ಭಾರತವನ್ನು ಸುತ್ತುವರೆದಿರುವ ಚೀನಾದ ‘String Of Pearls’ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

 ಭಾರತ ಹಾಗೂ ಚೀನಾದ ವಿಚಾರ ಬಂದಾಗಲೆಲ್ಲಾ 'ಮುತ್ತುಗಳ ಸರಪಳಿ' (String Of Pearls) ನೀತಿಯು ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ.

Written by - Manjunath N | Last Updated : Aug 22, 2022, 01:31 PM IST
  • ಸ್ಟ್ರಿಂಗ್ ಆಫ್ ಪರ್ಲ್ಸ್ ಪ್ರಾಜೆಕ್ಟ್' ಎಂಬುದು ಹಿಂದೂ ಮಹಾಸಾಗರದಲ್ಲಿನ ಚೀನೀ ಉದ್ದೇಶಗಳಿಗೆ (ಮಿಲಿಟರಿ, ವಾಣಿಜ್ಯ, ಸಮುದ್ರ ರೇಖೆಯ ಸಂವಹನ ಮತ್ತು ರಾಜತಾಂತ್ರಿಕ) ಸಂಬಂಧಿಸಿದ ಭೌಗೋಳಿಕ ಸಿದ್ಧಾಂತವಾಗಿದೆ.
ಭಾರತವನ್ನು ಸುತ್ತುವರೆದಿರುವ ಚೀನಾದ ‘String Of Pearls’ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? title=
Photo Courtsey: Twitter

ನವದೆಹಲಿ:  ಭಾರತ ಹಾಗೂ ಚೀನಾದ ವಿಚಾರ ಬಂದಾಗಲೆಲ್ಲಾ 'ಮುತ್ತುಗಳ ಸರಪಳಿ' (String Of Pearls) ನೀತಿಯು ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ.ಈ ನೀತಿಯನ್ನು ಚೀನಾ ಅಧಿಕೃತವಾಗಿ ಕರೆಯದೇ ಇದ್ದರೂ ಕೂಡ ಮಾಧ್ಯಮಗಳಲ್ಲಿ ಈ ನೀತಿ ಆಗಾಗ ಸದ್ದು ಮಾಡುತ್ತದೆ. ಹಾಗಾಗಿ ಈಗ ಚೀನಾ ಭಾರತದ ಸುತ್ತ ಹೆಣೆದಿರುವ ಈ ಮುತ್ತುಗಳ ಸರಪಳಿಯನ್ನು ವಿಸ್ತೃತವಾಗಿ ತಿಳಿಯೋಣ ಬನ್ನಿ..

String Of Pearls ಯೋಜನೆ ಎಂದರೇನು? : 

'String Of Pearls ಯೋಜನೆ' ಎಂಬುದು ಹಿಂದೂ ಮಹಾಸಾಗರದಲ್ಲಿನ ಚೀನೀ ಉದ್ದೇಶಗಳಿಗೆ (ಮಿಲಿಟರಿ, ವಾಣಿಜ್ಯ, ಸಮುದ್ರ ರೇಖೆಯ ಸಂವಹನ ಮತ್ತು ರಾಜತಾಂತ್ರಿಕ) ಸಂಬಂಧಿಸಿದ ಭೌಗೋಳಿಕ ಸಿದ್ಧಾಂತವಾಗಿದೆ. ಇದು ಬಾಂಗ್ಲಾದೇಶದ ಚಿತ್ತಗಾಂಗ್‌, ಪಾಕಿಸ್ತಾನದ ಕರಾಚಿ ಮತ್ತು ಗ್ವಾದರ್ ಮತ್ತು ಶ್ರೀಲಂಕಾದ ಕೊಲಂಬೊ, ಹಂಬಂಟೋಟಾ ಬಂದರಿನಲ್ಲಿರುವ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಪ್ರಮುಖವಾಗಿ ಚೀನಾದ ಮಿಲಿಟರಿ ಮತ್ತು ವಾಣಿಜ್ಯ ಸೌಲಭ್ಯಗಳ ಜಾಲವನ್ನು ಸೂಚಿಸುವುದರ ಜೊತೆಗೆ ಅದರ ಸಮುದ್ರ ಸಂವಹನ ಮಾರ್ಗಗಳ ಉದ್ದಕ್ಕೂ ಇರುವ ಸಂಬಂಧಗಳನ್ನು ಸೂಚಿಸುತ್ತದೆ, ಇದು ಚೀನಾದ ಮುಖ್ಯ ಭೂಭಾಗದಿಂದ ಆರಂಭವಾಗಿ ಸುಡಾನ್ ಬಂದರಿನವರೆಗೆ ವಿಸ್ತರಿಸುತ್ತದೆ.

