ಐಪಿಎಲ್ 2018: ಚೆನ್ನೈ ತಂಡಕ್ಕೆ ಸುಲಭ ತುತ್ತಾದ ಬೆಂಗಳೂರು

    

Last Updated : May 5, 2018, 08:44 PM IST
ಐಪಿಎಲ್ 2018: ಚೆನ್ನೈ ತಂಡಕ್ಕೆ ಸುಲಭ ತುತ್ತಾದ ಬೆಂಗಳೂರು

ಪುಣೆ: ಟಾಸ್ ಗೆದ್ದು  ಚೆನ್ನೈ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ತನ್ನ ನಿರ್ಧಾರದ ಅನುಸಾರವಾಗಿಯೇ ಬೌಲಿಂಗ್ ಮಾಡಿದ ಚೆನ್ನೈ ತಂಡವು ಬೆಂಗಳೂರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

ಚೆನ್ನೈ ನ ಆಲ್ ರೌಂಡರ್ ರವಿಂದ್ರ ಜಡೇಜಾ ರವರು ನಾಲ್ಕು ಓವರ್ ಗಳಲ್ಲಿ ಕೇವಲ 3 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಬೆಂಗಳೂರು ತಂಡದ ಬ್ಯಾಟಿಂಗ್ ಬೆನ್ನೆಲಬು ಮುರಿದರು.

ಬೆಂಗಳೂರು ತಂಡದ ಪರ ಪೃಥ್ವಿ ಷಾ (53) ಮತ್ತು  ಟಿಮ್ ಸೌಥೀ (36) ರನ್ ಗಳ ನೆರವಿಂದ  20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. 128 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು  ಅಂಬಟಿ ರಾಯಡು(32) ಸುರೇಶ ರೈನಾ ( 25) ಧೋನಿ( 31) ರನ್ ಗಳ ಮೂಲಕ  ನಾಲ್ಕು ವಿಕೆಟ್ ಕಳೆದುಕೊಂಡು ಇನ್ನು 2 ಓವರ್ ಗಳು ಬಾಕಿ ಇರುವಂತೆಯ ಗೆಲುವಿನ ದಡ ಸೇರಿತು. ಆ ಮೂಲಕ ಐಪಿಎಲ್ ನಲ್ಲಿ ಚೆನ್ನೈ ತಂಡವು  ಈಗ ಅಂಕ ಪಟ್ಟಿಯಲ್ಲಿ ಅಗ್ರಸ್ತಾನಕ್ಕೆ ಲಗ್ಗೆ ಇಟ್ಟಿದೆ.

More Stories

Trending News