7th Pay Commission : ದೇಶದ ಲಕ್ಷಗಟ್ಟಲೆ ಕೇಂದ್ರ ನೌಕರರಿಗೆ ಸರ್ಕಾರಿ ಸಿಹಿ ಸುದ್ದಿ ನೀಡಿದೆ. 2023 ರ ವರ್ಷವು ಉದ್ಯೋಗಿಗಳಿಗೆ ತುಂಬಾ ಒಳ್ಳೆಯದಾಗಿದೆ. ಮುಂಬರುವ ವರ್ಷದಲ್ಲಿ ಉದ್ಯೋಗಿಗಳ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ತುಟ್ಟಿಭತ್ಯೆಯ ಹೊರತಾಗಿ ಮೂಲ ವೇತನವನ್ನೂ ಸರ್ಕಾರ ಹೆಚ್ಚಿಸಲಿದೆ.
ವೇತನಕ್ಕೆ ಡಿಎ ಸೇರಿಸಲಾಗುವುದು
ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ನೌಕರರ ತುಟ್ಟಿಭತ್ಯೆ ಶೇ.50 ರಷ್ಟಾಗಿದೆ. ಸರ್ಕಾರವು ಡಿಎಯನ್ನು ಶೂನ್ಯಕ್ಕೆ ಇಳಿಸುತ್ತದೆ. ಇದರೊಂದಿಗೆ, ಈ ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಿದೆ, ಇದರಿಂದಾಗಿ ನೌಕರರು ಪಡೆಯುವ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಇದನ್ನೂ ಓದಿ : 7th Pay Commission : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಜನವರಿ 2023 ರಲ್ಲಿ ಡಿಎ ಹೆಚ್ಚಳ
ಕೇಂದ್ರ ಸರ್ಕಾರವು ಜನವರಿ 2023 ರಲ್ಲಿ ಡಿಎಯನ್ನು ಭಾರಿ ಹೆಚ್ಚಿಸಲಿದ್ದು, ನಂತರ ನೌಕರರ ಡಿಎ ಶೇ.41 ಆಗಲಿದೆ. ಅದರ ಅಂಕಿ-ಅಂಶಗಳೂ ಬರಲಾರಂಭಿಸಿವೆ. ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸುತ್ತಿದೆ. ಜನವರಿ ಮತ್ತು ಜುಲೈ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ.
ಸಂಬಳ ಹೇಗೆ ಹೆಚ್ಚಾಗುತ್ತದೆ?
ಈ ವೇಳೆ ನೌಕರರ ಮೂಲ ವೇತನವನ್ನು 18,000 ರೂ. ಎಂದು ಪರಿಗಣಿಸಿ ಲೆಕ್ಕ ಹಾಕಿದರೆ, ಡಿಎ ಶೇ.50ಕ್ಕೆ ಏರಿದರೆ, 9000 ರೂ.ಗಳಷ್ಟು ತುಟ್ಟಿ ಭತ್ಯೆಯಾಗಿ ನೀಡಲಾಗುವುದು. 50% DA ನಲ್ಲಿ, ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಮತ್ತು ಈ 9000 ರೂ. ಅನ್ನು ನಿಮ್ಮ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ ನಿಮ್ಮ ಬೇಸಿಕ್ 18000 ರಿಂದ 27,000 ರೂಪಾಯಿಗಳಿಗೆ ಹೆಚ್ಚಾಗುತ್ತದೆ.
ಇದೆ ಮೊದಲ ಭಾರಿ
ತಜ್ಞರ ಪ್ರಕಾರ, ನಿಯಮಗಳ ಪ್ರಕಾರ, ನೌಕರರು ಪಡೆದ ಡಿಎಯನ್ನು 100% ಮೂಲ ವೇತನಕ್ಕೆ ಸೇರಿಸಲಾಯಿತು. 2016 ರಲ್ಲಿ, ಸರ್ಕಾರವು ನಿಯಮಗಳನ್ನು ಬದಲಾಯಿಸಿತು, ನಂತರವೇ ನೌಕರರ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಿತ್ತು.
ಇದನ್ನೂ ಓದಿ : PPF ನಲ್ಲಿ ₹411 ಠೇವಣಿ ಮಾಡಿ ಮಿಲಿಯನೇರ್ ಆಗಿ : ಹೇಗೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.