ಕರ್ನಾಟಕ ಚುನಾವಣೆ : ಮಧ್ಯಾಹ್ನ 3 ಗಂಟೆವರೆಗೆ ಶೇ.56 ಮತದಾನ

ಕರ್ನಾಟಕ ವಿಧಾನಸಭೆಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಹ್ನ 3 ಗಂಟೆವರೆಗೆ ಶೇ.56 ಮತದಾನ ಪೂರ್ಣಗೊಂಡಿದೆ.

Last Updated : May 12, 2018, 05:36 PM IST
ಕರ್ನಾಟಕ ಚುನಾವಣೆ : ಮಧ್ಯಾಹ್ನ 3 ಗಂಟೆವರೆಗೆ ಶೇ.56 ಮತದಾನ title=

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಹ್ನ 3 ಗಂಟೆವರೆಗೆ ಶೇ.56 ಮತದಾನ ಪೂರ್ಣಗೊಂಡಿದೆ.

ಬೆಂಗಳೂರು ನಗರ ವ್ಯಾಪ್ತಿಯ ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಶೇ.41, ಬಿಬಿಎಂಪಿ ಉತ್ತರ ಶೇ.39, ಬಿಬಿಎಂಪಿ ದಕ್ಷಿಣ ಶೇ.40, ಮೈಸೂರು ಶೇ.52, ಚಾಮರಾಜನಗರ ಜಿಲ್ಲೆ ಶೇ.61 ಮತದಾನವಾಗಿದೆ. 

ಹಾವೇರಿ ಜಿಲ್ಲೆ ಶೇ.60.83, ಚಿಕ್ಕಮಗಳೂರು ಜಿಲ್ಲೆ ಶೇ.58.04, ಬೆಳಗಾವಿ ಜಿಲ್ಲೆ ಶೇ.58, ಬಾಗಲಕೋಟೆ ಜಿಲ್ಲೆ ಶೇ.55, ಬಿಜಾಪುರ ಜಿಲ್ಲೆ ಶೇ.48, ಗುಲ್ಬರ್ಗಾ ಜಿಲ್ಲೆ ಶೇ. 45, ಬೀದರ್ ಶೇ.42, ರಾಯಚೂರು ಶೇ.49, ಕೊಪ್ಪಳ ಶೇ.56, ಗದಗ ಶೇ.54, ಧಾರವಾಡ ಶೇ.52, ಉತ್ತರ ಕನ್ನಡ ಶೇ.53, ಹಾವೇರಿ ಶೇ.61, ಬಳ್ಳಾರಿ ಶೇ.53, ಚಿತ್ರದುರ್ಗ ಶೇ. 56, ದಾವಣಗೆರೆ ಜಿಲ್ಲೆಯಲ್ಲಿ ಶೇ. 55 ಮತದಾನವಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 56, ಉಡುಪಿ‌ 62%, ಚಿಕ್ಕಮಗಳೂರು 55% , ತುಮಕೂರು 57% , ಚಿಕ್ಕಬಳ್ಳಾಪುರ 62%, ಕೊಲಾರ ಜಿಲ್ಲೆಯಲ್ಲಿ 59, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 62, ರಾಮನಗರ ಶೇ.65, ಮಂಡ್ಯ ಶೇ.61, ಹಾಸನ ಶೇ.61, ದಕ್ಷಿಣ ಕನ್ನಡ ಶೇ.61, ಕೊಡಗು ಜಿಲ್ಲೆಯಲ್ಲಿ ಶೇ.57ರಷ್ಟು ಮತದಾನವಾಗಿದೆ. 

ಸಂಜೆ 6ಗಂಟೆಯವರೆಗೂ ಮತದಾನ ಮುಂದುವರೆಯಲಿದ್ದು, ಮೇ 15ರಂದು ಮತ ಎಣಿಕೆ ನಡೆಯಲಿದೆ. 

Trending News