/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು :  ಹೊಸ ವರ್ಷದಲ್ಲಿ ಅದರಲ್ಲೂ ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ತುಟ್ಟಿಭತ್ಯೆಯನ್ನು ಸರ್ಕಾರವು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಘೋಷಿಸುತ್ತದೆ. ಈ ಬಾರಿ ಜನವರಿಯಲ್ಲಿ  ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಸಿದ್ಧತೆ ನಡೆದಿದೆ.

ಪ್ರಸ್ತುತ, 38 ರಷ್ಟಿದೆ  ತುಟ್ಟಿಭತ್ಯೆ ಲಭ್ಯ : 
ಸದ್ಯಕ್ಕೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಇರುವ ತುಟ್ಟಿ ಭತ್ಯೆ 38 ಪ್ರತಿಶತ. ಮುಂದಿನ ದಿನಗಳಲ್ಲಿ ಮತ್ತೆ  4 ಶೇಕಡಾ ಹೆಚ್ಚಳದೊಂದಿಗೆ 42 ಶೇಕಡಾಕ್ಕೆ ಏರಲಿದೆ. ಆದರೆ, ಜನವರಿ ಡಿಎ ಹೆಚ್ಚಳವನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು. ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತ ಮೂಡುವ ನಿರೀಕ್ಷೆ ಇದೆ. ಇದಲ್ಲದೇ ಹೊಸ ವರ್ಷದಲ್ಲಿ ನೌಕರರ ಫಿಟ್ ಮೆಂಟ್ ಅಂಶದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ : Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ಬೆಲೆ .! ಬೆಳ್ಳಿ ಬೆಲೆ ಎಷ್ಟು ಗೊತ್ತಾ ?

ಫಿಟ್‌ಮೆಂಟ್ ಅಂಶ ಪರಿಷ್ಕರಿಸಲು ಆಗ್ರಹ : 
ಫಿಟ್‌ಮೆಂಟ್ ಅಂಶ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಕೇಂದ್ರ ನೌಕರರಿಂದ ಬಹುದಿನಗಳಿಂದ ವ್ಯಕ್ತವಾಗುತ್ತಿದೆ. ನೌಕರರ ವೇತನ ಹೆಚ್ಚಳ ಕುರಿತು ಪ್ರತ್ಯೇಕ ಕಾರ್ಯಕ್ರಮ ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ನಿರೀಕ್ಷಿಸಲಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಕರಡು ಸಿದ್ಧಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ವೇತನ ಆಯೋಗದ ರಚನೆಯ ಮೇಲೆ ಫಿಟ್‌ಮೆಂಟ್ ಅಂಶದ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ವೇತನ ಆಯೋಗದ ಬದಲು ಬೇರೆ ರೀತಿಯಲ್ಲಿ ನೌಕರರ ವೇತನ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಬಹುಶಃ ಇದಕ್ಕಾಗಿ ಸರ್ಕಾರ  ಆಟೋ ಮ್ಯಾಟಿಕ್ ಪೇ ರಿವಿಜನ್ ಫಾರ್ಮುಲಾ  ರಚಿಸಬಹುದು.  ಡಿಎ ಸೂತ್ರದ ಮೇಲೆಯೇ ಸಾಮಾನ್ಯವಾಗಿ ವೇತನವನ್ನು ಹೆಚ್ಚಿಸಲಾಗುವುದು. ಅಂದರೆ ಡಿಎ ಹೆಚ್ಚಳದ ಜೊತೆಗೆ ಸಂಬಳವೂ ಹೆಚ್ಚುತ್ತಲೇ ಇತ್ತು.

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಗುರುವಾರದ ಅಡಿಕೆ ಧಾರಣೆ

ಹೋಳಿಗೂ ಮುನ್ನವೇ ಜನವರಿ ತಿಂಗಳ ತುಟ್ಟಿಭತ್ಯೆಯನ್ನು ನೌಕರರು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2023ರ ಮಾರ್ಚ್ 1ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
7th Pay Commission umper hike on central employees salary DA hike
News Source: 
Home Title: 

ಸರ್ಕಾರಿ ನೌಕರರಿಗೆ ಬಂಪರ್ .! ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್.!

ಸರ್ಕಾರಿ ನೌಕರರಿಗೆ ಬಂಪರ್ .! ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್.! ಕೈ ಸೇರುವುದು ದೊಡ್ಡ ಮೊತ್ತ
Caption: 
7th pay commission latest news
Yes
Is Blog?: 
No
Tags: 
Facebook Instant Article: 
Yes
Highlights: 

ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ 

4 ಶೇಕಡಾ ಹೆಚ್ಚಳದೊಂದಿಗೆ 42 ಶೇಕಡಾಕ್ಕೆ ಏರಲಿದೆ.

ಫಿಟ್‌ಮೆಂಟ್ ಅಂಶ ಪರಿಷ್ಕರಿಸಲು ಆಗ್ರಹ  

Mobile Title: 
ಸರ್ಕಾರಿ ನೌಕರರಿಗೆ ಬಂಪರ್ .! ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್.!
Ranjitha R K
Publish Later: 
No
Publish At: 
Thursday, December 29, 2022 - 11:08
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No