Business Opportunity: ಕೇವಲ 10000 ರೂ. ವಿನಿಯೋಗಿಸಿ ಲಕ್ಷಾಂತರ ಗಳಿಕೆ ಮಾಡಿ

Business Opportunity - ಒಂದು ವೇಳೆ ನೀವೂ ಕೂಡ ಮನೆಯಲ್ಲಿಯೇ ಇದ್ದು ಯಾವುದಾದರೊಂದು ಬಿಸಿನೆಸ್ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನೀವು ಬ್ರೆಡ್ ದಯಾರಿಸುವ ಬಿಸಿನೆಸ್ ಆರಂಭಿಸಬಹುದು. ಇದರಲ್ಲಿ ಹೆಚ್ಚು ಸಮಯಾವಕಾಶ ಕೂಡ ಬೇಕಾಗುವುದಿಲ್ಲ. ಬ್ರೆಡ್ ತಯಾರಿಸುವ ಮೂಲಕ ನೀವು ಬೇಕರಿ ಆರಂಭಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಪ್ಲೈ ಕೂಡ ಮಾಡಬಹುದು. ಇದೊಂದು ಅತಿ ಹೆಚ್ಚು ಆದಾಯ ನೀಡುವ ಬಿಸಿನೆಸ್ ಆಗಿದ್ದು ಇದಕ್ಕೆ ಡಿಮಾಂಡ್ ಕೂಡ ಹೆಚ್ಚಾಗಿದೆ.

Written by - Nitin Tabib | Last Updated : Jul 3, 2021, 10:42 PM IST
  • ಮನೆಯಲ್ಲಿಯೇ ಕುಳಿತು ಬ್ರೆಡ್ ತಯಾರಿಕಾ ಉದ್ಯಮ ಆರಂಭಿಸಿ.
  • ಕೇವಲ 10 ಸಾವಿರ ಬಂಡವಾಳದಲ್ಲಿ ನೀವು ಈ ಉದ್ಯಮ ಆರಂಭಿಸಬಹುದು.
  • ಇದಕ್ಕೆ ಸಮಯ ಕೂಡ ತುಂಬಾ ಕಡಿಮೆ ಬೇಕಾಗುತ್ತದೆ.
Business Opportunity: ಕೇವಲ 10000 ರೂ. ವಿನಿಯೋಗಿಸಿ ಲಕ್ಷಾಂತರ ಗಳಿಕೆ ಮಾಡಿ title=
Business Opportunity (File Photo)

Business Opportunity - ಒಂದು ವೇಳೆ ನೀವೂ ಕೂಡ ಮನೆಯಲ್ಲಿಯೇ (Earn Money From Home) ಇದ್ದು ಯಾವುದಾದರೊಂದು ಬಿಸಿನೆಸ್ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನೀವು ಬ್ರೆಡ್ ದಯಾರಿಸುವ ಬಿಸಿನೆಸ್ (Business Opportunity) ಆರಂಭಿಸಬಹುದು. ಇದರಲ್ಲಿ ಹೆಚ್ಚು ಸಮಯಾವಕಾಶ ಕೂಡ ಬೇಕಾಗುವುದಿಲ್ಲ. ಬ್ರೆಡ್ ತಯಾರಿಸುವ (Bread Making Business) ಮೂಲಕ ನೀವು ಬೇಕರಿ ಆರಂಭಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಪ್ಲೈ ಕೂಡ ಮಾಡಬಹುದು. ಆಷ್ಟೇ ಅಲ್ಲ ಇದರಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಅವಶ್ಯಕತೆ ಕೂಡ ಇಲ್ಲ. ಕೊರೊನಾ ವೈರಸ್ ಹಿನ್ನೆಲೆ ಘೋಶಿಸಲಾದ ಲಾಕ್ ಡೌನ್ ಬಳಿಕ ಬ್ರೆಡ್ ತಿನ್ನುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

10,000 ರೂ. ಹೂಡಿಕೆ
ಈ ಉದ್ಯಮ ಆರಂಭಿಸಲು (How To Start Bread Making Business) ನಿಮಗೆ 10000 ರೂ. ಅವಶ್ಯಕತೆ ಬೀಳಲಿದೆ. ಬ್ರೆಡ್ ತಯಾರಿಸಲು ಬೇಕಾಗುವ ಸಾಮಗ್ರಿ: ಗೋದಿ ಹಿಟ್ಟು ಅಥವಾ ಮೈದಾ, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್ ಅಥವಾ ಈಸ್ಟ್, ಡ್ರೈಫ್ರೂಟ್ ಹಾಗೂ ಮಿಲ್ಕ್ ಪೌಡರ್.

