close

News WrapGet Handpicked Stories from our editors directly to your mailbox

ಅಮೇರಿಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ- ಭಾರತದ ವಿರುದ್ಧ ಮತ್ತೆ ಟ್ರಂಪ್ ತಗಾದೆ

ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಸುಂಕದ ವಿಷಯವಾಗಿ ಮತ್ತೆ ತಗಾದೆ ತೆಗೆದಿದ್ದಾರೆ.

Updated: Jul 9, 2019 , 07:24 PM IST
ಅಮೇರಿಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ- ಭಾರತದ ವಿರುದ್ಧ ಮತ್ತೆ ಟ್ರಂಪ್ ತಗಾದೆ

ನವದೆಹಲಿ: ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಸುಂಕದ ವಿಷಯವಾಗಿ ಮತ್ತೆ ತಗಾದೆ ತೆಗೆದಿದ್ದಾರೆ. ಈಗ ಟ್ವೀಟ್ ಮಾಡಿರುವ ಡೊನಾಲ್ಡ್  ಟ್ರಂಪ್ "ಭಾರತವು ಅಮೆರಿಕಾದ ಉತ್ಪನ್ನಗಳಿಗೆ ತೆರಿಗೆಯನ್ನು ವಿಧಿಸುತ್ತಿದೆ. ಇದು ಇನ್ನು ಸ್ವೀಕಾರಾರ್ಹವಲ್ಲ! ”ಎಂದು ಟ್ವೀಟ್ ಮಾಡಿದ್ದಾರೆ.

ಒಸಾಕಾದಲ್ಲಿ ನಡೆದ ಜಿ 20 ಶೃಂಗಸಭೆಯ ಮುನ್ನಾ ದಿನದಂದು ಮೋದಿಯವರನ್ನು ಭೇಟಿಯಾಗುವ ಮುನ್ನ ಟ್ರಂಪ್  ಅಮೆರಿಕಾದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ವಿಚಾರಕ್ಕೆ ತಮ್ಮ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದರು. 

"ಭಾರತವು ಹಲವಾರು ವರ್ಷಗಳಿಂದ ಅಮೇರಿಕಾದ ಮೇಲೆ  ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದೆ, ಇತ್ತೀಚೆಗೆ ಸುಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇದರ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ.ಇದು ಸ್ವೀಕಾರಾರ್ಹವಲ್ಲ ಮತ್ತು ಸುಂಕವನ್ನು ಹಿಂಪಡೆಯಬೇಕು ”ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.