BSNL Bumper Offer: ಏರ್ಟೆಲ್-ಜಿಯೋ ಬೆವರಿಳಿಸಿದ ಬಿಎಸ್ಎನ್ಎಲ್ ನಿಂದ ಗ್ರಾಹಕರಿಗೆ ಅದ್ಭುದ ಕೊಡುಗೆ

BSNL Special Offers: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಲವು ವಿಶೇಷ ಕೊಡುಗೆಗಳನ್ನು ಜಾರಿಗೆ ತನಿದೆ. ಗ್ರಾಹಕರು ಈ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಂಪನಿ ಹೇಳಿದೆ, ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ,  

Written by - Nitin Tabib | Last Updated : Aug 6, 2022, 05:26 PM IST
  • ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ ಸಂಚಾರ್ ನಿಗಮ್ ಲಿಮಿಟೆಡ್
  • ಇತ್ತೀಚೆಗೆ ಹಲವು ಹೊಸ ಪ್ರಮೋಷನಲ್ ಕೊಡುಗೆಗಳನ್ನು ಬಿಡುಗಡೆ ಮಾಡಿದೆ,
  • ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, BSNL ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ,
BSNL Bumper Offer: ಏರ್ಟೆಲ್-ಜಿಯೋ ಬೆವರಿಳಿಸಿದ ಬಿಎಸ್ಎನ್ಎಲ್ ನಿಂದ ಗ್ರಾಹಕರಿಗೆ ಅದ್ಭುದ ಕೊಡುಗೆ  title=
BSNL Bumper Offer

BSNL Promotional Independence Day Offers: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ ಸಂಚಾರ್ ನಿಗಮ್ ಲಿಮಿಟೆಡ್ ಇತ್ತೀಚೆಗೆ ಹಲವು ಹೊಸ ಪ್ರಮೋಷನಲ್ ಕೊಡುಗೆಗಳನ್ನು ಬಿಡುಗಡೆ ಮಾಡಿದೆ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, BSNL ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ, Jio, Airtel ಮತ್ತು Vodafone Idea ಬಳಿ ಇಂತಹ ಯಾವುದೇ ಕೊಡುಗೆ ಇಲ್ಲ. ಈ ಕೊಡುಗೆಗಳು ಡೇಟಾ ಮತ್ತು ಟಾಕ್ ಟೈಮ್ ಎರಡನ್ನು ಕೂಡ ಒಳಗೊಂಡಿದ್ದು, ಗ್ರಾಹಕರು ಅವುಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಂಪನಿ ಹೇಳಿದೆ. ಈ ಕೊಡುಗೆಗಳು ಯಾವುವು, ಅವುಗಳನ್ನು ಹೇಗೆ ಪಡೆಯಬಹುದು ಮತ್ತು ಅವುಗಳ ಕೊನೆಯ ದಿನಾಂಕ ಯಾವುದು ಎಂಬುದನ್ನು ನಾವು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

BSNL ನ ಬಂಪರ್ ಧಮಾಕಾ!
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, BSNL ತನ್ನ ಬಳಕೆದಾರರಿಗೆ ಹಲವು ವಿಶೇಷ ಕೊಡುಗೆಗಳನ್ನು ನೀಡಿದೆ, ಈ ಕೊಡುಗೆಗಳ ಲಾಭವನ್ನು ಆಗಸ್ಟ್ 15 ರಿಂದ ನೀವು ಪಡೆಯಬಹುದು ಮತ್ತು ಸೀಮಿತ ಅವಧಿಗೆ ಮಾತ್ರ ಈ ಕೊಡುಗೆಗಳನ್ನು ನೀಡಲಾಗುತ್ತಿದೆ. ಮೊದಲ ಪ್ರಮೋಶನಲ್ ಕೊಡುಗೆಯ ಅಡಿಯಲ್ಲಿ, ಬಳಕೆದಾರರು 150 ರೂಪಾಯಿಗಳ ಟಾಪ್-ಅಪ್ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದರೆ, ಅವರಿಗೆ 150 ರೂಪಾಯಿಗಳ ಟಾಕ್ ಟೈಮ್ ಸಿಗಲಿದೆ. ಈ ಕೊಡುಗೆಯ ಲಾಭವನ್ನು ನೀವು ಆಗಸ್ಟ್ 15, 2022 ರಿಂದ ಆಗಸ್ಟ್ 21, 2022 ರ ನಡುವೆ ಮಾತ್ರ ಪಡೆಯಬಹುದು.

ಇದನ್ನೂ ಓದಿ-ಸ್ಮಾರ್ಟ್‌ಫೋನ್ ಕ್ಲೀನ್ ಮಾಡುವಾಗ ಇರಲಿ ಎಚ್ಚರ, ಈ ತಪ್ಪುಗಳಾದರೆ ನಿಮಿಷಗಳಲ್ಲಿ ಹಾಳಾಗುತ್ತೆ ಫೋನ್

BSNL ಉಚಿತ 75GB ಇಂಟರ್ನೆಟ್ ನೀಡುತ್ತಿದೆ!
ಟಾಕ್‌ಟೈಮ್‌ನ ಹೊರತಾಗಿ, BSNL ಬಳಕೆದಾರರು ಇತರೆ ಲಾಭಗಳನ್ನು ಪಡೆದುಕೊಳ್ಳಬಹುದಾದ ಹಲವು ಯೋಜನೆಗಳಿವೆ. ನೀವು BSNL ನ ರೂ 2,399 ಅಥವಾ ರೂ 2,999 ರೀಚಾರ್ಜ್ ಪ್ಲಾನ್‌ಗಳನ್ನು ಖರೀದಿಸಿದರೆ, ಯೋಜನೆಗಳ ಪ್ರಯೋಜನಗಳೊಂದಿಗೆ ನಿಮಗೆ 75GB ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡಲಾಗುತ್ತದೆ. ಆಗಸ್ಟ್ 31, 2022 ರಂದು ಅಥವಾ ಅದಕ್ಕಿಂತ ಮೊದಲು ನೀವು ಈ ಯೋಜನೆಗಳನ್ನು ಖರೀದಿಸಿದಾಗ ಮಾತ್ರ ಈ ಕೊಡುಗೆಯನ್ನು ಲಾಭವನ್ನು ನೀವು ಆನಂದಿಸಬಹುದು.

ಇದನ್ನೂ ಓದಿ-ಈ 5G ಸ್ಮಾರ್ಟ್‌ಫೋನ್‌ ಮೇಲೆ ಹಿಂದೆದೂ ಕಾಣದ ರಿಯಾಯಿತಿ. !

ಪ್ರಸ್ತುತ ಯಾವುದೇ ಟೆಲಿಕಾಂ ಕಂಪನಿಯು ಅಂತಹ ಕೊಡುಗೆಗಳನ್ನು ನೀಡುತ್ತಿಲ್ಲ  ಎಂಬುದು ಇಲ್ಲಿ ಗಮನಾರ್ಹ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News