ಇಸ್ರೇಲ್ ನಿಂದ ಸಿರಿಯಾ ಮೇಲೆ ವಾಯುದಾಳಿ

      

Last Updated : Jan 9, 2018, 04:26 PM IST
ಇಸ್ರೇಲ್ ನಿಂದ ಸಿರಿಯಾ ಮೇಲೆ ವಾಯುದಾಳಿ  title=

ಡಮಾಸ್ಕಸ್: ಇಸ್ರೇಲಿ ಸೇನೆಯು ರಾತ್ರಿ ಸಿರಿಯಾದ ಮೇಲೆ ವಾಯುದಾಳಿಗಳನ್ನು ನಡೆಸಿತು. ಇದರಿಂದ "ಮಿಲಿಟರಿ ಸ್ಥಾನ"ದ ಬಳಿ ಹಾನಿ ಉಂಟಾಗಿದೆ ಎಂದು ಸಿರಿಯನ್ ಸೇನೆಯು ತಿಳಿಸಿದೆ.

ಇಸ್ರೇಲಿ ವಾಯುಪಡೆಯು ಡಮಾಸ್ಕಸ್ನ ಈಶಾನ್ಯದ ಕುತೈಫೆ ಪ್ರದೇಶದ ಮೇಲೆ ಮಿಲಿಟರಿ ಸ್ಥಾನದ ಹತ್ತಿರ ಸಿರಿಯಾದ ಸೈನ್ಯವನ್ನು ಹಿಮ್ಮೆಟ್ಟಿಸಲು ದಾಳಿಗಳನ್ನು ನಡೆಸಿತು, ಈ ಸಂಧರ್ಭದಲ್ಲಿ  ವಿಮಾನವೊಂದನ್ನು ನಾಶಪಡಿಸಿದೆ ಎಂದು ಸೈನ್ಯ ಹೇಳಿದೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ನಿಂದ ಇಸ್ರೇಲ್ ಭೂಮಿ-ಭೂಮಿ ಕ್ಷಿಪಣಿಗಳನ್ನು ಸಿರಿಯಾದ ಮೇಲೆ ಪ್ರಯೋಗ  ಮಾಡಿತು, ಆದರೆ ಸಿರಿಯನ್ ಸೈನ್ಯವು ಅವರನ್ನು ತಡೆಹಿಡಿಯಿತು ಎಂದು ಅದು ಹೇಳಿದೆ.

2011 ರಲ್ಲಿ ಸಿರಿಯಾದಲ್ಲಿನ ಸಂಘರ್ಷದ ಪ್ರಾರಂಭದಿಂದ ಇಸ್ರೇಲ್ ಸೇನೆಯು ಸಿರಿಯನ್ ಸೈನ್ಯ ಮತ್ತು ಅದರ ಮಿತ್ರ ಲೆಬನೀಸ್ ಶಿಯೆಟ್ ಹೆಜ್ಬೊಲ್ಲಾಹ್ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ.ಇಸ್ರೇಲ್ 1967 ರ ಆರು ದಿನಗಳ ಯುದ್ಧದಲ್ಲಿ ಸಿರಿಯಾದಿಂದ ಗೋಲನ್ ಹೈಟ್ಸ್ನ 1,200 ಚದರ ಕಿಲೋಮೀಟರ್ (460 ಚದರ ಮೈಲುಗಳು) ವಶಪಡಿಸಿಕೊಂಡಿತು.

ಸಿರಿಯಾ ಮತ್ತು ಇಸ್ರೇಲ್ ಯುದ್ಧದಲ್ಲಿ ತಾಂತ್ರಿಕವಾಗಿಯೇ ಉಳಿದಿವೆ, ಮತ್ತು 2006 ರಲ್ಲಿ ಹೆಝ್ಬೊಲ್ಲಾಹ್ ವಿರುದ್ಧ ಯೆಹೂದಿ ರಾಜ್ಯವು ವಿನಾಶಕಾರಿ ಯುದ್ಧವನ್ನು ಎದುರಿಸಿತು.

Trending News