ಪೆಟ್ರೋಲ್-ಡೀಸೆಲ್ ಬಗ್ಗೆ ಬಂದಿದೆ ಬಿಗ್ ನ್ಯೂಸ್! ಬಹಳ ಸಮಯದ ಬಳಿಕ ಇಳಿಕೆಯಾಗುತ್ತಾ ಬೆಲೆ?

BPCL ಹೊರತುಪಡಿಸಿ, ಇತರ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ಇಂಡಿಯನ್ ಆಯಿಲ್ ಮತ್ತು HPCL ಸುಮಾರು ಐದು ತಿಂಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಬದಲಾಯಿಸಲಿಲ್ಲ.

Written by - Bhavishya Shetty | Last Updated : Aug 30, 2022, 08:59 AM IST
    • ಕೆಲ ತಿಂಗಳುಗಳಲ್ಲಿ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ನಿರಂತರ ಏರಿಳಿತ
    • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ
    • ಬಿಪಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಸಿಂಗ್ ಮಾಹಿತಿ
ಪೆಟ್ರೋಲ್-ಡೀಸೆಲ್ ಬಗ್ಗೆ ಬಂದಿದೆ ಬಿಗ್ ನ್ಯೂಸ್! ಬಹಳ ಸಮಯದ ಬಳಿಕ ಇಳಿಕೆಯಾಗುತ್ತಾ ಬೆಲೆ? title=

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಭಾರತೀಯ ಇಂಧನ ವಿತರಕ ಕಂಪನಿಗಳು ಪೆಟ್ರೋಲ್ ಮತ್ತು ಎಲ್ ಪಿಜಿ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿದೆ. ಆದರೆ ಡೀಸೆಲ್ ಮಾರಾಟದಲ್ಲಿ ಕಂಪನಿಗಳು ಇನ್ನೂ ನಷ್ಟವನ್ನು ಎದುರಿಸುತ್ತಿವೆ. ದೇಶದ ಎರಡನೇ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಫೋನ್‌ನಲ್ಲಿ ಈ ಲಕ್ಷಣಗಳು ಕಂಡುಬಂದರೆ ಹುಷಾರಾಗಿರಿ, ನಿಮ್ಮ ಫೋನ್ ಹ್ಯಾಕ್ ಆಗಿರಬಹುದು

ಕಳೆದ ನಾಲ್ಕೈದು ತಿಂಗಳುಗಳಲ್ಲಿ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ನಿರಂತರ ಏರಿಳಿತದಿಂದಾಗಿ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂದು ಅವರು ಹೇಳಿದರು. 'ಒಂದು ದಿನದಲ್ಲಿ, ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಐದು-ಏಳು ಡಾಲರ್‌ಗಳವರೆಗೆ ಏರಿಳಿತಗೊಳ್ಳುತ್ತಿವೆ. ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ, ನಾವು ಗ್ರಾಹಕರಿಗೆ ಹೊರೆಯಾಗುವುದಿಲ್ಲ. ಅಂತಹ ಏರಿಳಿತದ ಹೊರೆಯನ್ನು ಯಾವುದೇ ವಿತರಕರು ಹೊರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.  

BPCL ಹೊರತುಪಡಿಸಿ, ಇತರ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ಇಂಡಿಯನ್ ಆಯಿಲ್ ಮತ್ತು HPCL ಸುಮಾರು ಐದು ತಿಂಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಬದಲಾಯಿಸಲಿಲ್ಲ. 

ಇದನ್ನೂ ಓದಿ: 8 ಬ್ಯಾಂಕುಗಳ ಮೇಲೆ ಲಕ್ಷ ಲಕ್ಷ ದಂಡ ವಿಧಿಸಿದ RBI: ನಿಮ್ಮ ಖಾತೆಯೂ ಇಲ್ಲಿದೆಯೇ?

ಒಂದು ಕಾಲದಲ್ಲಿ ಪೆಟ್ರೋಲಿಯಂ ಕಂಪನಿಗಳು ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಹೆಚ್ಚಿರುವುದರಿಂದ ಪ್ರತಿ ಲೀಟರ್ ಡೀಸೆಲ್ ಮೇಲೆ 20-25 ರೂ ಮತ್ತು ಪೆಟ್ರೋಲ್ ಮೇಲೆ 14-18 ರೂ ನಷ್ಟವನ್ನು ಎದುರಿಸುತ್ತಿದ್ದವು. ಆದರೆ ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕುಸಿತದ ನಂತರ, ಈ ನಷ್ಟವು ಗಣನೀಯವಾಗಿ ಕಡಿಮೆಯಾಗಿದೆ. ಮುಂದಿನ ತಿಂಗಳಿನಿಂದ ಎಲ್‌ಪಿಜಿಯಲ್ಲಿ ಯಾವುದೇ ನಷ್ಟವಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಅದೇ ರೀತಿ ಪೆಟ್ರೋಲ್ ಮೇಲೆ ನಮಗೆ ಯಾವುದೇ ನಷ್ಟ ಆಗುತ್ತಿಲ್ಲ. ಆದರೆ ಡೀಸೆಲ್ ಮೇಲೆ ಇನ್ನೂ ನಷ್ಟದ ಪರಿಸ್ಥಿತಿ ಇದೆ ಎಂದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News