ಉಚಿತ ವೃತ್ತಿ ತರಬೇತಿ ಪಡೆಯುವುದಕ್ಕಾಗಿ ಸರ್ಕಾರದ ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ, ಯುವಕರ ಮುಂದಿದೆ ಸುವರ್ಣಾವಕಾಶ

PM Kaushal Vikas Yojana : ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ 2015 ರಲ್ಲಿ ಪ್ರಾರಂಭವಾಯಿತು. ಕಡಿಮೆ ಶಿಕ್ಷಣ ಪಡೆದ ಅಥವಾ ಶಾಲೆಯನ್ನು ತೊರೆದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು.  

Written by - Ranjitha R K | Last Updated : Jul 16, 2021, 04:21 PM IST
  • ಉಚಿತ ವೃತ್ತಿ ತರಬೇತಿಗಾಗಿ ಯುವಕರ ಮುಂದಿದೆ ಸುವರ್ಣಾವಕಾಶ
  • ಇದರ ಅಡಿಯಲ್ಲಿ, ಯುವಕರಿಗೆ ಸಾಲ ಸೌಲಭ್ಯವನ್ನು ಕೂಡಾ ನೀಡಲಾಗುತ್ತದೆ.
  • ಯೋಜನೆಯ ಲಾಭ ತಿಳಿದು ನೋಂದಾಯಿಸಿಕೊಳ್ಳಿ
ಉಚಿತ ವೃತ್ತಿ ತರಬೇತಿ ಪಡೆಯುವುದಕ್ಕಾಗಿ ಸರ್ಕಾರದ ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ, ಯುವಕರ ಮುಂದಿದೆ ಸುವರ್ಣಾವಕಾಶ    title=
ಉಚಿತ ವೃತ್ತಿ ತರಬೇತಿಗಾಗಿ ಯುವಕರ ಮುಂದಿದೆ ಸುವರ್ಣಾವಕಾಶ (photo zee news)

ನವದೆಹಲಿ : PM Kaushal Vikas Yojana : ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PM Kaushal Vikas Yojana) 2015 ರಲ್ಲಿ ಪ್ರಾರಂಭವಾಯಿತು. ಕಡಿಮೆ ಶಿಕ್ಷಣ ಪಡೆದ ಅಥವಾ ಶಾಲೆಯನ್ನು ತೊರೆದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಡಿಯಲ್ಲಿ, ಯುವಕರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಅರ್ಹತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳುವ ತರಬೇತಿ ನೀಡಲಾಗುತ್ತದೆ. ಇದರ ಅಡಿಯಲ್ಲಿ, ಯುವಕರಿಗೆ ಸಾಲ ಸೌಲಭ್ಯವನ್ನು ಕೂಡಾ ನೀಡಲಾಗುತ್ತದೆ.  ಇದರ ನೋಂದಣಿಯನ್ನು ಮೂರು ತಿಂಗಳು, 6 ತಿಂಗಳು ಮತ್ತು ಒಂದು ವರ್ಷಕ್ಕೆ ಮಾಡಲಾಗುತ್ತದೆ. ತರಬೇತಿ ಮುಗಿದ ನಂತರ ಪ್ರಮಾಣಪತ್ರವನ್ನು ಕೂಡಾ ನೀಡಲಾಗುತ್ತದೆ. 

ಮೂರನೇ ಹಂತದ ನೋಂದಣಿ ಪ್ರಕ್ರಿಯೆಯನ್ನು ಫೆಬ್ರವರಿ 2021 ರಿಂದ ಪಿಎಂ ಕೌಶಲ್ ವಿಕಾಸ್ ಯೋಜನೆ (PM Kaushal Vikas Yojana) ಅಡಿಯಲ್ಲಿ ಪ್ರಾರಂಭಿಸಲಾಗಿದೆ. ಈ ಬಾರಿ ದೇಶದ 8 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಸರ್ಕಾರ (Central government) ಹೊಂದಿದೆ. ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಪ್ರಕಾರ, ದೇಶದ 717 ಜಿಲ್ಲೆಗಳಲ್ಲಿ ಮತ್ತು ದೇಶದ 28 ರಾಜ್ಯಗಳಲ್ಲಿ ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಪ್ರಾರಂಭದಲ್ಲಿ ವೃತ್ತಿ ತರಬೇತಿ ನೀಡಲಾಗುವುದು. ಈ ತರಬೇತಿಯ ನಂತರ ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಪಡೆದುಕೊಳ್ಳಲು ಸಹಾಯವಾಗಲಿದೆ. 

