ನವದೆಹಲಿ : ಅಮೆರಿಕ ಅಧ್ಯಕ್ಷರಾಗಿ ಬೈಡನ್ (Jeo Biden) ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ನಿಮಗೆ ಹೇಳುತ್ತೇವೆ. ಜೊ ಬೈಡನ್ ಈಗಾಗಲೇ ತಮ್ಮ ಟೀಂ ರೂಪಿಸಿದ್ದಾರೆ. ಅವರ ಟೀಂನಲ್ಲಿ 20 ಭಾರತೀಯರಿದ್ದಾರೆ.
ನಿಮಗೆ ಗೊತ್ತಿರಬಹುದು. ಅಮೆರಿಕಾ ಉಪಾಧ್ಯಕ್ಷೆ ಕಮಲ ಹ್ಯಾರಿಸ್ (Kamala Harris) ಅವರ ಮೂಲ ತಮಿಳುನಾಡು. ಕಮಲಾ ಹ್ಯಾರಿಸ್ ಅವರನ್ನು ಹೊರತುಪಡಿಸಿ, 20 ಇತರ ಭಾರತೀಯರು ವಿವಿಧ ಟೀಂ ಗಳಲ್ಲಿ ಅಮೆರಿಕವನ್ನು (America) ಮುನ್ನಡೆಸಲಿದ್ದಾರೆ. ಇದೇ ಭಾರತೀಯರಿಗೆ ಹೆಮ್ಮೆಯ ಸಂಗತಿ. ಬೈಡೆನ್ ಟೀಂನಲ್ಲಿರುವ ಭಾರತೀಯ ಮೂಲದ ಅಮೇರಿಕನ್ನರ ವಿವರ ಇಲ್ಲಿದೆ.
ಇದನ್ನೂಓದಿ : ಅಮೆರಿಕದ 46 ನೇ ಅಧ್ಯಕ್ಷರಾಗಿ Joe Biden ಪ್ರಮಾಣ ವಚನ
ಬೈಡೆನ್ ಟೀಂನಲ್ಲಿ ಭಾರತೀಯರು:
1. ನೀರಾ ಟಾಂಡೆನ್ : ನಿರ್ದೇಶಕರು, ಶ್ವೇತಭವನದ (White House) ನಿರ್ವಹಣೆ ಮತ್ತು ಬಜೆಟ್
2. ಡಾ. ವಿವೇಕ್ ಮೂರ್ತಿ : ಅಮೆರಿಕದ ಸರ್ಜನ್ ಜನರಲ್
3. ವನಿತಾ ಗುಪ್ತಾ : ಅಸೋಸಿಯೇಟ್ ಅಟಾರ್ನಿ ಜನರಲ್, ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್
4. ಉಝ್ರಾ ಝೇರಾ : ಪ್ರಜಾಪ್ರಭುತ್ವ ಮತ್ತು ಮಾನವಹಕ್ಕು ವಿಭಾಗದ ಅಧೀನ ಕಾರ್ಯದರ್ಶಿ
5. ಮಾಲಾ ಅಡಿಗ : ಜಿಲ್ ಬೈಡನ್ ಅವರ ನೀತಿ ನಿರೂಪಣಾ ನಿರ್ದೇಶಕಿ
6. ಅಶಿಶ್ ಶಾ : ಶ್ವೇತಭವನ ಕಚೇರಿಯ ಡಿಜಿಟಲ್ ವಿಭಾಗದ ಪಾರ್ಟನರ್ ಶಿಪ್ ಮ್ಯಾನೇಜರ್
7.ಗೌತಮ್ ರಾಘವನ್ : ಅಧ್ಯಕ್ಷರ ಸಿಬ್ಬಂದಿ ವಿಭಾಗದ ಉಪನಿರ್ದೇಶಕ
8. ಸಮೀರಾ ಫಝಿಲ್ಲಿ : ಅಮೆರಿಕ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪನಿರ್ದೇಶಕ
9. ಭರತ್ ರಾಮಮೂರ್ತಿ : ಅಮೆರಿಕ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪನಿರ್ದೇಶಕ
10. ವಿನಯ್ ರೆಡ್ಡಿ : ಅಧ್ಯಕ್ಷರ (President) ಭಾಷಣ ಬರೆಯುವ ವಿಭಾಗದ ನಿರ್ದೇಶಕ
11. ತರುಣ್ ಛಬ್ರಾ : ಶ್ವೇತ ಭವನದ ರಾಷ್ರೀಯ ಸುರಕ್ಷಾ ಮಂಡಳಿ, ತಂತ್ರಜ್ಞಾನ ವಿಭಾಗದ ಹಿರಿಯ ನಿರ್ದೇಶಕ
12. ಸುಮೊನಾ ಗುಹಾ : ಶ್ವೇತ ಭವನದ ರಾಷ್ಟ್ರೀಯ ಸುರಕ್ಷಾ ಮಂಡಳಿಯ ದಕ್ಷಿಣ ಏಷ್ಯಾ ವಿಚಾರಗಳ ಹಿರಿಯ ನಿರ್ದೇಶಕರು
13. ಸಬ್ರಿನಾ ಸಿಂಗ್ : ಅಮೆರಿಕಾ ಉಪಾಧ್ಯಕ್ಷರ ವಾರ್ತಾ ವಿಭಾಗದ ಡೆಪ್ಯೂಟಿ ಪ್ರೆಸ್ ಸೆಕ್ರೆಟರಿ
14. ವೇದಾಂತ್ ಪಟೇಲ್ : ಅಮೆರಿಕ ಅಧ್ಯಕ್ಷರ ಸಹಾಯಕ ಪ್ರೆಸ್ ಸೆಕ್ರೆಟರಿ
15. ಶಾಂತಿಕಲಾತಿಲ್ : ರಾಷ್ಟ್ರೀಯ ಸುರಕ್ಷಾ ಮಂಡಳಿಯ ಪ್ರಜಾಪ್ರಭುತ್ವ, ಮಾನವಹಕ್ಕು (Human Rights) ಅಧಿಕಾರ ವಿಭಾಗದ ಸಂಯೋಜಕಿ
16. ಘರಿಮಾ ವರ್ಮಾ : ಜಿಲ್ ಬೈಡನ್ ಕಚೇರಿಯ ಡಿಜಿಟಲ್ ಡೈರೆಕ್ಟರ್
17. ಸೋನಿಯಾ ಅಗರ್ವಾಲ್ : ಪರಿಸರ ಬದಲಾವಣೆ, ಇನ್ನೋವೇಶನ್ ವಿಭಾಗದ ಹಿರಿಯ ಸಲಹೆಗಾರ್ತಿ
18. ನೇಹಾ ಗುಪ್ತಾ : ಶ್ವೇತ ಭವನ ಮಂಡಳಿಯ ಅಸೋಶಿಯೇಟ್ ಕೌನ್ಸೆಲ್
19. ರೀಮಾ ಶಾ : ಶ್ವೇತ ಭವನ ಮಂಡಳಿಯ ಡೆಪ್ಯೂಟಿ ಅಸೋಶಿಯೇಟ್ ಕೌನ್ಸೆಲ್
20. ವಿಧುರ್ ಶರ್ಮಾ : ಶ್ವೇತ ಭವನದ ಕೊವಿಡ್ 19 (COVID19)ಟೀಂನ ನೀತಿ ಸಲಹೆಗಾರ
ಇದನ್ನೂಓದಿ : Joe Biden ಪದಗ್ರಹಣದ ದಿನವೇ ಭೂಮಿಯೆಡೆಗೆ ಬರುತ್ತಿವೆ ಈ ಅತಿಥಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.