Viral Video: Dairy Plantನಲ್ಲಿ ಹಾಲಿನ ಟಬ್ ನಲ್ಲಿ ಸ್ನಾನ ಮಾಡಿದ ಭೂಪ, ಮುಂದೇನಾಯ್ತು ನೀವೇ ನೋಡಿ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾಲಿನ ಟ್ಯಾಬ್ ನಲ್ಲಿ ಸ್ನಾನ ಮಾಡುತ್ತಿದ್ದಾನೆ. ಈ ವಿಡಿಯೋ ತುರ್ಕಿಯ ಡೇರಿ ಪ್ಲಾಂಟ್ ವೊಂದರಿಂದ ಹೊರಬಂದಿದೆ.

Last Updated : Nov 10, 2020, 06:10 PM IST
  • ಇಂಟರ್ನೆಟ್ ನಲ್ಲಿ ಹಾಲಿನ ಟಬ್ ನಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್.
  • ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ.
  • ಈ ವೈರಲ್ ವಿಡಿಯೋ ತುರ್ಕಿಯ ಒಂದು ಡೇರಿ ಪ್ಲಾಂಟ್ ಗೆ ಸಂಬಂಧಿಸಿದ್ದಾಗಿದೆ.
Viral Video: Dairy Plantನಲ್ಲಿ ಹಾಲಿನ ಟಬ್ ನಲ್ಲಿ ಸ್ನಾನ ಮಾಡಿದ ಭೂಪ, ಮುಂದೇನಾಯ್ತು ನೀವೇ ನೋಡಿ title=

ನವದೆಹಲಿ: ಸಾಮಾನ್ಯವಾಗಿ ವಿಶೇಷ ಪೂಜಾ ಪಠಣದ ಸಮಯದಲ್ಲಿ, ಹಿರಿಯರು ಅಥವಾ ಮಕ್ಕಳು ಹಾಲಿನೊಂದಿಗೆ ಸ್ನಾನ ಮಾಡುವುದನ್ನು ನೀವು ನೋಡಿರಬೇಕು. ಇತ್ತೀಚಿಗೆ ವೀಡಿಯೊವೊಂದು ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದೆ (Video Viral). ಈ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುವುದನ್ನು ನೀವು ಕಾಣಬಹುದು. ವೀಡಿಯೊ ತುರ್ಕಿಯ ಡೈರಿ ಪ್ಲಾಂಟ್‌ ನಿಂದ ಹೊರಹೊಮ್ಮಿದ್ದು, ಅಲ್ಲಿನ ಉದ್ಯೋಗಿಯೊಬ್ಬರು ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿದ್ದರು.

ಆದರೆ, ಈ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ ಡೇರಿ ಪ್ಲಾಂಟ್ ಅನ್ನು ಕೂಡ ಬಂದ್ ಮಾಡಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನು ಓದಿ- OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?

ಹಾಲಿನ ಟಬ್ ನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿ
ಈ ವೀಡಿಯೊವನ್ನು nedenttoldu ಎಂಬ ಬಳಕೆದಾರರು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಹಲವಾರು ಸಾವಿರ ಲೈಕ್‌ಗಳು ಬಂದಿವೆ ಮತ್ತು 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವಿಕ್ಷೀಸಿದ್ದಾರೆ. ಅಲ್ಲದೆ, ನೂರಾರು ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜನರ ನಂಬಿಕೆಯೊಂದಿಗೆ ಆಟವಾಡಲಾಗುತ್ತಿದೆ ಎಂದು ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿ ಹಾಲಿನ ಟಬ್ ನಲ್ಲಿ ಮಲಗಿರುವುದನ್ನು ನೀವು ಸ್ಪಷ್ಟವಾಗಿ ಕಾಣಬಹುದಾಗಿದೆ ಹಾಗೂ ಆತನ ಎದುರಿಗೆ ನಿಂತಿರುವ ಇನ್ನೋರ್ವ ವ್ಯಕ್ತಿ ವಿಡಿಯೋ ಚಿತ್ರೀಕರಿಸುತ್ತಿದ್ದಾನೆ. Hurriyet Daily News ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಈ ವಿಡಿಯೋ ಅನಾತೊಲಿಯಾ ಪ್ರಾಂತ್ಯದಲ್ಲಿರುವ ಒಂದು ಡೇರಿ ಪ್ಲಾಂಟ್ ನಲ್ಲಿ ಚಿತ್ರಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.

ಇದನ್ನು ಓದಿ- ಈ ದೇಶದಲ್ಲಿ ಯುವತಿಯರು ಒಳಉಡುಪು ಧರಿಸಿದರೆ ಕಠಿಣ ಶಿಕ್ಷೆ ನೀಡುತ್ತಾರಂತೆ

ಡೇರಿ ಪ್ಲಾಂಟ್ ದಂಡ ಪಾವತಿಸಬೇಕು
ವರದಿಗಳ ಪ್ರಕಾರ ಡೇರಿ ಪ್ಲಾಂಟ್ ಅನ್ನು ಬಂದ್ ಮಾಡಲಾಗಿದೆ. ಜೊತೆಗೆ ಈ ಕೆಲಸಕ್ಕಾಗಿ ಪ್ಲಾಂಟ್ ಗೆ ದಂಡ ಕೂಡ ವಿಧಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಆರೋಪಿ Ugur Turgut, ಟಬ್ ನಲ್ಲಿ ಘಟನೆಯ ವೇಳೆ ಹಾಲು ಇರಲಿಲ್ಲ ಮತ್ತು ಅದೊಂದು ಕ್ಲೀನಿಂಗ್ ಮೆಟೀರಿಯಲ್ ಆಗಿದೆ ಎಂದು ಹೇಳಿದ್ದಾನೆ. 

Trending News