Bank Holidays : ಮುಂದಿನ ಐದು ದಿನ ಬ್ಯಾಂಕ್ ರಜೆ , ನಿಮ್ಮೆಲ್ಲ ಕೆಲಸಗಳನ್ನು ತಕ್ಷಣ ಪೂರೈಸಿಕೊಳ್ಳಿ

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಟ್ಟು 7 ಬ್ಯಾಂಕ್ ರಜೆಗಳಿವೆ. ಆದರೆ ದೇಶದ ವಿವಿಧ ಪ್ರದೇಶಗಳಲ್ಲಿ ರಜಾದಿನಗಳು ಒಂದೇ ರೀತಿ ಇರುವುದಿಲ್ಲ.

Written by - Ranjitha R K | Last Updated : Sep 6, 2021, 01:35 PM IST
  • ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳನ್ನು ಶೀಘ್ರ ಪೂರೈಸಿಕೊಳ್ಳಿ
  • ಸತತ ಐದು ದಿನಗಳವರೆಗೆ ಬ್ಯಾಂಕ್ ರಜೆ
  • ಆನ್‌ಲೈನ್ ಬ್ಯಾಂಕಿಂಗ್‌ಗೆ ಯಾವುದೇ ಅಡಚಣೆಯಾಗುವುದಿಲ್ಲ
Bank Holidays : ಮುಂದಿನ ಐದು ದಿನ ಬ್ಯಾಂಕ್ ರಜೆ , ನಿಮ್ಮೆಲ್ಲ ಕೆಲಸಗಳನ್ನು ತಕ್ಷಣ ಪೂರೈಸಿಕೊಳ್ಳಿ  title=
ಸತತ ಐದು ದಿನಗಳವರೆಗೆ ಬ್ಯಾಂಕ್ ರಜೆ (file photo)

ನವದೆಹಲಿ : ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಮೊದಲು, ಈ ತಿಂಗಳಲ್ಲಿ ಎಷ್ಟು ರಜೆ ಇದೆ (Bank Holidays) ಅನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಸೆಪ್ಟೆಂಬರ್ ತಿಂಗಳಲ್ಲಿ ಸತತ 5 ದಿನಗಳವರೆಗೆ ಬ್ಯಾಂಕಿಗೆ ರಜೆ ಇರುತ್ತದೆ.  ಅಷ್ಟು ಮಾತ್ರವಲ್ಲದೆ, ಇಡೀ ತಿಂಗಳಲ್ಲಿ, 12 ದಿನ ಬ್ಯಾಂಕ್ ರಜೆ ಇರುತ್ತದೆ. ಹಾಗಾಗಿ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಹೊಂದಿರುವ ಜನರು, ಈ ಸಮಸ್ಯೆಗಳನ್ನು ಎದುರಿಸಬಹುದು.

 ಸತತ 5 ದಿನಗಳವರೆಗೆ ಬ್ಯಾಂಕ್ ರಜೆ : 
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಟ್ಟು 7 ಬ್ಯಾಂಕ್ ರಜೆಗಳಿವೆ. ಆದರೆ ದೇಶದ ವಿವಿಧ ಪ್ರದೇಶಗಳಲ್ಲಿ ರಜಾದಿನಗಳು ಒಂದೇ ರೀತಿ ಇರುವುದಿಲ್ಲ. ಇವುಗಳಲ್ಲಿ ಕೆಲವು ರಾಜ್ಯಗಳಿಗೆ  ವಿಶೇಷ ರಜಾದಿನಗಳಿರುತ್ತವೆ (Bank Holidays). ಇದರ ಹೊರತಾಗಿ, ಸೆಪ್ಟೆಂಬರ್‌ನಲ್ಲಿ ಬ್ಯಾಂಕುಗಳಿಗೆ ಒಟ್ಟು 6 ದಿನ ವಾರದ ರಜೆ ಇರುತ್ತವೆ. ಆದರೆ ಇದರ ನಂತರವೂ ಒಟ್ಟು ರಜಾದಿನಗಳ ಸಂಖ್ಯೆ 12 ಆಗಿರುತ್ತದೆ. ಹಾಗಾಗಿ ಬ್ಯಾಂಕಿಗೆ ಸಂಬಂಧಪಟ್ಟ ಯಾವುದೇ ಕೆಲಸ ಮಾಡುವ ಮೊದಲು, ಈ ಪಟ್ಟಿಯನ್ನೊಮ್ಮೆ (Bank Holiday List) ಪರಿಶೀಲಿಸಿ ನೋಡಿ. ಸೆಪ್ಟೆಂಬರ್ 8 ರಿಂದ, ಸತತ 5 ದಿನಗಳವರೆಗೆ ಬ್ಯಾಂಕ್ ರಜೆ ಇರುತ್ತದೆ. 

ಇದನ್ನೂ ಓದಿ : EPFO Latest News: ಆರು ಕೋಟಿ ಜನರ ಖಾತೆಗೆ ಹಣ ವರ್ಗಾಯಿಸುತ್ತಿದೆ ಸರ್ಕಾರ, ಫಟಾಫಟ್ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿ

ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿ ನೋಡಿ
ಸೆಪ್ಟೆಂಬರ್ 5 - ಭಾನುವಾರ
ಸೆಪ್ಟೆಂಬರ್ 8 - ಶ್ರೀಮಂತ ಸಂಕರದೇವ ದಿನ (ಗುವಾಹಟಿ)
9 ಸೆಪ್ಟೆಂಬರ್ - ತೀಜ್ ಹರಿತಾಲಿಕಾ (ಗ್ಯಾಂಗ್ಟಾಕ್)
10 ಸೆಪ್ಟೆಂಬರ್ - ಗಣೇಶ ಚತುರ್ಥಿ (Ganesh Chathurthi) (ಅಹಮದಾಬಾದ್, ಬೇಲಾಪುರ, ಕರ್ನಾಟಕ , ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗಪುರ, ಪಣಜಿ)
ಸೆಪ್ಟೆಂಬರ್ 11 - ತಿಂಗಳ ಎರಡನೇ ಶನಿವಾರ 
12 ಸೆಪ್ಟೆಂಬರ್ - ಭಾನುವಾರ

ಆನ್‌ಲೈನ್ ಬ್ಯಾಂಕಿಂಗ್‌ಗೆ ಯಾವುದೇ ಅಡಚಣೆಯಾಗುವುದಿಲ್ಲ:
ಆದಾಗ್ಯೂ, ಈ ಸಮಯದಲ್ಲಿ ಆನ್ಲೈನ್ ​​ಬ್ಯಾಂಕಿಂಗ್ (Online banking) ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ (Digital Banking) ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಎಂದಿನಂತೆ ಹಣ ವರ್ಗಾವಣೆ ಸಾಧ್ಯವಾಗುತ್ತದೆ.

ಇದನ್ನೂ ಓದಿ : LIC Jeevan Anand Policy : LIC ಯ ಈ ಯೋಜನೆಯಲ್ಲಿ ಪ್ರತಿದಿನ 76 ರೂ. ಹೂಡಿಕೆ ಮಾಡಿ ಪಡೆಯಿರಿ 10.33 ಲಕ್ಷ ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News