ಇದನ್ನೂ ಓದಿ : Saral Pension Yojana : LIC ಈ ಯೋಜನೆಯಲ್ಲಿ 40ನೇ ವಯಸ್ಸಿನಲ್ಲಿಯೇ ಪಿಂಚಣಿ ಪಡಿಯಬಹುದು!

ಯಾರು ಪಡೆಯಬಹುದು ಯೋಜನೆಯ ಲಾಭ ?
ಈ ಯೋಜನೆಯಡಿ, ಸಂಬಂಧಿತ ಉದ್ಯಮದಲ್ಲಿ ಉದ್ಯೋಗ ಪಡೆಯಲು ಯುವಕರಿಗೆ ನೆರವು ನೀಡಲಾಗುತ್ತದೆ. ಇದಕ್ಕಾಗಿ ಯುವಕರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನಾನಾ ಕಾರಣ ಗಳಿಂದಾಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೆ ಇರುವವರಿಗೆ  ಇದರಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಆಸಕ್ತಿ ಹೊಂದಿರುವ ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು. ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್ http://pmkvyofficial.org ಗೆ ಭೇಟಿ ನೀಡಿ  ನೋಂದಾಯಿಸಿಕೊಳ್ಳಬೇಕು.

ನೀವು ಯಾವ ತಾಂತ್ರಿಕ ತರಬೇತಿಗೆ ಹಾಜರಾಗಲು ಬಯಸುತ್ತೀರಿ? ಎನುವುದನ್ನು ಫಾರ್ಮ್ ಭರ್ತಿ ಮಾಡುವ ಸಮಯದಲ್ಲಿ ನಿರ್ಧರಿಸಬೇಕು. ಈ ಯೋಜನೆ ಅಡಿಯಲ್ಲಿ 40 ಕ್ಷೇತ್ರಗಳಲ್ಲಿ ತರಬೇತಿ ಪಡೆಯಬಹುದು. ಇದರಲ್ಲಿ ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಆಹಾರ ಸಂಸ್ಕರಣೆ, ಫಿಟ್ಟಿಂಗ್, ಕನ್ ಸ್ಟ್ರಕ್ಷನ್ ಸೇರಿದೆ. ನಿಮ್ಮ ಆದ್ಯತೆಯನ್ನು ಆಯ್ಕೆ ಮಾಡಿದ ನಂತರ, ತರಬೇತಿ ಕೇಂದ್ರವನ್ನು ಆರಿಸಬೇಕಾಗುತ್ತದೆ.

ಇದನ್ನೂ ಓದಿ : LIC ಈ ಯೋಜನೆಯಲ್ಲಿ 1 ರೂ. ಪ್ರೀಮಿಯಂ ತುಂಬಿ ಪಡೆಯಿರಿ 36 ಸಾವಿರವರೆಗೆ ಪಿಂಚಣಿ!

ಇದಕ್ಕಾಗಿ ಹೆಲ್ಪ್ ಲೈನ್ (help line) ಕೂಡಾ ನೀಡಲಾಗಿದೆ. ಯೋಜನೆ ಅಡಿಯಲ್ಲಿ ತರಬೇತಿ ಪಡೆದವರು ಯಾವುದೇ ಸಮಸ್ಯೆಯನ್ನು ಎದುರಿಸಿದ್ದಲ್ಲಿ, ಈ ನಂಬರ್ ಗೆ ದೂರು ಸಲ್ಲಿಸಬಹುದು. 88000-55555, 1800-123-9626 ನಂಬರಿಗೆ ದೂರು ಸಲ್ಲಿಸಬಹುದು. ದೂರವಾಣಿ ಸಂಖ್ಯೆಗಳಲ್ಲದೆ, ನೀವು ಕೌಶಲ್ ವಿಕಾಸ್ ಯೋಜನೆಯ ವೆಬ್‌ಸೈಟ್‌ಗೆ (website) ಭೇಟಿ ನೀಡಿ ಕೂಡ ದೂರು ಸಲ್ಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News