ನವದೆಹಲಿ: ಕರೋನವೈರಸ್ ಮಹಾಮರಿಯಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತ 10 ಕೋಟಿಗೂ ಅಧಿಕ ಜನರು ತೀವ್ರ ಬಡತನದಲ್ಲಿ ಕಾಲ ಕಳೆಯುವಂತಾಗಲಿ ಎಂದು ವಿಶ್ವ ಬ್ಯಾಂಕ್ ಹೇಳಿದೆ. ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲಪಾಸ್ ಈ ಮಾಹಿತಿ ನೀಡಿದ್ದಾರೆ.
ಕರೋನಾ ವೈರಸ್ ಮಹಾಮಾರಿಯಿಂದ ಸುಮಾರು 6 ಕೋಟಿಗೂ ಹೆಚ್ಚು ಜನರು ತುಂಬಾ ಬಡವರಾಗುತ್ತಾರೆ ಎಂದು ವಿಶ್ವ ಬ್ಯಾಂಕ್ ಈಗಾಗಲೇ ಅಂದಾಜಿಸಿತ್ತು, ಆದರೆ ವಿಶ್ವ ಬ್ಯಾಂಕ್ ಇದೀಗ ತನ್ನ ಈ ಸಂಖ್ಯೆಯನ್ನು ಪರಿಷ್ಕರಿಸಿದ್ದು, 10 ಕೋಟಿಗಿಂತ ಅಧಿಕ ಜನರು ಬಡತನದಲ್ಲಿ ಕಾಲಕಳೆಯುವಂತಾಗಳಿದೆ ಎಂದು ಹೇಳಿದೆ. ಸಾಂಕ್ರಾಮಿಕ ರೋಗವು ದೀರ್ಘಕಾಲದವರೆಗೆ ಮುಂದುವರಿದರೆ, ಈ ಅಂಕಿ-ಅಂಶಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.
ವಿಶ್ವದ ಶ್ರೀಮಂತ ರಾಷ್ಟ್ರಗಳು ವಿಶ್ವದ ಬಡ ರಾಷ್ಟ್ರಗಳ ನೆರವಿಗೆ ಬರುವ ಆವಶ್ಯಕತೆ ಇದೆ ಎಂದು ಮಾಲಪಾಸ್ ಹೇಳಿದ್ದಾರೆ. ಆಗ, ಮಾತ್ರ ಇಷ್ಟೊಂದು ದೊಡ್ಡ ಜನಸಂಖ್ಯೆಯನ್ನು ಇದರ ಪ್ರಭಾವದಿಂದ ಪಾರುಮಾದಬಹುದು. ಆದರೆ, ಇದಕ್ಕಾಗಿ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳ ಶೋಷಣೆ ಕೂಡ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಆತಂಕ ಕೂಡ ಮಾಲಪಾಸ್ ವ್ಯಕ್ತಪಡಿಸಿದ್ದಾರೆ.
ವಿಶ್ವದ ಸುಮಾರು 20ಕ್ಕೂ ಅಧಿಕ ಶ್ರೀಮಂತ ರಾಷ್ಟ್ರಗಳು ಬಡ ಹಾಗೂ ಸಾಲಪಡೆದ ದೇಶಗಳಿಂದ ಹಣ ವಸೂಲಿಯನ್ನು ಪ್ರಸ್ತುತ ನಿಲ್ಲಿಸಿವೆ ಹಾಗೂ ಆ ದೇಶಗಳಿಗೆ ಸಹಾಯ ಕೂಡ ಮಾಡುತ್ತಿವೆ. ಆದರೆ, ಈ ನೆರವು ಸಾಕಾಗುವುದಿಲ್ಲ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ವಿಶ್ವ ಬ್ಯಾಂಕ್ 2021ರವರೆಗೆ ವಿಶ್ವದ ಸುಮಾರು 100 ಬಡರಾಷ್ಟ್ರಗಳಿಗೆ ಸುಮಾರು 1.60 ಬಿಲಿಯನ್ ಡಾಲರ್ ನೆರವು ಘೋಷಿಸಿದೆ. ಇದರ ಹೊರತಾಗಿಯೂ ಕೂಡ ನಿತ್ಯ 1.9 ಡಾಲರ್ ನಿತ್ಯ ಗಳಿಕೆ ಮಾಡುವವರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗುತ್ತಿದೆ.
ಇಷ್ಟೊಂದು ದೊಡ್ಡ ಪ್ರಮಾಣದ ಜನಸಂಖ್ಯೆ ಪ್ರಭಾವಿತಕ್ಕೆ ಒಳಗಾಗುವ ಕಾರಣ ನೌಕರಿ ಕಳೆದುಕೊಳ್ಳುವಿಕೆ ಎಂದು ವಿಶ್ವಬ್ಯಾಂಕ್ ಹೇಳಿದೆ.