ಜುಲೈ 12, 2017 ರಂದು, ಚೀನಾದ ಪಡೆಗಳು ಜಿಬೌಟಿಯಲ್ಲಿ (ಆಫ್ರಿಕಾ) ದೇಶದ ಮೊದಲ ಸಾಗರೋತ್ತರ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಪ್ರಯಾಣ ಬೆಳೆಸಿದವು.ಆ ಮೂಲಕ ಚೀನಾ ದೇಶವು ತನ್ನ ನೆರೆಯ ರಾಷ್ಟ್ರಗಳ ಸುತ್ತ ವಿಭಿನ್ನ ನೆಲೆಗಳ ಮೂಲಕ ಭಾರತವನ್ನು ಬಲೆಗೆ ಬೀಳಿಸಲು ಚೀನಾ ಮುಂದಾಯಿತು.ಇದರ ಭಾಗವಾಗಿ ಚೀನಾ ದೇಶವು ಭಾರತದ ಸುತ್ತಲೂ ಉಂಗುರವನ್ನು ರಚಿಸುತ್ತಿದೆ, ಇದನ್ನೇ ಈಗ ಮಾಧ್ಯಮಗಳು ಮುತ್ತುಗಳ ಸರಪಳಿ ಎಂದು ಕರೆಯುತ್ತಿವೆ.ಈಗ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿನ ಮಿಲಿಟರಿ ಮೈತ್ರಿಗಳು ಮತ್ತು ಸ್ವತ್ತುಗಳ ಸಹಾಯದಿಂದ ಭಾರತೀಯ ಉಪಖಂಡವನ್ನು ಸುತ್ತುವರಿಯುವ ಚೀನಾದ ಕಾರ್ಯತಂತ್ರವು ಭಾರತದ ಕಳವಳವನ್ನು ಹೆಚ್ಚಿಸಿದೆ.

ಚೀನಾ ಪೋಣಿಸಿರುವ ಮುತ್ತುಗಳ ಸರಪಳಿಗಳು ಇಲ್ಲಿವೆ ನೋಡಿ..

ಏಷ್ಯಾದಲ್ಲಿನ ಚೀನಾದ ನೌಕಾ ನೆಲೆಗಳು:  

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿನ ಬಂದರು ಯೋಜನೆಗಳಿಗೆ ಚೀನಾ ತನ್ನ ನೌಕಾ ನೆಲೆಗಳ ಮೂಲಕ ಭಾರತವನ್ನು ಸುತ್ತುವರಿಯಲು ಹಣಕಾಸಿನ ನೆರವನ್ನು ನೀಡುತ್ತಿದೆ.

ಪಾಕಿಸ್ತಾನ: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಭಾಗವಾಗಿ ಪಾಕಿಸ್ತಾನದ ಗ್ವಾದರ್‌ನಲ್ಲಿ ಚೀನಾ ದೇಶವು ತನ್ನ ನೌಕಾ ನೆಲೆಯನ್ನು ನಿರ್ಮಿಸಿದೆ. ಯಾವುದೇ ಯುದ್ಧದಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಭಾರತವನ್ನು ಪಶ್ಚಿಮ ಭಾಗದಿಂದ ನಿಭಾಯಿಸಲು ಈ ಬಂದರು ಚೀನಾಕ್ಕೆ ಸಹಾಯ ಮಾಡುತ್ತದೆ. ಭಾರತದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಚೀನಾ ದೇಶವು ಫೈಟರ್ ಜೆಟ್‌ಗಳು, ಜಲಾಂತರ್ಗಾಮಿ ಮತ್ತು ಪರಮಾಣು ಸಹಾಯವನ್ನು ಪಾಕಿಸ್ತಾನಕ್ಕೆ ನೀಡುತ್ತಿದೆ.

