100 ವರ್ಷಗಳ ಬಳಿಕ ಮೊದಲ ಬಾರಿಗೆ ಅಪರೂಪದ ಕಪ್ಪು ಚಿರತೆ ಪತ್ತೆ!

ವನ್ಯಜೀವಿ ಛಾಯಾಗ್ರಾಹಕ ಬುರಾರ್ಡ್ ಲ್ಯೂಕಾಸ್ ಅವರ ಕ್ಯಾಮೆರಾಗೆ ಈ ಅಪರೂಪದ ಕಪ್ಪು ಚಿರತೆ ಸೆರೆಯಾಗಿದ್ದು, ಈ ಫೋಟೋಗಳನ್ನು ತಮ್ಮ ವೆಬ್ಸೈಟ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 

Last Updated : Feb 13, 2019, 11:03 AM IST
100 ವರ್ಷಗಳ ಬಳಿಕ ಮೊದಲ ಬಾರಿಗೆ ಅಪರೂಪದ ಕಪ್ಪು ಚಿರತೆ ಪತ್ತೆ! title=
Image Courtesy: Kenyas.co.ke

ನೈರೋಬಿ: ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬ್ಲಾಕ್ ಪ್ಯಾಂಥರ್ ಎಂದೇ ಕರೆಯುವ ಅತ್ಯಂತ ಅಪರೂಪದ ಕಪ್ಪು ಚಿರತೆಯೊಂದು ಕೀನ್ಯಾದಲ್ಲಿ ಪತ್ತೆಯಾಗಿದೆ. 

ವನ್ಯಜೀವಿ ಛಾಯಾಗ್ರಾಹಕ ಬುರಾರ್ಡ್ ಲ್ಯೂಕಾಸ್ ಅವರ ಕ್ಯಾಮೆರಾಗೆ ಈ ಅಪರೂಪದ ಕಪ್ಪು ಚಿರತೆ ಸೆರೆಯಾಗಿದ್ದು, ಈ ಫೋಟೋಗಳನ್ನು ತಮ್ಮ ವೆಬ್ಸೈಟ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕಿಯಿಸಿರುವ ಅವರು, ಬಾಲ್ಯದಿಂದಲೂ ಕಪ್ಪು ಚಿರತೆ ಕುರಿತಾದ ಕಥೆಗಳಿಂದ ನಾನು ಸಾಕಷ್ಟು ಆಕರ್ಷಿತನಾಗಿದ್ದೆ. ಹೀಗಾಗಿ ಯಾವುದೇ  ಪ್ರಾಣಿ ಕಂಡರೂ ಹೆಚ್ಚು ಅಚ್ಚರಿಯಾಗುತ್ತಿರಲಿಲ್ಲ. ಆದರೀಗ ಬ್ಲಾಕ್ ಪ್ಯಾಂಥರ್ ಸಿಕ್ಕಿರುವುದು ಹರ್ಷ ತಂದಿದೆ" ಎಂದಿದ್ದಾರೆ.

ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಪ್ಪು ಚಿರತೆ ಬಹಳ ಅಪರೂಪದ ವನ್ಯಜೀವಿ. ಈ ಬಾರಿ ಕೀನ್ಯಾದ ಲೈಕಿಪಿಯಾ ವೈಲ್ಡರ್ನೆಸ್ ಶಿಬಿರದಲ್ಲಿ ಬರ್ರಾರ್ಡ್-ಲುಕಾಸ್ ಅವರ ಕ್ಯಾಮರಾಗೆ ಸೆರೆಯಾಗಿವೆ. ಬಳಿಕ ಅವರು ಅಲ್ಲಿಯೇ ಕ್ಯಾಂಪ್ ಹಾಕಿ ಕಪ್ಪು ಚಿರತೆಗಳ ಇರುವಿಕೆ ಬಗ್ಗೆ ಮತ್ತಷ್ಟು  ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಅಪರೂಪದ ಬ್ಲಾಕ್ ಪ್ಯಾಂಥರ್ ಛಾಯಾಚಿತ್ರಗಳು ಕೀನ್ಯಾದೆಲ್ಲೆಡೆ ಸಖತ್ ವೈರಲ್ ಆಗಿದೆ. 

Trending News