International Mother Language Day: ಇಂದು ವಿಶ್ವ ಮಾತೃಭಾಷಾ ದಿನ! ಈ ದಿನ ಆಚರಿಸುವ ಪ್ರಕ್ರಿಯೆ ಆರಂಭವಾದದ್ದು ಹೀಗೆ

International Mother Language Day: ಫೆಬ್ರವರಿ 21 ಬಾಂಗ್ಲಾ ಭಾಷೆಯ ಮಾನ್ಯತೆಗಾಗಿ ಬಾಂಗ್ಲಾದೇಶದ ಜನರು ಹೋರಾಡಿದ ದಿನದ ವಾರ್ಷಿಕೋತ್ಸವವನ್ನು ವಿಶ್ವ ಮಾತೃಭಾಷಾ ದಿನ ಎಂದು ಆಚರಿಸಲಾಗುತ್ತದೆ. 

Written by - Ranjitha R K | Last Updated : Feb 21, 2023, 03:27 PM IST
  • ಪ್ರತಿ ವರ್ಷ ಇಂದು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ.
  • ಫೆಬ್ರವರಿ 21 ಅನ್ನು ವಿಶ್ವ ಮಾತೃಭಾಷಾ ದಿನ ಆಚರಣೆ
  • ವಿಶ್ವ ಮಾತೃಭಾಷಾ ದಿನದ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ.
International Mother Language Day: ಇಂದು ವಿಶ್ವ ಮಾತೃಭಾಷಾ ದಿನ! ಈ ದಿನ ಆಚರಿಸುವ ಪ್ರಕ್ರಿಯೆ  ಆರಂಭವಾದದ್ದು ಹೀಗೆ  title=

ನವದೆಹಲಿ : ಪ್ರತಿ ವರ್ಷ ಇಂದು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. 1999 ರಲ್ಲಿ, ಯುನೆಸ್ಕೋ ಫೆಬ್ರವರಿ 21 ಅನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಘೋಷಿಸಿತು.ಮೊದಲು ಬಾಂಗ್ಲಾ ದೇಶದಲ್ಲಿ ಈ ದಿನವನ್ನು ಆಚರಿಸಲಾಯಿತು. ನಂತರ 2000 ನೇ ಇಸವಿಯಿಂದ ಇಡೀ ಜಗತ್ತು ಮಾತೃಭಾಷಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಮಾತೃಭಾಷೆಯ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡಿದ್ದರು. 'ಮನ್ ಕಿ ಬಾತ್' ನ 86ನೇ ಸಂಚಿಕೆಯಲ್ಲಿ, ತಾಯಿ ಮತ್ತು ಮಾತೃಭಾಷೆ ನಮ್ಮ  ಜೀವನವನ್ನು ಬಲಪಡಿಸುತ್ತದೆ ಎನ್ನುವುದುಂನು ವಿವರಿಸಿದ್ದರು. ಯಾವ ಮನುಷ್ಯನೂ ತನ್ನ ತಾಯಿ ಮತ್ತು ಮಾತೃಭಾಷೆಯನ್ನು ಬಿಡಲು ಸಾಧ್ಯವಿಲ್ಲ. ಒಂದು ವೇಳೆ ಬಿಟ್ಟರೆ ಜೀವನದಲ್ಲಿ ಪ್ರಗತಿ ಸಾಧ್ಯವಿಲ್ಲ ಎಂದಿದ್ದರು. 

ವಿಶ್ವ ಮಾತೃಭಾಷಾ ದಿನದ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ. ಬಾಂಗ್ಲಾದೇಶದಲ್ಲಿ, ಫೆಬ್ರವರಿ 21 ಬಾಂಗ್ಲಾ ಭಾಷೆಯ ಮಾನ್ಯತೆಗಾಗಿ ಬಾಂಗ್ಲಾದೇಶದ ಜನರು ಹೋರಾಡಿದ ದಿನದ ವಾರ್ಷಿಕೋತ್ಸವವನ್ನು ವಿಶ್ವ ಮಾತೃಭಾಷಾ ದಿನ ಎಂದು ಆಚರಿಸಲಾಗುತ್ತದೆ. ಆಗ ಅದು ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶ ಆಗಿರಲಿಲ್ಲ. 1947 ರಲ್ಲಿ ಪಾಕಿಸ್ತಾನವನ್ನು ರಚಿಸಿದಾಗ, ಭೌಗೋಳಿಕವಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಪೂರ್ವ ಪಾಕಿಸ್ತಾನವು ನಂತರ ಬಾಂಗ್ಲಾದೇಶವಾಯಿತು. ಈ ಎರಡು ಭಾಗಗಳು ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಸಂಪೂರ್ಣವಾಗಿ ವಿಭಿನ್ನವಾಗಿವೆ. 