ಶ್ರೀಲಂಕಾ: ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾ ಕಾರ್ಯಾಚರಣೆಯನ್ನು ಬಲಪಡಿಸಲು ಚೀನಾ ಶ್ರೀಲಂಕಾದ ಹಂಬಂಟೋಟಾ ಬಂದರನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ. ಹಂಬಂಟೋಟಾ ಬಂದರಿನ ಜೊತೆಗೆ; ಚೀನಾ ಈ ದೇಶಕ್ಕೆ ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ, ಇದರಿಂದಾಗಿ ಅಗತ್ಯವಿರುವ ಸಮಯದಲ್ಲಿ ಭಾರತದ ವಿರುದ್ಧ ತನ್ನ ಪ್ರದೇಶವನ್ನು ಬಳಸಲು ಅವಕಾಶ ನೀಡುತ್ತದೆ.

ಬಾಂಗ್ಲಾದೇಶ: ಚಿತ್ತಗಾಂಗ್ ಬಂದರಿನಲ್ಲಿ ಚೀನಾ ತನ್ನ ನೌಕಾ ನೆಲೆಯನ್ನು ಸ್ಥಾಪಿಸುವ ಮೂಲಕ ಈ ದೇಶದಲ್ಲಿಯೂ ತನ್ನ ಅಸ್ತಿತ್ವವನ್ನು ಸಾಧಿಸಿದೆ. ಪ್ರಸ್ತುತ, ಬಾಂಗ್ಲಾದೇಶ ತನ್ನ ಸ್ವಂತ ರಕ್ಷಣೆಗಾಗಿ ಚೀನಾದಿಂದ ಎರಡು ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಘೋಷಿಸಿದೆ.

ಮ್ಯಾನ್ಮಾರ್: ಭಾರತದ ವಿರುದ್ಧ ತನ್ನ ಪ್ರದೇಶವನ್ನು ಬಳಸಲು ಚೀನಾ ಈ ಭಾರತೀಯ ನೆರೆಹೊರೆಯವರೊಂದಿಗೆ ತನ್ನ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುತ್ತಿದೆ.

ಮಾಲ್ಡೀವ್ಸ್: ಈ ದೇಶವು ಭಾರತದ ಲಕ್ಷದ್ವೀಪ ದ್ವೀಪದ ಬಳಿ ಹಿಂದೂ ಮಹಾಸಾಗರದಲ್ಲಿದೆ.ಈ ದೇಶದಲ್ಲಿಯೂ ಚೀನಾ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿದೆ. ಇದರಿಂದ ಅದು ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವಕ್ಕೆ ತಡೆಯೊಡ್ಡಲು ಯೋಜನೆ ರೂಪಿಸಿದೆ.

ಸೀಶೆಲ್ಸ್: ಹಿಂದೂ ಮಹಾಸಾಗರದಲ್ಲಿ ಇರುವ ಮತ್ತೊಂದು ಸಣ್ಣ ದ್ವೀಪ ರಾಷ್ಟ್ರವು ಚೀನಾದ ಕೆಲವು ಹಣಕಾಸಿನ ನೆರವಿನ ಕಾರಣದಿಂದ ಚೀನಾ ತನ್ನ ನೌಕಾ ನೆಲೆಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು. ಭಾರತ ಮತ್ತು ಚೀನಾ ನಡುವಿನ ನೌಕಾ ಹೋರಾಟಕ್ಕೆ ಈ ದೇಶವೂ ನಿರ್ಣಾಯಕವಾಗುತ್ತದೆ.

ಆಫ್ರಿಕಾ ನೌಕಾನೆಲೆ: ಜಿಬೌಟಿಯಲ್ಲಿ ಚೀನಾ ಮೊದಲ ವಿದೇಶದಲ್ಲಿ ನೌಕಾ ನೆಲೆಯನ್ನು ಸ್ಥಾಪಿಸಿದೆ. ಸುಮಾರು 800,000 ಜನರು ವಾಸಿಸುವ ಜಿಬೌಟಿಯಲ್ಲಿ ಫೆಬ್ರವರಿ 2016 ರಲ್ಲಿ ಚೀನಾ ನೆಲೆಯನ್ನು ನಿರ್ಮಿಸಲು ಪ್ರಾರಂಭಿಸಿತು. ಜಿಬೌಟಿಯು ಭಾರತದ ಬಲಭಾಗದಲ್ಲಿರುವ ಅರಬ್ಬೀ ಸಮುದ್ರವಾಗಿದೆ.ಜಿಬೌಟಿಯು ಹಾರ್ನ್ ಆಫ್ ಆಫ್ರಿಕಾದಲ್ಲಿ ಸೂಯೆಜ್ ಕಾಲುವೆಗೆ ಹೋಗುವ ಮಾರ್ಗದಲ್ಲಿ ಕೆಂಪು ಸಮುದ್ರದ ಪ್ರವೇಶದ್ವಾರದಲ್ಲಿದೆ.

