ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ಬಿಗ್ ಅಪ್ಡೇಟ್, ಬದಲಾಗಲಿದೆಯೇ ಈ ನಿಯಮ!

Minimum Balance in Bank Account: ಯಾವುದೇ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್  ನಿರ್ವಹಿಸುವುದು ಗ್ರಾಹಕರ ಜವಾಬ್ದಾರಿ ಆಗಿರುತ್ತದೆ. ಉಳಿತಾಯ ಖಾತೆಯನ್ನು ತೆರೆಯುವಾಗ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವ ನಿಯಮದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗಿರುತ್ತದೆ. ಆದರೆ, ನಾನಾ ಕಾರಣಗಳಿಂದಾಗಿ ಹಲವು ಬಾರಿ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಕೂಡ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಈ ಕುರಿತಂತೆ ಇದೀಗ ಬಿಗ್ ಅಪ್ಡೇಟ್ ಲಭ್ಯವಾಗಿದ್ದು ಈ ನಿಯಮ ಶೀಘ್ರದಲ್ಲೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Nov 24, 2022, 12:20 PM IST
  • ಗಮನಾರ್ಹವಾಗಿ, ಬ್ಯಾಂಕ್‌ಗಳು ಸಾಲ ಇತ್ಯಾದಿಗಳನ್ನು ನೀಡಲು ನಿರ್ದಿಷ್ಟ ಮೊತ್ತದವರೆಗೆ ಠೇವಣಿ ಇಡಬೇಕು
  • ತಮ್ಮ ಹಣಕಾಸಿನ ಅನುಪಾತವನ್ನು ಕಾಪಾಡಿಕೊಳ್ಳಬೇಕು.
  • ಅವರು ಗ್ರಾಹಕರ ಠೇವಣಿಗಳಿಂದ ಮತ್ತು ಅವರ ಮೇಲೆ ವಿಧಿಸುವ ದಂಡದಿಂದ ಹೊರತೆಗೆಯುವ ವೆಚ್ಚವನ್ನು ಹೊಂದಿರಬೇಕು.
ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ಬಿಗ್ ಅಪ್ಡೇಟ್, ಬದಲಾಗಲಿದೆಯೇ ಈ ನಿಯಮ!  title=
Minimum Balance

Minimum Balance in Bank Account: ನಿಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದ ಕಾರಣ ನೀವು ಎಂದಾದರೂ ದಂಡ ಪಾವತಿಸಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ, ನಿಮಗೊಂದು ಗುಡ್ ನ್ಯೂಸ್ ಇದೆ. ವಾಸ್ತವವಾಗಿ, ಯಾವುದೇ ಬ್ಯಾಂಕಿನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆದಾಗ ಅದರಲ್ಲಿ ಕನಿಷ್ಠ ಮಿತಿಯನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಖಾತೆದಾರರು ತಮ್ಮ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ಬ್ಯಾಂಕ್ ಖಾತೆದಾರನಿಗೆ ದಂಡವನ್ನು ವಿಧಿಸುತ್ತದೆ. ಆದರೆ, ಶೀಘ್ರದಲ್ಲೇ ವಿವಿಧ ಬ್ಯಾಂಕ್‌ಗಳ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ನಿಯಮದಲ್ಲಿ ಬದಲಾವಣೆ ಆಗಲಿದೆ. ಈ ಕುರಿತಂತೆ ಹಣಕಾಸು ಖಾತೆ ರಾಜ್ಯ ಸಚಿವ ಭಗವಂತ್ ಕಿಶನರಾವ್ ಕರದ್ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. 

ವಾಸ್ತವವಾಗಿ, ತಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸದಂತೆ ನಿಯಮ ಜಾರಿಗೆ ತರಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಭಗವಂತ್ ಕಿಶನ್‌ರಾವ್ ಕರದ್, ಬ್ಯಾಂಕ್‌ಗಳು ಸ್ವತಂತ್ರ ಸಂಸ್ಥೆಗಳು. ಅವರ ಆಡಳಿತ ಮಂಡಳಿಗಳು ದಂಡವನ್ನು ಮನ್ನಾ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ. ತಮ್ಮ ಖಾತೆಗೆಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡದ ಖಾತೆಗಳ ಮೇಲಿನ ದಂಡವನ್ನು ರದ್ದುಗೊಳಿಸಲು ಬ್ಯಾಂಕ್‌ಗಳ ಆಡಳಿತ ಮಂಡಳಿ ನಿರ್ಧರಿಸಬಹುದು ಎಂದಿದ್ದಾರೆ. 

