ನವದೆಹಲಿ: 2020 ರ ಭಾರತೀಯ ಅಮೆರಿಕನ್ ವರ್ತನೆ ಸಮೀಕ್ಷೆ (ಐಎಎಎಸ್) ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 70 ಷ್ಟು ನೋಂದಾಯಿತ ಭಾರತೀಯ ಅಮೆರಿಕನ್ ಮತದಾರರು ಜೋ ಬಿಡನ್ಗೆ ಮತ ಚಲಾಯಿಸಲು ಯೋಜಿಸಿದ್ದಾರೆ ಮತ್ತು ಉಳಿದವರಲ್ಲಿ ಕೇವಲ 22 ಶೇಕಡಾ ಮಾತ್ರ ಡೊನಾಲ್ಡ್ ಟ್ರಂಪ್ಗೆ ಮತ ಚಲಾಯಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಗೆ ಮತ ಚಲಾಯಿಸಿ- ಗ್ರೇಟಾ ಥನ್ಬರ್ಗ್
ಸೆಪ್ಟೆಂಬರ್ ಮೊದಲ 20 ದಿನಗಳಲ್ಲಿ ಆನ್ಲೈನ್ನಲ್ಲಿ ಸಮೀಕ್ಷೆ ನಡೆಸಿದ 936 ಭಾರತೀಯ ಅಮೆರಿಕನ್ನರ ಪ್ರತಿಕ್ರಿಯೆಗಳ ಆಧಾರದ ಮೇಲೆ ಶೇ 56 ರಷ್ಟು ಜನರು ತಾವು ಡೆಮಾಕ್ರೆಟಿಕ್ ಎಂದು ಗುರುತಿಸಿಕೊಂಡಿದ್ದರೆ, ಕೇವಲ ಶೇ 15 ರಷ್ಟು ಜನರು ತಮ್ಮನ್ನು ರಿಪಬ್ಲಿಕನ್ ಎಂದು ಹೇಳಿಕೊಂಡಿದ್ದಾರೆ.
ದಲೈ ಲಾಮಾ ಅವರನ್ನು ಭೇಟಿಯಾಗುವುದಾಗಿ ಹೇಳಿದ ಡೆಮೋಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್
ಸಮೀಕ್ಷೆಯ ಪ್ರಕಾರ, ಯುಎಸ್-ಇಂಡಿಯಾ ಸಂಬಂಧಗಳನ್ನು ನಿರ್ವಹಿಸುವಲ್ಲಿ ಡೆಮೋಕ್ರಾಟ್ಗಳು ಉತ್ತಮ ಕೆಲಸ ಮಾಡುತ್ತಾರೆ ಎಂದು ಹೆಚ್ಚಿನ ಭಾರತೀಯ ಅಮೆರಿಕನ್ನರು ನಂಬಿದ್ದಾರೆ. ಅಷ್ಟೇ ಅಲ್ಲದೆ ಉಪಾಧ್ಯಕ್ಷ ಹುದ್ದೆಗೆ ಡೆಮೋಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಮೊದಲ ಕಪ್ಪು ಮಹಿಳೆ ಮತ್ತು ಭಾರತೀಯ ಮತ್ತು ಆಫ್ರಿಕನ್ ಮೂಲದ ಅಮೆರಿಕನ್ ಸೆನೆಟರ್ ಕಮಲಾ ಹ್ಯಾರಿಸ್ ಕಾರಣದಿಂದಾಗಿ ಬಹುತೇಕ ಭಾರತೀಯ ಅಮೇರಿಕನ್ ರು ಡೆಮೋಕ್ರಾಟಿಕ್ ಪರವಾಗಿ ಮತವನ್ನು ಚಲಾಯಿಸಲಿದ್ದಾರೆ ಎನ್ನಲಾಗಿದೆ.
2020 ರ ಅಮೆರಿಕಾದ ಅಧ್ಯಕ್ಷ ಹುದ್ದೆ ಸ್ಪರ್ಧೆಗೆ ಮಾಜಿ ಉಪಾಧ್ಯಕ್ಷ ಜೋಯ್ ಬಿಡನ್
ಆಗಸ್ಟ್ನಲ್ಲಿ, ಕ್ಯಾಲಿಫೋರ್ನಿಯಾದ ಜೂನಿಯರ್ ಸೆನೆಟರ್ ಹ್ಯಾರಿಸ್ ತನ್ನ ತಾಯಿ (ಶ್ಯಾಮಲಾ ಗೋಪಾಲನ್) ಬಗ್ಗೆ ಮಾತನಾಡಿದ ನಂತರ ಮತ್ತು ಇಡ್ಲಿ ಮತ್ತು ಮಸಾಲಾ ದೋಸೆಗಳ ಬಗ್ಗೆ ಅವರ ಒಲವನ್ನು ಪ್ರಸ್ತಾಪಿಸಿದ ನಂತರ ಭಾರತದಾದ್ಯಂತ ಸುದ್ದಿ ಮಾಡಿದ್ದರು.