7th Pay Commission: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ 5 ಮಹತ್ವದ ಘೋಷಣೆಗಳನ್ನು ಮಾಡಿದ ಕೇಂದ್ರ ಸರ್ಕಾರ

7th Pay commission Latest News Today: ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Modi Government) ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. 

Written by - Nitin Tabib | Last Updated : Jul 3, 2021, 03:15 PM IST
  • ಸರ್ಕಾರಿ ನೌಕರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ.
  • ಸರ್ಕಾರದ ಈ ಘೋಷಣೆಗಳಿಂದ ದೇಶದ ಸುಮಾರು 52 ಲಕ್ಷ ಉದ್ಯೋಗಿಗಳು ಹಾಗೂ 60 ಲಕ್ಷ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ.
  • ಈ ಘೋಷಣೆಗಳಲ್ಲಿ ತುಟ್ಟಿ ಭತ್ಯೆ, ತುಟ್ಟಿ ಭತ್ಯೆಯ ಪರಿಹಾರ ಮುಂತಾದ ಸೌಲಭ್ಯಗಳು ಶಾಮೀಲಾಗಿವೆ.
7th Pay Commission: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ 5 ಮಹತ್ವದ ಘೋಷಣೆಗಳನ್ನು ಮಾಡಿದ ಕೇಂದ್ರ ಸರ್ಕಾರ title=
7th Pay commission Latest News Today (File Photo)

7th Pay commission Latest News Today: ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Modi Government) ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಸರ್ಕಾರದ ಈ ಘೋಷಣೆಗಳಿಂದ ದೇಶದ ಸುಮಾರು 52 ಲಕ್ಷ ಉದ್ಯೋಗಿಗಳು ಹಾಗೂ 60 ಲಕ್ಷ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ. ಈ ಘೋಷಣೆಗಳಲ್ಲಿ ತುಟ್ಟಿ ಭತ್ಯೆ (Dearness Allowance), ತುಟ್ಟಿ ಭತ್ಯೆಯ ಪರಿಹಾರ (Dearness Relief) ಮುಂತಾದ ಸೌಲಭ್ಯಗಳು ಶಾಮೀಲಾಗಿವೆ. ಇವು ದೇಶದ  1.12 ಕೋಟಿ ಸರ್ಕಾರಿ ನೌಕರರು (Government Employee's) ಹಾಗೂ ಪಿಂಚಣಿದಾರರ (Pensioners) ಮೇಲೆ ನೇರ ಪ್ರಭಾವ ಉಂಟು ಮಾಡಲಿವೆ. ಹಾಗಾದರೆ ಬನ್ನಿ ಸರ್ಕಾರ ಮಾಡಿರುವ 5 ಮಹತ್ವದ ಘೋಷಣೆಗಳಾವುವು ತಿಳಿದುಕೊಳ್ಳೋಣ.

1. DA and DR: ಜುಲೈನಿಂದ ಏಳನೇ ಹಣಕಾಸು ಆಯೋಗದ (7th Pay Commission) ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ Dearness Allowance ಹಾಗೂ Dearness Relief ಸಿಗಲು ಆರಂಭಿಸಲಿದೆ ಎಂದು   ಕೇಂದ್ರ ಹಣಕಾಸು ರಾಜ್ಯ ಸಚಿವರು ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಹೊಸ ಘೋಷಣೆ ಮಾಡಿಲ್ಲ. ಡಿಎ ಮತ್ತು ಡಿಆರ್ ಅನ್ನು ಸೆಪ್ಟೆಂಬರ್‌ನಿಂದ ಪುನಃಸ್ಥಾಪಿಸಲಾಗುವುದು ಎಂದು ಕ್ಯಾಬಿನೆಟ್ ಸಚಿವರು  ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರಿ ನೌಕರರ ಪರವಾಗಿ ಬೇಡಿಕೆಗಳನ್ನು ಮಂಡಿಸುವ ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ ಹೇಳಿದೆ.

2. ಹೌಸಿಂಗ್ ಬಿಲ್ಡಿಂಗ್ ಅಡ್ವಾನ್ಸ್ (HBA): ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಸರ್ಕಾರ ಹೌಸಿಂಗ್ ಬಿಲ್ಡಿಂಗ್ ಅಡ್ವಾನ್ಸ್ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇತ್ತೀಚೆಗಷ್ಟೇ ಸರ್ಕಾರ ಹೌಸಿಂಗ್ ಬಿಲ್ಡಿಂಗ್ ಅಡ್ವಾನ್ಸ್ ಕುರಿತು ಹಲವು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.  ಜುಲೈ 2020 ರಲ್ಲಿ ಕೇಂದ್ರ ಸರ್ಕಾರ ಹೌಸಿಂಗ್ ಬಿಲ್ಡಿಂಗ್ ಅಡ್ವಾನ್ಸ್ ಗಳ ಮೇಲೆ ಶೇ.7.9ರಷ್ಟಕ್ಕೆ ಇಳಿಕೆ ಮಾಡಿತ್ತು. ಈ ಬಡ್ಡಿದರ ಮಾರ್ಚ್ 31, 2022 ರವರೆಗೆ ಜಾರಿಯಲ್ಲಿರಲಿದೆ. 