ಚೀನಾದ ಅರ್ಧದಷ್ಟು ತೈಲ ಆಮದುಗಳು ಮೆಡಿಟರೇನಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಜಿಬೌಟಿಯ ಮಂಡೆಬ್ ಜಲಸಂಧಿಯ ಮೂಲಕ ಸಾಗುತ್ತವೆ.ಇದನ್ನು ಚೀನಾ ದೇಶವು ವಿಶ್ವಸಂಸ್ಥೆಯ ಶಾಂತಿಪಾಲನೆ ಮತ್ತು ಮಾನವೀಯ ಪರಿಹಾರ ಕಾರ್ಯಾಚರಣೆಗಳನ್ನು ಬೆಂಬಲಿಸಲು ಜಿಬೌಟಿ ನೆಲೆಯನ್ನು ಬಳಸುವುದಾಗಿ ಹೇಳಿದೆ.

ಇನ್ನೊಂದೆಡೆಗೆ ಈಗಾಗಲೇ ಫ್ರಾನ್ಸ್, ಯುಎಸ್ಎ ಮತ್ತು ಜಪಾನ್ ಜಿಬೌಟಿಯಲ್ಲಿ ತಮ್ಮ ಮಿಲಿಟರಿ ನೆಲೆಯನ್ನು ಹೊಂದಿರುವ ದೇಶಗಳಾಗಿವೆ. ಚೀನಾದ ಹೊಸ ನೆಲೆಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಜಿಬೌಟಿಯಲ್ಲಿ ಯುಎಸ್ಎ ಕ್ಯಾಂಪ್ ಲೆಮೊನಿಯರ್ (ಆಫ್ರಿಕಾದಲ್ಲಿರುವ ಅಮೆರಿಕಾದ ಏಕೈಕ ಶಾಶ್ವತ ನೆಲೆ) ಅನ್ನು ಹೊಂದಿದೆ.

ಜಿಬೌಟಿ ನೆಲೆಗೆ ಚೀನಾ ವರ್ಷಕ್ಕೆ $20 ಮಿಲಿಯನ್ ಬಾಡಿಗೆಯನ್ನು ಪಾವತಿಸುತ್ತಿದೆ. ಚೀನೀ ಬ್ಯಾಂಕುಗಳು ಜಿಬೌಟಿಯಲ್ಲಿ 14 ಪ್ರಮುಖ ಯೋಜನೆಗಳಿಗೆ  $14.4 ಬಿಲಿಯನ್ ಡಾಲರ್ ನೆರವನ್ನು ನೀಡುತ್ತಿವೆ.

ಇದರ ಜೊತೆಗೆ ಚೀನಾ ದೇಶವು ದಕ್ಷಿಣ ಚೀನಾ ಸಮುದ್ರದಲ್ಲಿಯೂ ಕೂಡ ತನ್ನ ಅಸ್ತಿತ್ವವನ್ನು ಹೊಂದಿದೆ.ಈ ಭಾಗಗಳಲ್ಲಿ ಚೀನಾ ತನ್ನ ಸೇನಾ ನೆಲೆಯನ್ನು ಹೊಂದಿರುವುದರಿಂದ ಭಾರತಕ್ಕೆ ಇದು ನಿಜಕ್ಕೂ ಸವಾಲಾಗಿ ಪರಿಣಮಿಸಿದೆ.ಚೀನಾ ದೇಶವು ತನ್ನ ಮುತ್ತುಗಳ ಸರಪಳಿ ಯೋಜನೆ ಮೂಲಕ ಏಷ್ಯಾದ ದೇಶಗಳ ಮೇಲೆ ಪ್ರಾಬಲ್ಯವನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ಅದು ಜಗತ್ತಿನಲ್ಲಿಯೇ ಸೂಪರ್ ಪವರ್ ರಾಷ್ಟ್ರವಾಗಿ ಬೆಳೆಯುವುದು ಅದರ ಪ್ರಮುಖ ಉದ್ದೇಶವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

 

 

               

 

 

Trending News