ಮೋದಿಗೆ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ

ನಾನು ಯುದ್ಧ ಭೂಮಿಯಲ್ಲಿ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಮುನ್ನುಗ್ಗಿದರೆ ಸೈನಿಕರೂ ಧೈರ್ಯದಿಂದ ಹಿಂದೆ ಬರ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Last Updated : May 7, 2018, 02:42 PM IST
ಮೋದಿಗೆ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ  title=

ಮೈಸೂರು : ನಾನು ಯುದ್ಧ ಭೂಮಿಯಲ್ಲಿ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಮುನ್ನುಗ್ಗಿದರೆ ಸೈನಿಕರೂ ಧೈರ್ಯದಿಂದ ಹಿಂದೆ ಬರ್ತಾರೆ. ಹಾಗಾಗಿ ಮೋದಿಗೆ ನನ್ನ ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾವು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ "ನನಗೆ ಚುನಾವಣೆ ಬಗ್ಗೆ ಯಾವುದೇ ಟೆನ್ಷನ್ ಇಲ್ಲ. ನಾವು ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ. ಸೇನಾಧಿಪತಿ ಧೈರ್ಯದಿಂದ ಮುನ್ನುಗ್ಗಿದರೆ ಶೈನಿಕರೂ ಹಿಂದೆ ಬರುತ್ತಾರೆ. ಹಾಗಾಗಿ ನಾನು ಯುದ್ಧ ಭೂಮಿ ಸೇನಾಧಿಪತಿ ಇದ್ದಂತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಮೋದಿಗೆ ನನ್ನನ್ನು ಕಂಡರೆ ಭಯ
ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯವಿದೆ. ಬಿಜೆಪಿ ಅವರಿಗೆ ಸೋಲುವ ಭಯವಾಗಿದೆ. ಹಾಗಾಗಿ ಯಾವಾಗಲೂ ಮುಗಿದು ಹೋದ ನನ್ನ ವಾಚ್ ಬಗ್ಗೆ ಮಾತಾಡುತ್ತಾರೆ. ಈಗಾಗಲೇ ಆ ವಾಚ್ ಬಗ್ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೂ ನನ್ನನ್ನೇ ಟಾರ್ಗೆಟ್ ಮಾಡ್ತಾರೆ. ಅಷ್ಟಕ್ಕೂ ಮೋದಿ ಧರಿಸುವ ಸೂಟ್, ಕೋಟ್ ಎಲ್ಲಿಂದ ಬಂತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

Trending News