ನವದೆಹಲಿ: ಗೆಹ್ಲೋಟ್ ಸರ್ಕಾರ ರಾಜಸ್ಥಾನಕ್ಕೆ ಮರಳಲಿದೆಯೇ ಅಥವಾ ಬಿಜೆಪಿಯ ವನವಾಸ ಕೊನೆಗೊಳ್ಳಲಿದೆಯೇ ಎಂಬುದು ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾದ ನಂತರವಷ್ಟೇ ತಿಳಿಯಲಿದೆ. ಆದರೆ ಅದಕ್ಕೂ ಮುನ್ನ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ಸಾರ್ವಜನಿಕರ ನಾಡಿಮಿಡಿತವನ್ನು ಅಳೆಯಲು ಪ್ರಯತ್ನಿಸಿವೆ. ಇವು ಅಧಿಕೃತ ಫಲಿತಾಂಶಗಳಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್-ಬಿಜೆಪಿ ಎಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬುದನ್ನು ನಾವು ಇಲ್ಲಿ ವಿವರಿಸಿದ್ದೇವೆ.
ಇದನ್ನೂ ಓದಿ: ತೆಲಂಗಾಣ ರಾಜ್ಯದಲ್ಲಿ ಮತದಾನ ಆರಂಭ
ಆಕ್ಸಿಸ್ ಮೈ ಇಂಡಿಯಾದ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್ 86-106 ಸ್ಥಾನಗಳನ್ನು, ಬಿಜೆಪಿ 80-100 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಇತರರು 9-18 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. POLSTRAT ಪ್ರಕಾರ, ಬಿಜೆಪಿ 100-110 ಸ್ಥಾನಗಳನ್ನು ಪಡೆಯಬಹುದು, ಕಾಂಗ್ರೆಸ್ 90-100 ಮತ್ತು ಇತರರು 5-15 ಸ್ಥಾನಗಳನ್ನು ಪಡೆಯಬಹುದು.ಸಿ ವೋಟರ್ ಪ್ರಕಾರ, ಕಾಂಗ್ರೆಸ್ 71 ರಿಂದ 91 ಸ್ಥಾನಗಳನ್ನು, ಬಿಜೆಪಿ 94 ರಿಂದ 114, ಬಿಎಸ್ಪಿ 0 ರಿಂದ 5 ಮತ್ತು ಇತರರು 9 ರಿಂದ 19 ಸ್ಥಾನಗಳನ್ನು ಪಡೆಯಬಹುದು.
महा EXIT POLL LIVE : राजस्थान में BJP को 100-110 सीटों का अनुमान, कांग्रेस को 90-100 सीटों का अनुमान, अन्य को मिल सकती हैं 5-15 सीट#ExitPollOnZee #ExitPolls #BJP #Congress #RajasthanExitPoll #ZeeNews@ShobhnaYadava @DChaurasia2312@syedzafarBJP @RagiSangit pic.twitter.com/UttzTqcpEW
— Zee News (@ZeeNews) November 30, 2023
ಇದನ್ನೂ ಓದಿ: ಕಾಂತರಾಜು ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧ: ಸಚಿವ ಶಿವರಾಜ್ ತಂಗಡಗಿ
ರಾಜಸ್ಥಾನದಲ್ಲಿ 200 ವಿಧಾನಸಭಾ ಸ್ಥಾನಗಳಿದ್ದು, 51 ಸಾವಿರಕ್ಕೂ ಹೆಚ್ಚು ಮತ ಕೇಂದ್ರಗಳಲ್ಲಿ ಜನರು ಮತದಾನ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ನಿಧನರಾದ ಕಾರಣ ಶ್ರೀಗಂಗಾನಗರ ಜಿಲ್ಲೆಯ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.ರಾಜಸ್ಥಾನದಲ್ಲಿ 5 ವರ್ಷಗಳ ನಂತರ ಸರ್ಕಾರ ಬದಲಿಸುವ ಟ್ರೆಂಡ್ ಈ ಹಿಂದಿನಿಂದಲೂ ನಡೆದು ಬಂದಿದೆ, ಅಂದರೆ ಅಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಬೇರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದರೆ ಈ ಬಾರಿ ಈ ಇದಕ್ಕೆ ಬ್ರೇಕ್ ಬೀಳಲಿದೆಯೇ ಎಂಬುದನ್ನು ನಾವು ಅಂತಿಮ ಫಲಿತಾಂಶದವರೆಗೆ ಕಾಯಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.