ಈ ಉದ್ಯಮ ಆರಂಭಿಸಲು ನಿಮಗೆ ಜಾಗ ಅಥವಾ ಅಂಗಡಿಯ ಅವಶ್ಯಕತೆ ಇರುವುದಿಲ್ಲ. ನಿಮ್ಮ ಮನೆಯಿಂದಲೇ (How To Start Business From Home) ನೀವು ಸುಲಭವಾಗಿ ಈ ಉದ್ಯಮ ಆರಂಭಿಸಬಹುದು. ಬ್ರೆಡ್ ತಯಾರಿಸಲು ಹೆಚ್ಚು ಸಮಯಾವಕಾಶ ಬೇಕಾಗುವುದಿಲ್ಲ. ತುಂಬಾ ಕಡಿಮೆ ಸಮಯದಲ್ಲಿ ಇದು ತಯಾರಾಗುತ್ತದೆ. ಮನೆಯಲ್ಲಿಯೇ ಬ್ರೆಡ್ ತಯಾರಿಸಿ ಅದನ್ನು ಮಾರುಕಟ್ಟೆಯಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಮಾರಾಟ ಮಾಡಿ ಕೈ ತುಂಬಾ ಹಣ (How To Earn Money From Home) ಸಂಪಾದನೆ ಮಾಡಬಹುದು. ಇದರಲ್ಲಿ ನೀವು ಹೆಚ್ಚಿನ ಹೂಡಿಕೆ ಮಾಡುವ ಅವಶ್ಯಕತೆ ಕೂಡ ಇಲ್ಲ. ಪ್ರಸ್ತುತ ಬ್ರೆಡ್ ತಿನ್ನುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಹಾಗೂ ಭವಿಷ್ಯದಲ್ಲಿಯೂ ಕೂಡ ಬ್ರೆಡ್ ಗೆ ವಿಪರೀತ ಬೇಡಿಕೆ ನಿರ್ಮಾಣವಾಗಲಿದೆ.

ಬ್ರೆಡ್ ತಯಾರಿಕೆಗೆ ಬೇಕಾಗುವ ಸಾಮಗ್ರಿ
- ಗೋದಿ ಹಿಟ್ಟು
- ಸಾಧಾರಣ ಉಪ್ಪು
- ಸಕ್ಕರೆ
- ನೀರು
- ಬೇಕಿಂಗ್ ಪೌಡರ್ ಅಥವಾ ಈಸ್ಟ್
- ಡ್ರೈಫ್ರೂಟ್
- ಮಿಲ್ಕ್ ಪೌಡರ್

ಇದನ್ನೂ ಓದಿ- 7th Pay Commission: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ 5 ಮಹತ್ವದ ಘೋಷಣೆಗಳನ್ನು ಮಾಡಿದ ಕೇಂದ್ರ ಸರ್ಕಾರ

ಬ್ರೆಡ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೇಗಿದೆ?
ಸಾಮಾನ್ಯವಾಗಿ ಇದೊಂದು ತಯಾರಾದ ಆಹಾರ ಪದಾರ್ಥವಾಗಿದೆ. ಸಮಾಜದಲ್ಲಿ ಜಾಗರೂಕತೆ ಹಾಗೂ ಲೈಫ್ ಸ್ಟೈಲ್ ನಲ್ಲಿ ಬದಲಾವಣೆಯ ಜೊತೆಗೆ ಈ ಖಾದ್ಯ ಪದಾರ್ಥಕ್ಕೆ ಬೇಡಿಕೆ ಭವಿಷ್ಯದಲ್ಲಿ ಹೆಚ್ಚಾಗಲಿದೆ. ವರ್ತಮಾನದಲ್ಲಿ ಗ್ರಾಮೀಣ ವಿಕಾಸದ ಅಡಿ ನಿರ್ಮಾಣಗೊಳ್ಳುತ್ತಿರುವ  ಉದ್ಯೋಗ ಗಳಲ್ಲಿ ಬೇಕರಿ ಉದ್ಯಮ ಪ್ರಮುಖವಾಗಿದೆ ಹಾಗೂ ಭವಿಷ್ಯದಲ್ಲಿ ಇದಕ್ಕೆ ಹಲವು ಪಟ್ಟು ಹೆಚ್ಚು ಬೇಡಿಕೆ ನಿರ್ಮಾಣಗೊಳ್ಳಲಿದೆ. ಬೇಕರಿ ಉತ್ಪನ್ನಗಳನ್ನು ಅತಿ ಹೆಚ್ಚು ರಫ್ತು ಮಾಡುವ ದೇಶಗಳಲ್ಲಿ ಭಾರತ ಕೂಡ ಒಂದು. ಅಮೇರಿಕಾ ಹಾಗೂ ಚೀನಾ (NPCSA 2013) ಬಳಿಕ ಭಾರತ ಮೂರನೇ ಅತಿದೊಡ್ಡ ಬಿಸ್ಕುಟ್ ಉತ್ಪಾದನಾ ರಾಷ್ಟ್ರವಾಗಿದೆ.

ಇದನ್ನೂ ಓದಿ-RBI New Norm On Term Deposit: FD ಹೂಡಿಕೆ ಬಡ್ಡಿದರಕ್ಕೆ ಸಂಬಂಧಿಸಿದ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ RBI

ಭಾರತೀಯ ಬೇಕರಿ ಸೆಕ್ಟರ್ ನಲ್ಲಿ ಬ್ರೆಡ್, ಬಿಸ್ಕಿಟ್, ಕೇಕ್ ಗಳಂತಹ ವಸ್ತುಗಳು ಶಾಮೀಲಾಗಿವೆ. ಕಳೆದ ಆರ್ಥಿಕ ವರ್ಷದಲ್ಲಿ 17 ಸಾವಿರ ಕೋಟಿ ರೂ. ಹಾಗೂ ಮುಂದಿನ 3-4 ವರ್ಷಗಳಲ್ಲಿ ಈ ಉದ್ಯಮ ಶೇ.13 ರಿಂದ ಶೇ.15 ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಹೆಚ್ಚಾಗುತ್ತಿರುವ ನಗರೀಕರಣ ಹಾಗೂ ಡಿಸ್ಪೋಸೆಬಲ್ ಆಮದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಬೇಕರಿ ಉತ್ಪನ್ನಗಳ ಬೇಡಿಕೆಯನ್ನೂ ಕೂಡ ಹೆಚ್ಚಿಸಿದೆ.

ಇದನ್ನೂ ಓದಿ-SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News