ಇದನ್ನೂ ಓದಿ : ಪ್ರಪಂಚದ ವಿನಾಶಕ್ಕೆ ಡೆಡ್ಲಿ ಡೇಟ್ ಫಿಕ್ಸ್​ : ವಿಜ್ಞಾನಿಗಳಿಂದ ಸಿಕ್ಕಿದೆ ವಿಶ್ವ ವಿನಾಶದ ಸ್ಫೋಟಕ ರಹಸ್ಯ..!

1948 ರಲ್ಲಿ, ಪಾಕಿಸ್ತಾನ ಸರ್ಕಾರವು ಉರ್ದುವನ್ನು ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಎಂದು ಘೋಷಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಪೂರ್ವ ಪಾಕಿಸ್ತಾನದ ಹೆಚ್ಚಿನ ಜನರು ಬಂಗಾಳಿ ಮಾತನಾಡುತ್ತಿದ್ದರು. ಬಂಗಾಳಿ ಮಾತೃಭಾಷೆಯಾದ ಕಾರಣ ಪೂರ್ವ ಪಾಕಿಸ್ತಾನದ ಜನರು ಇದನ್ನು ಪ್ರತಿಭಟಿಸಿದರು. ಉರ್ದು ಹೊರತು ಪಡಿಸಿ ಬಾಂಗ್ಲಾಗೆ ಕನಿಷ್ಠ ರಾಷ್ಟ್ರಭಾಷೆಯ ಸ್ಥಾನಮಾನ ಸಿಗಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಮೊದಲು ಧೀರೇಂದ್ರನಾಥ್ ದತ್ ಅವರು 23 ಫೆಬ್ರವರಿ 1948 ರಂದು ಎತ್ತಿದರು.

ಪಾಕಿಸ್ತಾನ ಸರ್ಕಾರವು ಈ ಪ್ರತಿಭಟನೆಯನ್ನು ತೀವ್ರವಾಗಿ ಹತ್ತಿಕ್ಕಲು ಪ್ರಯತ್ನಿಸಿತು. ಫೆಬ್ರವರಿ 21, 1952 ರಂದು, ಅದರ ಬೇಡಿಕೆಯನ್ನು ಬೆಂಬಲಿಸಲು ಆಯೋಜಿಸಲಾದ  ರ‍್ಯಾಲಿಯ ಮೇಲೆ ಪೊಲೀಸರು ಬಹಿರಂಗವಾಗಿ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಅನೇಕ ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಮಾತೃಭಾಷೆಗಾಗಿ ಜನರು ಪ್ರಾಣ ಕಳೆದುಕೊಂಡದ್ದು ಇತಿಹಾಸದಲ್ಲಿ ಹಿಂದೆಂದೂ ಅಪರೂಪ. ಬಾಂಗ್ಲಾದೇಶೀಯರ ಪರವಾಗಿ ಭಾಷಾ ಚಳವಳಿಗೆ ಗೌರವ ಸಲ್ಲಿಸುವ ಸಲುವಾಗಿ ಯುನೆಸ್ಕೋ ವಿಶ್ವ ಮಾತೃಭಾಷಾ ದಿನವನ್ನು ಘೋಷಿಸಿತ್ತು. 

ಇದನ್ನೂ ಓದಿ :  Israel attack on Syrian :ಸಿರಿಯಾ ರಾಜಧಾನಿ ಡಮಾಸ್ಕಸ್‌ ಮೇಲೆ ಇಸ್ರೇಲ್ ದಾಳಿ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News