DA Hike: 48 ಲಕ್ಷ ಉದ್ಯೋಗಿಗಳಿಗೆ ಬಜೆಟ್ ಜಾಕ್ ಪಾಟ್... ಡಿಎ ಹೆಚ್ಚಳ, ದುಪ್ಪಟ್ಟು ಸಂಬಳ.!

Salary Hike: ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಅನ್ನು 01 ಫೆಬ್ರವರಿ 2024 ರಂದು ಮಂಡಿಸಲು ನಿರ್ಧರಿಸಲಾಗಿದೆ. 

Written by - Chetana Devarmani | Last Updated : Jan 13, 2024, 09:36 AM IST
  • ಮೋದಿ ಸರ್ಕಾರದ ಮಧ್ಯಂತರ ಬಜೆಟ್
  • ನೌಕರರ ಮೂಲ ವೇತನ ಹೆಚ್ಚಳ ಸಾಧ್ಯತೆ
  • ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬಹುದು
DA Hike: 48 ಲಕ್ಷ ಉದ್ಯೋಗಿಗಳಿಗೆ ಬಜೆಟ್ ಜಾಕ್ ಪಾಟ್... ಡಿಎ ಹೆಚ್ಚಳ, ದುಪ್ಪಟ್ಟು ಸಂಬಳ.! title=

DA Hike: ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಅನ್ನು 01 ಫೆಬ್ರವರಿ 2024 ರಂದು ಮಂಡಿಸಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಆಗಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಹಲವಾರು ಜನಪ್ರಿಯ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. 8 ನೇ ವೇತನ ಆಯೋಗವನ್ನು ಪರಿಗಣಿಸಿ ನೌಕರರ ಮೂಲ ವೇತನ ರೂ.18000 ದಿಂದ ರೂ.26000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. 

ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬಹುದು:

ವಾಸ್ತವವಾಗಿ, ಪ್ರಸ್ತುತ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶ 2.57 ಮತ್ತು ಮೂಲ ವೇತನ 18000 ಆಗಿದೆ. 3.68ಕ್ಕೆ ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂದು ಕೇಂದ್ರ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ. ಈ ವೇಳೆ 48 ಲಕ್ಷಕ್ಕೂ ಅಧಿಕ ಕೇಂದ್ರ ನೌಕರರ ಮೂಲ ವೇತನ ಹೆಚ್ಚಳದ ಬಗ್ಗೆ ಬಜೆಟ್ ನಲ್ಲಿ ದೊಡ್ಡ ಘೋಷಣೆ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಮೋದಿ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ನೌಕರರ ವೇತನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. 7 ನೇ ವೇತನ ಆಯೋಗದ ಅಡಿಯಲ್ಲಿ, ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು 3.00 ಅಥವಾ 3.68 ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಆದರೆ, ಅಧಿಕೃತ ದೃಢೀಕರಣ ಇನ್ನಷ್ಟೇ ಆಗಬೇಕಿದೆ.

ಇದನ್ನೂ ಓದಿ: 'ಆಯುಷ್ಮಾನ್' ಲಾಭಾರ್ಥಿಗಳಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಈ ಘೋಷಣೆ ಸಾಧ್ಯತೆ! 

ಸಂಬಳದಲ್ಲಿ ಎಷ್ಟು ಏರಿಕೆಯಾಗುವುದು? 

ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.00 ಅಥವಾ 3.68 ಕ್ಕೆ ಹೆಚ್ಚಿಸಿದರೆ, ಮೂಲ ವೇತನವು ರೂ.3000 ರಿಂದ ರೂ.8000 ಮತ್ತು ರೂ.18000 ರಿಂದ ರೂ.21000 ಅಥವಾ ರೂ.26000 ಕ್ಕೆ ಹೆಚ್ಚಾಗುತ್ತದೆ. ಉದಾಹರಣೆಗೆ, ಕೇಂದ್ರ ಉದ್ಯೋಗಿಯ ಮೂಲ ವೇತನ ರೂ. 18,000, ಭತ್ಯೆಗಳನ್ನು ಹೊರತುಪಡಿಸಿ ಅವರ ವೇತನವು ರೂ.18,000 X 2.57 = ರೂ.46,260 ಆಗಿರುತ್ತದೆ. 3.68 ಏರಿಕೆ ಆದರೆ ಸಂಬಳ ರೂ.66,240 ಆಗುತ್ತದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ 2016ರಲ್ಲಿ ಫಿಟ್‌ಮೆಂಟ್ ಅಂಶವನ್ನು ಏರಿಸಿದ್ದು, ಅದೇ ವರ್ಷದಿಂದ 7ನೇ ವೇತನ ಆಯೋಗವನ್ನೂ ಜಾರಿಗೆ ತಂದಿದೆ. 

ಎಂಟನೇ ವೇತನ ಆಯೋಗ ಜಾರಿಯಾಗುವುದೇ?

2024ರ ಲೋಕಸಭೆ ಚುನಾವಣೆಗೂ ಮುನ್ನ 8ನೇ ವೇತನ ಆಯೋಗದ ಕುರಿತು ದೊಡ್ಡ ಘೋಷಣೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಆದರೆ 8ನೇ ವೇತನ ಆಯೋಗವನ್ನು ಜಾರಿಗೆ ತರುವ ಯಾವುದೇ ಉದ್ದೇಶವಿಲ್ಲ ಎಂದು ಮೋದಿ ಸರಕಾರ ಈ ಹಿಂದೆ ಸಂಸತ್ತಿನಲ್ಲಿ ಹಲವು ಬಾರಿ ಸ್ಪಷ್ಟಪಡಿಸಿದೆ. ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಮ್ಮೆ ಡಿಎ ಹೆಚ್ಚಳವಾಗುವ ನಿರೀಕ್ಷೆ ಇದೆ. 

ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಹೊಸ ಸಂತಸದ ಸುದ್ದಿ! ಬಜೆಟ್ 2024 ರಲ್ಲಿ ₹50 ಸಾವಿರ ಹೆಚ್ಚುವರಿ ತೆರಿಗೆ ವಿನಾಯ್ತಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News