ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಾತ್ರ ಪ್ರೊಮೋಟ್ ಮಾಡುತ್ತಿದೆಯೇ ಫೇಸ್ ಬುಕ್ ?

    

Last Updated : Apr 26, 2018, 06:10 PM IST
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಾತ್ರ ಪ್ರೊಮೋಟ್ ಮಾಡುತ್ತಿದೆಯೇ ಫೇಸ್ ಬುಕ್ ? title=

ಬೆಂಗಳೂರು: ಹೌದು, ಈಗ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿನ ಪೋಸ್ಟ್ ಗಳು ಹೊಸ ಸಂಶಯಕ್ಕೆ ಎಡೆಮಾಡಿವೆ. 

ಕರ್ನಾಟಕದಲ್ಲಿ ಚುನಾವಣೆಯ ಪ್ರಯುಕ್ತ  ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿ, ಈ ಎಲ್ಲ ಪಕ್ಷಗಳು ಈಗ ಸೋಶಿಯಲ್ ಮೀಡಿಯಾದ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡುತ್ತಿವೆ. ಅದರಲ್ಲೂ  ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಹೊಂದಿರುವ ಯುಗದಲ್ಲಿ ಎಲ್ಲರು ಸಹಿತ ಫೇಸ್ ಬುಕ್ ಖಾತೆಯನ್ನು ಹೊಂದಿದ್ದಾರೆ, ಆದ್ದರಿಂದಲೇ ಈಗ ಎಲ್ಲ ರಾಜಕೀಯ  ಪಕ್ಷಗಳು ತಮ್ಮ ಐಟಿ ಸೆಲ್ ಗಳ ಮೂಲಕ ಪಕ್ಷದ ಅಭ್ಯರ್ಥಿ ಮತ್ತು ಪಕ್ಷದ ವಿಚಾರಗಳನ್ನು ಫೇಸ್ ಬುಕ್ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡುತ್ತಿವೆ.

ಆದರೆ ಸದ್ಯದ ಸಂಗತಿ ಏನೆಂದರೆ ಕರ್ನಾಟಕ ವಿಧಾನಸಭಾ ಚುನಾವಣೆ ಈಗ ದೇಶದ ಗಮನ ಸೆಳೆದಿದೆ. ಒಂದು ಕಡೆ  ಈ ಚುನಾವಣೆ ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ಪ್ರತಿಷ್ಟತೆಯ ವಿಚಾರವಾಗಿದೆ. ಆದ್ದರಿಂದಲೇ ಈಗ ಪಕ್ಷಗಳ ನಡುವೆ ಪ್ರತಿದಿನ ಸೋಶಿಯಲ್ ಮಿಡಿಯಾ ವಾರ್ ನಡೆಯುತ್ತಲೇ ಇದೆ.

ಈಗ ನಾವು ಸಂಶಯ ಪಡುತ್ತಿರುವ  ಸಂಗತಿ ಏನೆಂದರೆ ಕರ್ನಾಟಕದ ಚುನಾವಣೆಯ ಪ್ರಯುಕ್ತ ಫೇಸ್ ಬುಕ್ ಈಗ ಬಿಜೆಪಿ ಪೋಸ್ಟ್ ಗಳಿಗೆ ಮಾತ್ರ ಹೆಚ್ಚು ಮಣೆ ಹಾಕುತ್ತಿದೆಯೇ ಎಂಬುದು! ಇದಕ್ಕೆ  ಪುಷ್ಟಿ ನೀಡುವಂತೆ ಈಗ ಫೇಸ್ ಬುಕ್ ನಲ್ಲಿ ಬಿಜೆಪಿ ಪರವಾಗಿ ಇರುವಂತಹ ಗ್ರೂಪ್ ಗಳಲ್ಲಿನ ಸುದ್ದಿಯು ಜಾಹಿರಾತು ಮೂಲಕ ಬಂದಾಗ ಅದನ್ನು ಮರೆ ಮಾಚುವ ಯಾವುದೇ ಆಯ್ಕೆ ನೀಡಿಲ್ಲ, ಆದರೆ ಇದೇ ಜಾಹಿರಾತು ಕಾಂಗ್ರೆಸ್ ಮತ್ತು ಜೆಡಿಎಸ್ ಸಂಬಂಧಿತ ಸುದ್ದಿಗಳು ಫೇಸ್ ಬುಕ್ ನಲ್ಲಿ ಬಂದರೆ, ಆ ಪೋಸ್ಟ್ ಮರೆ ಮಾಡುವ(hide) ಆಯ್ಕೆ ಪೋಸ್ಟ್ ಪಕ್ಕದಲ್ಲಿಯೇ ಕಾಣಿಸುತ್ತದೆ. ಹಾಗಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪೋಸ್ಟ್ ಗಳಿಗೆ ಇರುವ ಹೈಡ್ ಮಾಡುವ ಆಯ್ಕೆ  ಬಿಜೆಪಿ ಪೋಸ್ಟ್ ಗಳಿಗೆ ಯಾಕೆ ಇಲ್ಲ ?ಎನ್ನುವುದು ಫೇಸ್ ಬುಕ್ ಬಳಕೆದಾರರ ಪ್ರಶ್ನೆಯಾಗಿದೆ.

Trending News