ಅಕ್ಕಿ ಬೆಲೆಯಲ್ಲಿ ಭಾರೀ ಕುಸಿತ, ಸರ್ಕಾರದ ಈ ನಿರ್ಧಾರವೇ ಇದಕ್ಕೆ ಕಾರಣ .!

Rice Price in India: ಅಕ್ಕಿ ರಫ್ತಿಯನ್ನು ಭಾರತ ಸರ್ಕಾರ ನಿಷೇಧ ಹೇರಿದೆ. ಕಳೆದ ಒಂದು ವಾರದಲ್ಲಿ ಭತ್ತದ ಬೆಲೆಯಲ್ಲಿ ಕ್ವಿಂಟಾಲ್‌ಗೆ 100 ರಿಂದ 200 ರೂಪಾಯಿಗಳಷ್ಟು ಕುಸಿತವಾಗಿದೆ.

Written by - Ranjitha R K | Last Updated : Sep 16, 2022, 03:25 PM IST
  • ಅಕ್ಕಿ ಬೆಲೆಯಲ್ಲಿ ಇಳಿಕೆ
  • ಕ್ವಿಂಟಾಲ್‌ಗೆ 100 ರಿಂದ 200 ರೂಪಾಯಿಗಳಷ್ಟು ಕುಸಿತ
  • ಹೊಸ ದರ ಎಷ್ಟು ತಿಳಿಯಿರಿ
 ಅಕ್ಕಿ ಬೆಲೆಯಲ್ಲಿ ಭಾರೀ ಕುಸಿತ,  ಸರ್ಕಾರದ ಈ ನಿರ್ಧಾರವೇ ಇದಕ್ಕೆ ಕಾರಣ .!  title=
rice price latest (file photo)

Rice Price in India : ಅಕ್ಕಿ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ.  ಈ ನಿರ್ಧಾರದ ನಂತರ ಅಕ್ಕಿ ಬೆಲೆಯಲ್ಲಿ  200 ರೂ.ಗಳಷ್ಟು ಇಳಿಕೆಯಾಗಿದೆ. ಒಡೆದ ಅಕ್ಕಿ ರಫ್ತಿಯನ್ನು ಭಾರತ ಸರ್ಕಾರ ನಿಷೇಧ ಹೇರಿದೆ. ಭಾರತದ ಈ ನಿರ್ಧಾರ ಚೀನಾದಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಬಹುದು. ಆದರೆ, ಸರ್ಕಾರದ ಈ ನಿರ್ಧಾರದಿಂದ ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಿದೆ. 

ಎಷ್ಟು ಅಗ್ಗವಾಗಿದೆ ಅಕ್ಕಿ? :
ಕಳೆದ ಒಂದು ವಾರದಲ್ಲಿ ಭತ್ತದ ಬೆಲೆಯಲ್ಲಿ ಕ್ವಿಂಟಾಲ್‌ಗೆ 100 ರಿಂದ 200 ರೂಪಾಯಿಗಳಷ್ಟು ಕುಸಿತವಾಗಿದೆ. ಚಿಲ್ಲರೆ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬರದಿದ್ದರೂ, ಶೀಘ್ರದಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲೂ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಲಿದೆ.  ಗ್ರಾಹಕ ವ್ಯವಹಾರದ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 15 ರಂದು ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಕೆಜಿಗೆ 38.34 ರೂ. ಆಗಿದೆ. 

ಇದನ್ನೂ ಓದಿ : SCO ಶೃಂಗಸಭೆ 2022, ಪಿಎಂ ಮೋದಿ ಭಾಷಣ : ಆಹಾರ ಭದ್ರತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪ

ಚೀನಾದ ನಂತರ ಭಾರತವು ಅಕ್ಕಿಯನ್ನು ಉತ್ಪಾದಿಸುವ ಅತಿ ದೊಡ್ಡ ರಾಷ್ಟ್ರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಅಕ್ಕಿ 40 ಪ್ರತಿಶತದಷ್ಟು ಪಾಲು ಪಡೆದಿದೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತವು 21.2 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಅದರಲ್ಲಿ 34.9 ಲಕ್ಷ ಟನ್ ಬಾಸ್ಮತಿ ಅಕ್ಕಿ ಆಗಿತ್ತು.  

ಭಾರತದ ಜನರಿಗೆ ಅಕ್ಕಿಯ ಕೊರತೆಯಾಗುವುದಿಲ್ಲ :
ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಹೆಚ್ಚಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ದೇಶದ ನಾಗರಿಕರು ಅಕ್ಕಿಯ ಕೊರತೆಯನ್ನು ಎದುರಿಸಬೇಕಾಗಿಲ್ಲ. ಕಂದಾಯ ಇಲಾಖೆಯ ಅಧಿಸೂಚನೆ ಪ್ರಕಾರ ಅಕ್ಕಿ ಮತ್ತು ಬ್ರೌನ್ ರೈಸ್ ಮೇಲೆ ಶೇ.20 ರಫ್ತು ಸುಂಕ ವಿಧಿಸಲಾಗಿದೆ.

ಇದನ್ನೂ ಓದಿ :  Gulam Nabi Azad ಬಳಿಕ ಇದೀಗ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆಯೇ ಕರಣ್ ಸಿಂಗ್?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News