ನವದೆಹಲಿ: ಗೂಗಲ್ ಸರ್ಚ್ ಎಂಜೀನ್ ಈಗ ಮೊಬೈಲ್ನಲ್ಲಿ ಜೀಮೇಲ್ ಫಿಚರ್ ವೊಂದನ್ನು ಅಳವಡಿಸಿದೆ.ಈ ಫಿಚರ್ ಈಗ ನಿಮಗೆ ಇಮೇಲ್ ಓಪನ್ ಮಾಡಲು ಇನ್ನು ಸುಲಭ ಮಾಡುತ್ತದೆ.
ಗೂಗಲ್ ತಿಳಿಸಿರುವಂತೆ " ಈ ನೂತನ ವಿನ್ಯಾಸದ ಭಾಗವಾಗಿ ಇನ್ನು ಮುಂದೆ ಯಾವುದೇ ಡಾಕುಮೆಂಟ್ ಗಳನ್ನು ತೆರೆಯಲು ಹಾಗೂ ಸ್ಕ್ರೋಲ್ ಮಾಡದೆ ಇವುಗಳನ್ನು ಬಳಸಲು ಸುಲಭವಾಗುತ್ತದೆ.ಅಲ್ಲದೆ ನಿಮ್ಮ ವರ್ಕಿಂಗ್ ಖಾತೆ ಮತ್ತು ವೈಯಕ್ತಿಕ ಖಾತೆಗೆ ಶಿಫ್ಟ್ ಆಗಲು ಇದು ಸುಲಭವಾಗುತ್ತದೆ.
ಒಂದು ವೇಳೆ ಯಾವುದೇ ಬೇಡದ ಲಿಂಕ್ ಇದ್ದಲ್ಲಿ ಆಗ ರೆಡ್ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ.ಜೀ ಸೂಟ್ ಮೊಬೈಲ್ ವಿನ್ಯಾಸಕ್ಕೆ ಅನುಗುಣವಾಗಿ ಇನ್ನು ಮುಂದೆ ಗೂಗಲ್ ಉತ್ಪನ್ನಗಳು ಅಪ್ಡೇಟ್ ಆಗಲಿವೆ.ಇನ್ನೂ ಜೀ ಮೇಲ್ ನಲ್ಲಿ ವೇಗವಾಗಿ ರೀಪ್ಲೆ ಮಾಡಲು ಈ ಮೂಲಕ ಸಾಧ್ಯವಾಗುತ್ತದೆ.ಒಟ್ಟಿನಲ್ಲಿ ಏನೇ ಆಗಲಿ ಈಗ ಗೂಗಲ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುತ್ತಿರುವುದು ನಿಜಕ್ಕೂ ಎಲ್ಲರನ್ನು ಸಂತಸಗೊಳಿಸಿದೆ ಎನ್ನಬಹುದು.