ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್‌ನಲ್ಲಿ ಸ್ಫೋಟ; ಎಂಟು ಮಂದಿ ಸಾವು

ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಬ್ಲಾಸ್ಟ್ ನಲ್ಲಿ ಸಾವನ್ನಪ್ಪಿದ್ದಾರೆ.

Updated: Nov 4, 2019 , 04:21 PM IST
ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್‌ನಲ್ಲಿ ಸ್ಫೋಟ; ಎಂಟು ಮಂದಿ ಸಾವು
ಸಾಂದರ್ಭಿಕ ಚಿತ್ರ (Photo Courtesy: ANI)

ಬಾಗ್ಲಾನ್ [ಅಫ್ಘಾನಿಸ್ತಾನ]: ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್ ಪ್ರಾಂತ್ಯದಲ್ಲಿ ಸೋಮವಾರ ರಸ್ತೆಬದಿಯ ಗಣಿ ಸ್ಫೋಟದಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ, "ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಬ್ಲಾಸ್ಟ್ ನಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇತರ ಆರು ನಾಗರಿಕರು ಸೇರಿದಂತೆ ಹಲವು ಮಕ್ಕಳು ಗಾಯಗೊಂಡಿದ್ದಾರೆ" ಎಂದು ಟೋಲೊ ನ್ಯೂಸ್ ಉಲ್ಲೇಖಿಸಿದೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ

ಬಾಗ್ಲಾನ್ ಪ್ರಾಂತ್ಯದ ದಾಂಡ್-ಎ-ಶಹಾಬುದ್ದೀನ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಂತೀಯ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಗುಂಪು ಈ ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ.