ನವದೆಹಲಿ: 7th Pay Commission Latest News - ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಈ ಹಿಂದೆ ಜುಲೈ 2021ರಲ್ಲಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ DA (DA Hike), DR ಜೊತೆಗೆ HRA ಕೂಡ ಹೆಚ್ಚಿಸಿತ್ತು. ಇದರ ಬಳಕ ಇದೀಗ ಕೇಂದ್ರ ಸರ್ಕಾರಿ ನೌಕರರಿಗಾಗಿ ಆರಂಭಿಸಿದ್ದ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಸ್ಕೀಮ್ (HBA Scheme) ಅನ್ನು ಮಾರ್ಚ್ 2022ರವರೆಗೆ ವಿಸ್ತರಿಸಿದೆ. ಅಂದರೆ ಒಂದು ವೇಳೆ ಯಾವುದೇ ಸರ್ಕಾರಿ ನೌಕರ ಮನೆಯನ್ನು ಖರೀದಿಸಲು ಯೋಜನೆ ರೂಪಿಸುತಿದ್ದರೆ, ಅವರಿಗ ಅಗ್ಗದ ದರದಲ್ಲಿ ಹೋಮ್ ಲೋನ್ ಸೌಲಭ್ಯ ಸಿಗಲಿದೆ.
ಅಗ್ಗದ ಬಡ್ಡಿ ದರದಲ್ಲಿ ಹೋಮ್ ಲೋನ್ ಸಿಗಲಿದೆ
ಕೇಂದ್ರ ಸರ್ಕಾರದ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಯೋಜನೆಯ ಅಡಿ ಸಿಗುವ ಲಾಭವನ್ನು ಇದೀಗ ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ. ಇದರ ಅಡಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಶೇ.7.9ರ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತಿದೆ. HBA ಯೋಜನೆಯಲ್ಲಿ ನೆಮ್ಮದಿ ನೀಡುವ ಮೊದಲು ಕೇಂದ್ರ ಸರ್ಕಾರ (Central Government) ನೌಕರರ ಹಾಗೂ ಪಿಂಚಣಿದಾರರ DA ಹಾಗೂ DR ಹೆಚ್ಚಳ ಮಾಡಿತ್ತು.
ಏನಿದು HBA?
ಕೇಂದ್ರ ಸರ್ಕಾರ ತನ್ನ ನೌಕರರಿಗೆ House Building Advance ನೀಡುತ್ತದೆ. ಇದರಲ್ಲಿ ನೌಕರರು ತಮ್ಮ ಹೆಸರ ಮೇಲೆ ಅಥವಾ ತಮ್ಮ ಪತ್ನಿಯ ಹೆಸರಿನಲ್ಲಿರುವ ಪ್ಲಾಟ್ ನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು. ಈ ಯೋಜನೆ ಅಕ್ಟೋಬರ್ 1, 2020 ರಂದು ಆರಂಭಗೊಂಡಿತ್ತು ಹಾಗೂ ಇದರ ಅಡಿ ಮಾರ್ಚ್ 31, 2022ರವರೆಗೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.7.9ರ ಬಡ್ಡಿ ದರದಲ್ಲಿ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ನೀಡುತ್ತದೆ.
ಮನೆಯ ವಿಸ್ತೀರ್ಣ ಹೆಚ್ಚಿಸಲು ಕೂಡ ಸಿಗುತ್ತೆ ಈ ಅಡ್ವಾನ್ಸ್
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹಾಗೂ HBA ನಿಯಮಗಳ ಅನುಸಾರ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆಯ ನಿರ್ಮಾಣ ಅಥವಾ ಹೊಸ ಮನೆ ಅಥವಾ ಫ್ಲಾಟ್ ಖರೀದಿಗಾಗಿ 34 ತಿಂಗಳ ಬೇಸಿಕ್ ಸ್ಯಾಲರಿ ಅಥವಾ ಅತ್ಯಧಿಕ 25 ಲಕ್ಷ ರೂರೂ. ಅಥವಾ ಮನೆಯ ಬೆಲೆ ಅಥವಾ ಅಡ್ವಾನ್ಸ್ ಮರು ಪಾವತಿಯ ಕ್ಷಮತೆಗೆ ಅನುಗುಣವಾಗಿ ಯಾವುದು ಕಡಿಮೆಯಾಗುತ್ತದೆಯೋ ಅಷ್ಟು ಮೊತ್ತವನ್ನು ಅಡ್ವಾನ್ಸ್ ಪಡೆಯಬಹುದು. ಈ ಅಡ್ವಾನ್ಸ್ ಮೇಲೆ ಶೇ.7.9 ರಷ್ಟು ಬಡ್ಡಿ ಪಾವತಿಸಬೇಕು. ಸತತ 5 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತಾತ್ಕಾಲಿಕ ಉದ್ಯೋಗಿಗಳಿಗೂ ಕೂಡ ಈ ಸೌಲಭ್ಯದ ಲಾಭ ಸಿಗುತ್ತದೆ.
ಈ ಅಡ್ವಾನ್ಸ್ ಪಡೆದು ಬ್ಯಾಂಕ್ ಹೋಮ್ ಲೋನ್ ಮರುಪಾವತಿಸಬಹುದು
ಹೊಸ ಮನೆ ಅಥವಾ ಫ್ಲಾಟ್ ಖರೀದಿಗಾಗಿ ಒಂದು ವೇಳೆ ನೌಕರರು ಬ್ಯಾಂಕ್ ಗೃಹ ಸಾಲ ಪಡೆದಿದ್ದರೆ. HBA ಪಡೆದು ನೌಕರರು ಅದನ್ನು ಮರುಪಾವತಿಸಬಹುದು. ಖಾಯಂ ನೌಕರರ ಜೊತೆಗೆ ಖಾಯಂ ಇಲ್ಲದೆ ಇರುವ ನೌಕರರು ಕೂಡ ಈ ಮುಂಗಡ ಹಣವನ್ನು ಪಡೆದುಕೊಳ್ಳಬಹುದು. ಆದರೆ, ಇದಕ್ಕಾಗಿ ಒಂದು ನಿಯಮವನ್ನು ಮಾಡಲಾಗಿದೆ. ಖಾಯಂ ಇಲ್ಲದೆ ಇರುವ ನೌಕರರು ಸತತವಾಗಿ ಐದು ವರ್ಷಗಳ ಕಾಲ ಸರ್ಕಾರಿ ನೌಕರಿ ಮಾಡಿರಬೇಕು. ನೌಕರರು ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದ ದಿನದಿಂದಲೆ ಮನೆ ನಿರ್ಮಾಣಕ್ಕಾಗಿ ಮುಂಗಡವನ್ನು ಪಡೆಯಬಹುದು. ಅಂದರೆ, ನೀವು ಮೊದಲೇ ಮನೆ ಕಟ್ಟಲು ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರೂ, ನಿಮಗೆ ಸಾಲ ನೀಡಿದ ದಿನದಿಂದ ಈ ಮೊತ್ತ ಲಭ್ಯವಿರುತ್ತದೆ. ಬ್ಯಾಂಕ್-ಮರುಪಾವತಿಗೆ ಮುಂಗಡವನ್ನು ಒಟ್ಟು ಮೊತ್ತದಲ್ಲಿ ನೀಡಲಾಗುತ್ತದೆ. ಆದರೆ, ಉದ್ಯೋಗಿಗಳು ಮುಂಗಡ ನೀಡಿದ ದಿನಾಂಕದಿಂದ ಒಂದು ತಿಂಗಳೊಳಗೆ HBA Utilization Certificate ಸಲ್ಲಿಸಬೇಕು.
ಇದನ್ನೂ ಓದಿ-LIC's Superhit Policy: ಕೇವಲ 233 ರೂ. ಹೂಡಿಕೆ ಮಾಡಿ 17 ಲಕ್ಷ ಪಡೆಯಿರಿ
ಪಿಂಚಣಿದಾರರಿಗೇನು ಲಾಭ?
ಈ ಬಾರಿ ಸರ್ಕಾರ ಪಿಂಚಣಿದಾರರ ವಿಷಯದಲ್ಲಿಯೂ ಕೂಡ ಒಂದು ಮಹತ್ವದ ನಿರ್ಣಯ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ನಿವೃತ್ತ ನೌಕರರ ನಿಧನದ ನಂತರ ಅವರ ಸಂತ್ರಸ್ತ ಸದಸ್ಯರಿಗೆ ಶೇ.50ರಷ್ಟು ಲಾಭ ಸಿಗಲಿದೆ. ನೌಕರರ ಮೇಲೆ ಅವಲಂಭಿತರಾಗಿರುವವರಿಗೆ ಪಿಂಚಣಿಯ ಲಾಭ ಸಿಗಲು ಸರ್ಕಾರಿ ನೌಕರರಿಗೆ ಈ ಮೊದಲಿದ್ದ 7 ವರ್ಷಗಳ ಕಟ್ಟಳೆಯನ್ನು ಇದೀಗ ತೆಗೆದುಹಾಕಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