ ನೀವು ತುಂಬಾ ಜನಪ್ರೀಯರು, ನನ್ನ ಪಕ್ಷ ಸೇರಿ', ಹೀಗಂತ ಯಾವ ದೇಶದ ಪ್ರಧಾನಿ PM Modiಗೆ ಹೇಳಿದ್ದು ಗೊತ್ತಾ?

COP26 Summit Trending Video - COP26 ಜಲವಾಯು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗ್ಲಾಸ್ಗೋದಲ್ಲಿದ್ದಾರೆ. ಹವಾಮಾನ ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ (PM Narendra Modi) ಅವರು ವಿಶ್ವದ ಇತರ ಎಲ್ಲ ನಾಯಕರನ್ನು ಭೇಟಿಯಾಗಿದ್ದಾರೆ.

Written by - Nitin Tabib | Last Updated : Nov 2, 2021, 10:00 PM IST
  • ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಭೇಟಿ
  • ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದ ನಫ್ತಾಲಿ ಬೆನೆಟ್
  • ನನ್ನ ಪಕ್ಷವನ್ನು ಸೇರಿ ಎಂದು ಪ್ರಧಾನಿ ಮೋದಿಗೆ ಆಹ್ವಾನವಿತ್ತ ನಫ್ತಾಲಿ ಬೆನೆಟ್
COP26 Summit Trending Video: 'ನಮ್ಮ ದೇಶದಲ್ಲಿ ನೀವು ತುಂಬಾ ಜನಪ್ರೀಯರು, ನನ್ನ ಪಕ್ಷ ಸೇರಿ', ಹೀಗಂತ ಯಾವ ದೇಶದ ಪ್ರಧಾನಿ PM Modiಗೆ ಹೇಳಿದ್ದು ಗೊತ್ತಾ? title=
COP26 Summit Trending Video (Video Grab)

COP26 Summit Trending Video - COP26 ಜಲವಾಯು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗ್ಲಾಸ್ಗೋದಲ್ಲಿದ್ದಾರೆ. ಹವಾಮಾನ ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ (PM Narendra Modi) ಅವರು ವಿಶ್ವದ ಇತರ ಎಲ್ಲ ನಾಯಕರನ್ನು ಭೇಟಿಯಾಗಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ (Israel PM Naftali Bennett) ನಡುವಿನ ಭೇಟಿಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ನೀವು ಇಸ್ರೇಲ್‌ನಲ್ಲಿ ಬಹಳ ಜನಪ್ರಿಯರು, ನೀವು ನನ್ನ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಪ್ರಧಾನಿ ಮೋದಿಯವರಿಗೆ ವಿನಂತಿಸಿದ್ದಾರೆ. ಈ ಸಭೆಯ ವಿಡಿಯೋ ಕೂಡ ಇದೀಗ ಬಹಿರಂಗಗೊಂಡಿದೆ. 

ಗ್ಲಾಸ್ಗೋದಲ್ಲಿ COP26 ಹವಾಮಾನ ಶೃಂಗಸಭೆಯ ಹಿನ್ನಲೆಯಲ್ಲಿ ನಡೆದ ಮೊದಲ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಚರ್ಚಿಸಿದ್ದಾರೆ ಮತ್ತು ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಸಭೆಯಲ್ಲಿ ಉಭಯ ನಾಯಕರ ಮಧ್ಯ ಭಾರಿ ಉತ್ಸಾಹ ಕಂಡುಬಂದಿದೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಬಲವಾದ ಸಂಬಂಧಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿರುವ ನಫ್ತಾಲಿ ಬೆನೆಟ್, ನೀವು ಇಸ್ರೇಲ್‌ನಲ್ಲಿ ಬಹಳ ಜನಪ್ರಿಯರು, ನೀವು ನನ್ನ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಪ್ರಧಾನಿ ಮೋದಿಯನ್ನು ಕೇಳಿದ್ದಾರೆ.  ಇದಾದ ಬಳಿಕ ಪ್ರಧಾನಿ ಮೋದಿ ನಗುತ್ತಲೇ ಉಭಯ ನಾಯಕರು ಪರಸ್ಪರ ಶುಭಾಶಯ ಕೋರಿದ್ದಾರೆ, ಪ್ರಧಾನಿ ಮೋದಿ ಮತ್ತು ಬೆನೆಟ್ ಅವರ ಔಪಚಾರಿಕ ಭೇಟಿಯ ನಂತರ ಸಂಕ್ಷಿಪ್ತ ಮಾತುಕತೆಗಳು ನಡೆದಿವೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತದ ಜನರು ಇಸ್ರೇಲ್ ಜೊತೆಗಿನ ಸ್ನೇಹವನ್ನು ಆಳವಾಗಿ ಗೌರವಿಸುತ್ತಾರೆ ಎಂದು ಹೇಳಿದ್ದಾರೆ. ಉಭಯ ದೇಶಗಳ ನಡುವಿನ ದೃಢವಾದ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುವ ಕುರಿತು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ-Asteroid:ಭೂಮಿಯ ಅತ್ಯಂತ ಸನೀಹಕ್ಕೆ ಬಂದ ಕ್ಷುದ್ರಗ್ರಹ, ವಿಜ್ಞಾನಿಗಳು ಕೂಡ ಇದನ್ನು ಅಂದಾಜಿಸಿರಲ್ಲಿಲ್ಲವಂತೆ

ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಇಸ್ರೇಲ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಮಟ್ಟಕ್ಕೆ ಹೆಚ್ಚಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಎರಡೂ ದೇಶಗಳು ಮಿಲಿಟರಿ ಸಹಕಾರ ಮತ್ತು ನಾವೀನ್ಯತೆ ಮತ್ತು ಸಂಶೋಧನಾ ವಲಯದೊಂದಿಗೆ ಇತರ ಹಲವು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಂಟಿಯಾಗಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ, ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಮಣ್ಯಂ ಜೈಶಂಕರ್ ಅವರು ಇಸ್ರೇಲ್ ಪ್ರವಾಸದಲ್ಲಿದ್ದರು, ಅಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆನೆಟ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ಬೆನೆಟ್ 2022 ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. 

ಇದನ್ನೂ ಓದಿ-Afghanistan Blast: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಬಳಿ ಸ್ಫೋಟ, 19 ಸಾವು 50 ಜನರಿಗೆ ಗಾಯ

ಜುಲೈ 2017 ರಲ್ಲಿ ಪ್ರಧಾನಿ ಮೋದಿಯವರು ಇಸ್ರೇಲ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಇಸ್ರೇಲ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು (India-Israel Bilateral Relation) ಕಾರ್ಯತಂತ್ರದ ಪಾಲುದಾರಿಕೆಗೆ (India-Israel Strategic Partnership) ವಿಸ್ತರಿಸಿದ್ದವು. ಅಂದಿನಿಂದ, ಉಭಯ ದೇಶಗಳ ನಡುವಿನ ಸಂಬಂಧಗಳು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಉತ್ತೇಜಿಸುವುದು ಸೇರಿದಂತೆ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಸಹಯೋಗವನ್ನು ಒಳಗೊಂಡಂತೆ ಜ್ಞಾನ-ಆಧಾರಿತ ಪಾಲುದಾರಿಕೆಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿವೆ. 

ಇದನ್ನೂ ಓದಿ-Corona Vaccine: ಭಾರತ್ ಬಯೋಟೆಕ್‌ನ Covaxinಗೆ ಇನ್ನೂ 5 ದೇಶಗಳ ಮನ್ನಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News