ಮ್ಯಾನ್ಮಾರ್: ಮ್ಯಾನ್ಮಾರ್ ನಲ್ಲಿ ಭೀಕರ ದುರ್ಘಟನೆಯೊಂದು ಸಂಭವಿಸಿದೆ. ಹೌದು, ಇಲ್ಲಿನ ಜೆಡ್ ಮೇನ್ ನಲ್ಲಿ ಉಂಟಾಗಿರುವ ಭೂಕುಸಿತದಿಂದ 100 ಕ್ಕೂ ಅಧಿಕ ಜನರು ದುರ್ಮರಣ ಹೊಂದಿದ್ದಾರೆ. ಉತ್ತರ ಮ್ಯಾನ್ಮಾರ್ ನಲ್ಲಿ ಉಂಟಾಗಿರುವ ಈ ಭೂಕುಸಿತದ ನಂತರ ಗುರುವಾರ ಸಂಭವಿಸಿರುವ ಭೂಕುಸಿತದಲ್ಲಿ ಕನಿಷ್ಠ 100 ಮ್ಯಾನ್ಮಾರ್ ಗಣಿಗಾರರ ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ.
ಈ ಕುರಿತು ಮಾಹಿತಿ ನೀಡದಿರುವ ಸುದ್ದಿ ಸಂಸ್ಥೆಯೊಂದು, ಕಚಿನ್ ರಾಜ್ಯದಲ್ಲಿ ಚೀನಾ ಗಡಿ ಭಾಗದ ಹತ್ತಿರ ಭಾರಿ ಮಳೆಯ ಬಳಿಕ ನಡೆದ ದುರ್ಘಟನೆಯ ನಂತರ ಮ್ಯಾನ್ಮಾರ್ ಫೈರ್ ಸರ್ವಿಸ್ ವಿಭಾಗ, ಫೇಸ್ ಬುಕ್ ಪೋಸ್ಟ್ ವೊಂದನ್ನು ಹಂಚಿಕೊಂಡು ಕಚಿನ್ ರಾಜ್ಯದ ಜೆಡಿಯಿಂದ ಸಮೃದ್ಧ ಕ್ಷೇತ್ರವಾಗಿರುವ ಹಾಪಕಾಂತ ಕ್ಷೇತ್ರದಲ್ಲಿ ಕಾರ್ಮಿಕರು ಕಲ್ಲು ಸಂಗ್ರಹಿಸುವಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿನ ಒಂದು ಗಣಿ ಕುಸಿದು ಬಿದ್ದಿದ್ದರಿಂದ ಭೂಸ್ಖಲನ ಉಂಟಾಗಿದೆ. ಈ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, ಇದುವರೆಗೆ ಸುಮಾರು 113 ಶವಗಳನ್ನು ಹೊರತೆಗೆಯಲಾಗಿದೆ.
ಘಟನೆಯ ಕುರಿತು ಹೇಳಿಕೆ ನೀಡಿರುವ ರಕ್ಷಣಾ ತಂಡದ ಸದಸ್ಯರು, ಆ ಪ್ರದೇಶದಲ್ಲಿ ಭಾರಿ ಮಳೆಯಾದ ಕಾರಣ ಮಣ್ಣಿನ ಕೆಸರಿನ ಒಂದು ದೊಡ್ಡ ಪ್ರಮಾಣದ ಅಲೆಯೇ ಸೃಷ್ಟಿಯಾಗಿ, ಕೆಳಗೆ ಕಲ್ಲು ಸಂಗ್ರಹಣೆಯಲ್ಲಿ ತೊಡಗಿದ್ದ ಕಾರ್ಯ್ಮಿಕರ ಮೇಲೆ ಕುಸಿದಿದೆ. ಇದರಿಂದ ಜನರು ಕೆಸರಿನಡಿ ಸಿಲುಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಹಪಕಾಂತ್ ಕ್ಷೇತ್ರದಲ್ಲಿ ಕಳಪೆ ನಿಯಂತ್ರಿತ ಗಣಿಗಳಲ್ಲಿ ಮಾರಣಾಂತಿಕ ಭೂಕುಸಿತ ಹಾಗೂ ಇತರೆ ಇಂತಹ ಘಟನೆಗಳು ಸಾಮಾನ್ಯ ಎಂದು ಅವರು ಹೇಳುತ್ತಾರೆ.
ಈ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ 38 ವರ್ಷದ ಮೂನ್ ಖಿಂಗ್ ಹೇಳುವ ಪ್ರಕಾರ, ಅವರು ಕುಸಿತದ ಸ್ಥಿತಿಯಲ್ಲಿರುವ ಒಂದು ಕೆಸರಿನ ದೊಡ್ಡ ರಾಶಿಯನ್ನೇ ಗಮನಿಸಿರುವುದಾಗಿ ಹೇಳಿದ್ದಾರೆ. ತಾವು ಇದರ ಫೋಟೋ ಕ್ಲಿಕ್ಕಿಸಲು ಮುಂದಾದಾಗ, ಜನರು ಕಿರುಚಾಡುತ್ತ ಓಡಲಾರಂಭಿಸಿದರು ಹಾಗೂ ಕೇವಲ ನಿಮಿಷಾಂತರದಲ್ಲಿ ಎಲ್ಲರು ಆ ಕೆಸರಿನ ರಾಶಿಯ ಕೆಳಗೆ ಸಿಲುಕಿಕೊಂಡರು. ಕೆಸರಿನ ಅಡಿ ಸಿಲುಕಿದ ಜನರು ರಕ್ಷಣೆಗಾಗಿ ಕೇಳಿಕೊಳ್ಳುತ್ತಿದ್ದರು. ಆದರೆ, ಯಾರೂ ಕೂಡ ಅವರನ್ನು ರಕ್ಷಿಸುವ ಸ್ಥಿತಿಯಲ್ಲಿ ಇರಲಿಲ್ಲ
ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದು, ಇನ್ನೂ ಹಲವು ಜನರು ಕೆಸರಿನ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಭಾರಿ ಮಳೆ ಇರುವ ಕಾರಣ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.