3. ಟ್ರಾವೆಲ್ ಅಲ್ಲೌನ್ಸ್ (TA): ಕೇಂದ್ರ ಸರ್ಕಾರದ ವತಿಯಿಂದ ನಿವೃತ್ತಿ ಹೊಂದಿರುವ ವ್ಯಕ್ತಿಗಳಿಗೆ ಭಾರಿ ನೆಮ್ಮದಿ ಒದಗಿಸಲಾಗಿದೆ. ನಿವೃತ್ತಿ ಹೊಂದಿರುವ ವ್ಯಕ್ತಿಗಳು ಇದೀಗ 180 ದಿನಗಳೊಳಗೆ ತಮ್ಮ ಟ್ರಾವೆಲ್ ಅಲೌನ್ಸ್ ವಿವರಣೆಗಳನ್ನು ನೀಡಬಹುದಾಗಿದೆ. ಮೊದಲು ಇದಕ್ಕಾಗಿ ಅವರಿಗೆ ಕೇವಲ 60 ದಿನಗಳ ಕಾಲಾವಕಾಶ ಮಾತ್ರ ಸಿಗುತ್ತಿತ್ತು. ಈ ಹೊಸ ನಿಯಮ ಜೂನ್ 15 ರಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ- RBI New Norm On Term Deposit: FD ಹೂಡಿಕೆ ಬಡ್ಡಿದರಕ್ಕೆ ಸಂಬಂಧಿಸಿದ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ RBI

4. e-Mail, WhatsApp ಹಾಗೂ SMS ಮೂಲಕ ಪೆನ್ಷನ್ ಸ್ಲಿಪ್ ಕಳುಹಿಸಬಹುದು: ಪಿಂಚಣಿ ಪಡೆಯುತ್ತಿರುವ ನೌಕರರಿಗೆ ಕೇಂದ್ರದ ಮೋದಿ ಸರ್ಕಾರ ಭಾರಿ ನೆಮ್ಮದಿಯ ಘೋಷಣೆಯೊಂದನ್ನು ಮಾಡಿದೆ. ಇನ್ಮುಂದೆ ಪೆನ್ಷನ್ ಸ್ಲಿಪ್ ಪಡೆದುಕೊಳ್ಳಲು ನಿವೃತ್ತಿ ಹೊಂದಿರುವ ನೌಕರರು ಬ್ಯಾಂಕ್ ಗೆ ಅಲೆದಾಡಬೇಕಾಗಿಲ್ಲ. ಈ ಕುರಿತು ಪೆನ್ಷನ್ ಜಾರಿ ಮಾಡುವ ಬ್ಯಾಂಕ್ ಗಳಿಗೆ ಪಿಂಚಣಿದಾರರ ಪಿಂಚಣಿ ಸ್ಲಿಪ್ ಅನ್ನು e-Mail, WhatsApp ಹಾಗೂ SMS ಮೂಲಕ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು DoPT ಸೂಚಿಸಿದೆ. ಇದಕ್ಕಾಗಿ ಬ್ಯಾಂಕುಗಳು ಪಿಂಚಣಿದಾರರ ರಜಿಸ್ಟರ್ಡ್ ಮೊಬೈಲ್ ನಂಬರ್ ಅನ್ನು ಬಳಸಬಹುದು ಎಂದು ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ ಹೇಳಿದೆ. ಕೇಂದ್ರ ಸರ್ಕಾರದ ಈ ನಿರ್ಣಯ 62 ಲಕ್ಷ ಪಿಂಚಣಿದಾರರಿಗೆ ಭಾರಿ ನೆಮ್ಮದಿಯೇ ನೀಡಿದೆ ಎಂದರೆ ತಪಾಗಲಾರದು. ಈ ಹೊಸ ನಿಯಮ ಜುಲೈ 1 ರಿಂದ ಅನುಷ್ಠಾನಕ್ಕೆ ಬಂದಿದೆ.

ಇದನ್ನೂ ಓದಿ- ದ್ವಿದಳ ಧಾನ್ಯಗಳ ಮೇಲೆ ಸ್ಟಾಕ್ ಲಿಮಿಟ್ ವಿಧಿಸಿದ ಮೋದಿ ಸರ್ಕಾರ, ಬೆಲೆ ಏರಿಕೆಗೆ ಬೀಳಲಿದೆ ಬ್ರೇಕ್

5. ಪಿಂಚಣಿಯ ವಿಷಯದಲ್ಲಿಯೂ ಕೂಡ ನೆಮ್ಮದಿಯ ಸುದ್ದಿ: ಕುಟುಂಬ ಪಿಂಚಣಿ ಯೋಜನೆಯ ನಿಯಮಗಳನ್ನು ಕೂಡ ಸರ್ಕಾರ ಸಾಕಷ್ಟು ಸರಳೀಕೃತಗೊಳಿಸಿದೆ. ಕೇಂದ್ರ ಈ ಕುರಿತು ಘೋಷಣೆ ಮಾಡಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣಕ್ಕಾಗಿ ಮಾಡಲಾಗಿರುವ ನಿಯಮಗಳಲ್ಲಿನ ಬದಲಾವಣೆಗಳನ್ನು ಹೇಳಿದ್ದಾರೆ.  ಹೊಸ ನಿಯಮಗಳ ಪ್ರಕಾರ, ಈಗ ಮರಣ ಪ್ರಮಾಣಪತ್ರವನ್ನು ಪಡೆದ ತಕ್ಷಣ ಪಿಂಚಣಿ ಸೌಲಭ್ಯಆರಂಭಗೊಳ್ಳಲಿದೆ. ನಂತರದ ಔಪಚಾರಿಕತೆಗಳನ್ನು ಕಾಲಕ್ಕೆ ತಕ್ಕಂತೆ ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ-SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News