ನವದೆಹಲಿ : ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರನ್ನು ಭೇಟಿಯಾದರು. ಜೈಶಂಕರ್ ಅವರು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು ರಿಚರ್ಡ್ ಮಾರ್ಲ್ಸ್ ಗೆ ಉಡುಗೊರೆಯಾಗಿ ನೀಡಿದರು. ಕ್ರಿಕೆಟ್ ಎಂಬ ಒಂದು ಅಂಶ ಎರಡೂ ದೇಶಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ರಿಚರ್ಡ್ ಮಾರ್ಲ್ಸ್, "ಕ್ಯಾನ್‌ಬೆರಾದಲ್ಲಿ ಎಸ್ ಜೈಶಂಕರ್ ಅವರೊಂದಿಗೆ ಭೇಟಿ ಸಂತಸ ತಂದಿದೆ. ಕ್ರಿಕೆಟ್ ಮೇಲಿನ ಪ್ರೀತಿ ಸೇರಿದಂತೆ ಅನೇಕ ವಿಷಯಗಳು ನಮ್ಮನ್ನು ಒಟ್ಟಿಗೆ ಬಂಧಿಸುತ್ತವೆ. ಇಂದು ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಸಹಿ ಇರುವ ಬ್ಯಾಟ್ ನೀಡಿ ಅಚ್ಚರಿ ಮೂಡಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : OMG! ಮೊಬೈಲ್ ಲೈವ್ ಮಾಡುತ್ತಿದ್ದ ಯುವತಿಯ ತಲೆ ಮೇಲಿಂದ ಹಾರಿ ಹೋದ ಕ್ಷಿಪಣಿ... ವಿಡಿಯೋ ನೋಡಿ
ಮಾರ್ಲ್ಸ್ ಅವರು ಆಸ್ಟ್ರೇಲಿಯಾದ ರಕ್ಷಣಾ ಸಚಿವರೂ ಆಗಿದ್ದಾರೆ. ಸಭೆಯಲ್ಲಿ ಉಭಯ ನಾಯಕರು ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆ ಕುರಿತು ಚರ್ಚಿಸಿದರು. ಮಾರ್ಲ್ಸ್ ಟ್ವೀಟ್ ನಲ್ಲಿ, "ನಾವಿಬ್ಬರೂ ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆಯ ಬಗ್ಗೆ ಚರ್ಚಿಸಿದ್ದೇವೆ. ರಕ್ಷಣೆ ಮತ್ತು ಭದ್ರತೆ ಕ್ಷೇತ್ರದಲ್ಲಿ ನಮ್ಮ ಹೆಚ್ಚುತ್ತಿರುವ ಸಹಕಾರವು ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಶಾಂತಿ, ಸಮೃದ್ಧಿಯನ್ನು ತರುತ್ತದೆ" ಎಂದಿದ್ದಾರೆ.
A pleasure to host @DrSJaishankar here in Canberra.
There are many things which bind us, including our love of cricket.
Today, he surprised me with a signed bat from cricket legend @imVkohli pic.twitter.com/2FE0qIJnPc
— Richard Marles (@RichardMarlesMP) October 10, 2022
ನ್ಯೂಜಿಲೆಂಡ್‌ಗೆ ಮೊದಲ ಪ್ರವಾಸ ಮುಗಿಸಿ ಕ್ಯಾನ್‌ಬೆರಾ ತಲುಪಿದ ಜೈಶಂಕರ್, ಈ ಹಿಂದೆ ಟ್ವೀಟ್ ಮಾಡಿ, 'ಆಸ್ಟ್ರೇಲಿಯದ ಹಳೆಯ ಪಾರ್ಲಿಮೆಂಟ್ ಕಟ್ಟಡವನ್ನು ಭಾರತದ ರಾಷ್ಟ್ರಧ್ವಜದ ಬಣ್ಣಗಳಲ್ಲಿ ನೋಡಿ ನನಗೆ ತುಂಬಾ ಸಂತೋಷವಾಗಿದೆ" ಎಂದು ಬರೆದುಕೊಂಡಿದ್ದರು. ಜೈಶಂಕರ್ ಅವರ ಎರಡನೇ ಆಸ್ಟ್ರೇಲಿಯಾ ಭೇಟಿ ಇದಾಗಿದೆ. ಇದಕ್ಕೂ ಮೊದಲು, ಅವರು ಫೆಬ್ರವರಿ 2022 ರಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಕಾನೂನು ಪಾಲಿಸುವ ಅಂತಾರಾಷ್ಟ್ರೀಯ ಸುವ್ಯವಸ್ಥೆ, ಅಂತಾರಾಷ್ಟ್ರೀಯ ನೀರಿನಲ್ಲಿ ನೌಕಾಯಾನದ ಸ್ವಾತಂತ್ರ್ಯ, ಅಭಿವೃದ್ಧಿ ಮತ್ತು ಎಲ್ಲರಿಗೂ ಭದ್ರತೆಯ ಬಗ್ಗೆ ನಂಬುತ್ತವೆ ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ : Russia Ukraine War: ಉಕ್ರೇನ್ ಮೇಲೆ ರಷ್ಯಾದ ಇದುವರೆಗಿನ ಅತಿ ದೊಡ್ಡ ದಾಳಿ
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಾದ ಪೆನ್ನಿ ವಾಂಗ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಅವರು ಉಭಯ ನಾಯಕರ ನಡುವಿನ ಮಾತುಕತೆ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು. ಇಂಡೋ-ಪೆಸಿಫಿಕ್ ಪ್ರದೇಶವನ್ನು ಆರ್ಥಿಕವಾಗಿ ಮತ್ತು ಕಾರ್ಯತಂತ್ರವಾಗಿ ಮರುರೂಪಿಸಲಾಗುತ್ತಿದೆ ಎಂದು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ನಂಬುತ್ತವೆ ಎಂದು ವಾಂಗ್ ಹೇಳಿದರು.
ವಾಂಗ್, "ಆಸ್ಟ್ರೇಲಿಯಾ ಮತ್ತು ಭಾರತ ಉತ್ತಮ ಕಾರ್ಯತಂತ್ರದ ಪಾಲುದಾರರು. ನಾವು ಕ್ವಾಡ್‌ನ ಸದಸ್ಯರಾಗಿದ್ದೇವೆ ಮತ್ತು ನಾವು ಇತರ ಹಲವು ರೀತಿಯಲ್ಲಿ ಪಾಲುದಾರರಾಗಿದ್ದೇವೆ ಮತ್ತು ಮುಖ್ಯವಾಗಿ, ನಾವು ಇಂಡೋ-ಪೆಸಿಫಿಕ್ ಪ್ರದೇಶವನ್ನು ಹಂಚಿಕೊಳ್ಳುತ್ತೇವೆ" ಎಂದಿದ್ದರು. 'ಕ್ವಾಡ್' ನಾಲ್ಕು ಸದಸ್ಯರ ಗುಂಪು, ಇದರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