ಇದನ್ನೂ ಓದಿ- PM Jan Dhan Yojana: ಜನ್ ಧನ್ ಯೋಜನೆ ಖಾತೆದಾರರಿಗೆ ಸರ್ಕಾರ ನೀಡುತ್ತಿದೆ 10,000 ರೂ., ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ

ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ಬ್ಯಾಂಕ್ ಏಕೆ ದಂಡ ವಿಧಿಸುತ್ತದೆ?
ಗಮನಾರ್ಹವಾಗಿ, ಬ್ಯಾಂಕ್‌ಗಳು ಸಾಲ ಇತ್ಯಾದಿಗಳನ್ನು ನೀಡಲು ನಿರ್ದಿಷ್ಟ ಮೊತ್ತದವರೆಗೆ ಠೇವಣಿ ಇಡಬೇಕು ಮತ್ತು ತಮ್ಮ ಹಣಕಾಸಿನ ಅನುಪಾತವನ್ನು ಕಾಪಾಡಿಕೊಳ್ಳಬೇಕು. ಬ್ಯಾಂಕ್ ಖಾತೆಯನ್ನು ನಿರ್ವಹಿಸುವುದು ವೆಚ್ಚದಲ್ಲಿ ಬರುತ್ತದೆ. ಅದಕ್ಕಾಗಿಯೇ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರು ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸಲು ವಿಫಲರಾದಾಗ ಅವರಿಗೆ ದಂಡ ವಿಧಿಸುತ್ತವೆ. ಇದರ ಹೊರತಾಗಿ, ನೀವು ಠೇವಣಿ ಇಡುವ ಹಣ ಮತ್ತು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ನೀವು ಪಾವತಿಸುವ ದಂಡವು ಬ್ಯಾಂಕಿನ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಹೋಗುತ್ತದೆ, ಅದಕ್ಕಾಗಿಯೇ ಬ್ಯಾಂಕುಗಳು ದಂಡ ವಿಧಿಸುವಂತಹ ನಿಯಮಗಳನ್ನು ಹೊಂದಿವೆ.

ಯಾವ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಲ್ಲಿ ಎಷ್ಟು ಮಿನಿಮಂ ಬ್ಯಾಲೆನ್ಸ್ ಹೊಂದಿರುವುದು ಅಗತ್ಯ?
ನೀವು ಭಾರತದ ಅತಿ ದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮ್ಮ ಖಾತೆಯಲ್ಲಿ ಇಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಅತ್ಯಗತ್ಯ-
* ಗ್ರಾಮೀಣ ಪ್ರದೇಶದ ಎಸ್ಬಿಐ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ 1,000 ರೂ. ಮಿನಿಮಂ ಬ್ಯಾಲೆನ್ಸ್ ಹೊಂದಿರಬೇಕು.
* ಅರೆ-ನಗರ ಪ್ರದೇಶಗಳ ಎಸ್ಬಿಐ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ 2,000 ರೂ. ಮಿನಿಮಂ ಬ್ಯಾಲೆನ್ಸ್ ಹೊಂದಿರಬೇಕು.
* ಮೆಟ್ರೋ ನಗರಗಳಲ್ಲಿ ಎಸ್ಬಿಐ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ 3,000 ರೂ. ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. 

ಇದನ್ನೂ ಓದಿ- Milk Price Hike: ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಶಾಕ್: ಇಂದಿನಿಂದ ಹಾಲು-ಮೊಸರು ಬೆಲೆಯಲ್ಲಿ 2 ರೂ. ಹೆಚ್ಚಳ!

ಅಂತೆಯೇ, ಮೆಟ್ರೋ ನಗರಗಳಲ್ಲಿ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಖಾತೆಯನ್ನು ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ 10,000 ರೂ.ಗಳ ಮಿತಿಯನ್ನು ನಿರ್ವಹಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News