ಬೆಂಗಳೂರು: ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೇ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಏನು ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಮಾಡಿರುವ ಎಲ್ಲ ಆರೋಪಗಳಿಗೆ ಒಂದೊಂದಾಗಿ ಉತ್ತರಿಸಿದ ಸಿದ್ದರಾಮಯ್ಯ "ಮೋದಿ ರಾಜ್ಯಕ್ಕೆ 7-8 ಬಾರಿ ಬಂದಿರಬಹುದು. ನಾವು ಮೋದಿ ಅವರಿಂದ ಪ್ರಧಾನಿಯ ರೀತಿಯಲ್ಲಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವು ಮತ್ತು ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೈಲೈಟ್ ಮಾಡುತ್ತಾರೆ ಎಂದು ತಿಳಿದಿದ್ದೆವು. ಆದರೆ ಬಿಜೆಪಿ ಬಳಸುತ್ತಿರುವ ಭಾಷೆಯನ್ನು ನಾಗರಿಕ ಜನರು ಎಂದೂ ಬಳಸುವುದಿಲ್ಲ. ಇನ್ನು ನರೇಂದ್ರ ಮೋದಿ ಬಳಸುವ ಭಾಷೆ ನಿಜಕ್ಕೂ ಜನ ಸಾಮಾನ್ಯರು ಅಸಹ್ಯ ಪಡುವಂತಿದೆ" ಎಂದರು .
ಇನ್ನು ಮುಂದುವರೆದು ಮಾತನಾಡಿದ ಅವರು " ನಾನು ಎಂದೂ ಕೂಡ ಕೀಳು ಭಾಷೆಯನ್ನು ಮತ್ತು ವೈಯಕ್ತಿಕ ನಿಂದನೆಯನ್ನು ಮಾಡಿಲ್ಲ ಆದರೆ, ಇದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ .ಏಕೆಂದರೆ ಇದನ್ನು ಜನರು ಸತ್ಯವೆಂದು ನಂಬುತ್ತಾರೆ" ಎಂದರು . 10 ಪರ್ಸೆಂಟ್ ಸರ್ಕಾರ ಎಂದು ಕರೆಯುವ ಇವರು ಇದಕ್ಕೆ ಸಾಕ್ಷಿ ಏನಿದೆ ಇವರ ಬಳಿ ಹಲವಾರು ಸಂಸ್ಥೆಗಳಿವೆ ಈ ಕುರಿತಾಗಿ ದಾಖಲೆಗಳನ್ನು ಸಂಗ್ರಹಿಸಿಸಲು" ಎಂದು ಸಿದ್ದರಾಮಯ್ಯ ಮೋದಿಯವರಿಗೆ ತೀರುಗೇಟು ನೀಡಿದರು,