ಪಿಎಂ ಕಿಸಾನ್ 13 ನೇ ಕಂತಿನ ವರ್ಗಾವಣೆಗೂ ಮುನ್ನ ರೈತರಿಗೆ ಸಿಹಿ ಸುದ್ದಿ.! 14 ಕೋಟಿ ರೈತರ ಸಿಗಲಿದೆ ಲಾಭ

Kisan Credit Card:ಪ್ರಸಕ್ತ ಮತ್ತು ಮುಂದಿನ ಆರ್ಥಿಕ ವರ್ಷಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳಿಗೆ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲಕ್ಕಾಗಿ Interest Subvention Scheme ಅನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

Written by - Ranjitha R K | Last Updated : Nov 24, 2022, 10:56 AM IST
  • ಪಿಎಂ ಕಿಸಾನ್ ಯೋಜನೆಯ ಅನ್ವಯ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ
  • ಈ ಯೋಜನೆಯ 13ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರು
  • ಶೇ. 7 ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ
ಪಿಎಂ ಕಿಸಾನ್ 13 ನೇ ಕಂತಿನ ವರ್ಗಾವಣೆಗೂ ಮುನ್ನ ರೈತರಿಗೆ ಸಿಹಿ ಸುದ್ದಿ.! 14 ಕೋಟಿ ರೈತರ ಸಿಗಲಿದೆ ಲಾಭ   title=
Kisan Credit Card

Kisan Credit Card : ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ, ಪಿಎಂ ಕಿಸಾನ್ ಯೋಜನೆಯ ಅನ್ವಯ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೀಡುತ್ತಿದೆ.  ಈಗಾಗಲೇ ಈ ಯೋಜನೆಯ 12 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಇದೀಗ ರೈತರು ಈ ಯೋಜನೆಯ 13ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ, 13ನೇ ಕಂತು ಬಿಡುಗಡೆಗೂ ಮುನ್ನವೇ ಸರ್ಕಾರ ರೈತರಿಗೆ ಖುಷಿ ಸುದ್ದಿ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ  ದೇಶದ 14 ಕೋಟಿ ರೈತರಿಗೆ ಲಾಭವಾಗಲಿದೆ. ಇದರ ಪ್ರಕಾರ, ಪ್ರಸಕ್ತ ಮತ್ತು ಮುಂದಿನ ಆರ್ಥಿಕ ವರ್ಷಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳಿಗೆ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲಕ್ಕಾಗಿ Interest Subvention Scheme ಅನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

7 ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ : 
ದೇಶದ ರೈತರು ಕೃಷಿ ಮತ್ತು ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಇತರ ಸಂಬಂಧಿತ ಚಟುವಟಿಕೆಗಳಿಗೆ ಸಾಲವನ್ನು ಪಡೆಯಬಹುದು. ಹೌದು, KCC ಮೂಲಕ ಕೃಷಿ ಚಟುವಟಿಕೆಗಳಿಗಾಗಿ ರೈತರು ಮೂರು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಬಡ್ಡಿಯಲ್ಲಿ ಸಾಲವನ್ನು ಪಡೆಯಬಹುದು. ಜೇನುಸಾಕಣೆ, ಅಲ್ಪಾವಧಿ ಬೆಳೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಈ ಯೋಜನೆಯಡಿ ರೈತರಿಗೆ ಶೇ 7ರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ : Gold Price Today : ಇಳಿಕೆಯಾಗುತ್ತಲೇ ಇದೆ ಬಂಗಾರದ ಬೆಲೆ.! ಇಂದಿನ ಬೆಲೆ ಎಷ್ಟು ಗೊತ್ತಾ ?

ಇನ್ನು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ,  ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಸರ್ಕಾರವು ವಾರ್ಷಿಕ 3 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿ ರಿಯಾಯಿತಿಯನ್ನು ನೀಡುತ್ತದೆ. ಈ ರೀತಿಯಾಗಿ, ರೈತರು ಈ ಸಾಲಕ್ಕೆ ವಾರ್ಷಿಕ 4 ಪ್ರತಿಶತದಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆರ್‌ಬಿಐ ಹೊರಡಿಸಿದ ಸುತ್ತೋಲೆಯಲ್ಲಿ, ಸಾಲ ನೀಡುವ ಸಂಸ್ಥೆಗಳಿಗೆ 2022-23 ಮತ್ತು 2023-24 ನೇ ಸಾಲಿಗೆ ಶೇಕಡಾ 1.5 ರಷ್ಟು ಬಡ್ಡಿ ರಿಯಾಯಿತಿ ದರವನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ. 

10 ಕೋಟಿಗೂ ಹೆಚ್ಚು ರೈತರು ಪಿಎಂ ಕಿಸಾನ್‌ನ 13ನೇ ಕಂತಿಗಣ ನಿರೀಕ್ಷೆಯಲ್ಲಿರುವ ಹೊತ್ತಿಗೆ,  ಆರ್‌ಬಿಐ ಈ ಮಾಹಿತಿಯನ್ನು ನೀಡಿದೆ.  ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ನೀಡುವ ಸಲುವಾಗಿ,  ಈ ವರ್ಷ ಕೇಂದ್ರದಿಂದ 2.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗುವುದು ಎಂದು ಈ ಹಿಂದೆಯೇ  ಪ್ರಧಾನಮಂತ್ರಿ  ನರೇಂದ್ರ ಮೋದಿ ತಿಳಿಸಿದ್ದರು. 

ಇದನ್ನೂ ಓದಿ : Milk Price Hike: ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಶಾಕ್: ಇಂದಿನಿಂದ ಹಾಲು-ಮೊಸರು ಬೆಲೆಯಲ್ಲಿ 2 ರೂ. ಹೆಚ್ಚಳ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News