Haldiram Success Story : ಹಲ್ದಿರಾಮ್ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುತ್ತದೆ.ಸಾಮಾನ್ಯರಿಂದ ಹಿಡಿದು ಗಣ್ಯರವರೆಗೂ ಎಲ್ಲಾ ಮನೆಗಳಲ್ಲಿ ತನ್ನ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಹಲ್ದಿರಾಮ್.ಇದೀಗ ಈ ಕಂಪನಿ ಬಿಕರಿಯಾಗುವ ಹಂತದಲ್ಲಿದೆ. ಹಲ್ದಿರಾಮ್ ಕಂಪನಿಯದ್ದು ಸುದೀರ್ಘ ಪಯಣ. ಸ್ವಾತಂತ್ರ ಪೂರ್ವ ಭಾರತದಿಂದ 21 ನೇ ಶತಮಾನದವರೆಗೆ ಈ ಕಂಪನಿಯ ಪಯಣ ಸಾಗಿದೆ. ಒಂದಾನೊಂದು ಕಾಲದಲ್ಲಿ ಬೀದಿಬದಿಯಿಂದ ಆರಂಭವಾದ ಈ ಕಂಪನಿ ಇಂದು ಸಾವಿರಾರು ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಇದನ್ನು ಖರೀದಿಸಲು ವಿದೇಶಿ ಕಂಪನಿಗಳು ರೇಸ್‌ನಲ್ಲಿ ನಿಂತಿವೆ.ಇತ್ತೀಚೆಗೆ,ಬ್ಲಾಕ್‌ಸ್ಟೋನ್ ಇಂಕ್ ಹೊರತುಪಡಿಸಿ,ಅಬುಧಾಬಿ ಹೂಡಿಕೆ ಪ್ರಾಧಿಕಾರ,ಸಿಂಗಾಪುರ್ ಸ್ಟೇಟ್ ಫಂಡ್ ಜಿಐಸಿ ಇದಕ್ಕಾಗಿ ಈ ಕಂಪನಿ ಖರೀದಿಗೆ ಬಿಡ್ ಮಾಡಿತ್ತು.ಆದರೆ ಇದೀಗ ಬ್ಲ್ಯಾಕ್‌ಸ್ಟೋನ್ ಇಂಕ್ 78,000 ಕೋಟಿ ಮೌಲ್ಯದ ಸ್ನ್ಯಾಕ್ಸ್ ಬ್ರಾಂಡ್‌ನಲ್ಲಿ ಶೇಕಡಾ 51 ರಷ್ಟು ಪಾಲನ್ನು ಖರೀದಿಸಲು ಸಿದ್ಧವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಎಂಬ ಸುದ್ದಿ ಬರುತ್ತಿದೆ.
ಕಂಪನಿ ಖರೀದಿಯ ರೇಸ್ ನಲ್ಲಿದೆ ಟಾಟಾ ಮತ್ತು ಪೆಪ್ಸಿ :
ಮನೆಮಾತಾಗಿರುವ ಹಲ್ದಿರಾಮ್ ಖರೀದಿಸುವ ರೇಸ್‌ಗೆ ಟಾಟಾ ಮತ್ತು ಪೆಪ್ಸಿ ಕೂಡ ಸೇರಿಕೊಂಡಿವೆ.ಆದರೆ ಮೌಲ್ಯಮಾಪನದ ವೇಳೆ ಆತುಕತೆ ಫಲಿಸದ ಕಾರಣ ಇನ್ನೂ ಯಾವ ನಿರ್ಧಾರ ಕೂಡಾ ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲ. ಒಪ್ಪಂದದ ವಿಳಂಬಕ್ಕೆ ಕಾರಣವೆಂದರೆ ಬ್ಲಾಕ್‌ಸ್ಟೋನ್ ಹಲ್ದಿರಾಮ್‌ನಲ್ಲಿ 74 ಪ್ರತಿಶತ ಪಾಲನ್ನು ಖರೀದಿಸಲು ಮುಂದಾಗಿದೆ. ಆದರೆ ಹಲ್ದಿರಾಮ್ ಅನ್ನು ನಿರ್ವಹಿಸುತ್ತಿದ್ದ ಅಗರ್ವಾಲ್ ಕುಟುಂಬವು 51 ಪ್ರತಿಶತಕ್ಕಿಂತ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಲು ಸುತರಾಂ ಸಿದ್ದರಿಲ್ಲ. 40,000 ಕೋಟಿಗೆ ಈ ಒಪ್ಪಂದ ಅಂತಿಮಗೊಂಡರೆ, ಇದು ದೇಶದ ಎಫ್‌ಎಂಸಿಜಿ ವಲಯದಲ್ಲಿ ಇದುವರೆಗಿನ ಅತಿದೊಡ್ಡ ಒಪ್ಪಂದವಾಗಲಿದೆ.
ಇದನ್ನೂ ಓದಿ : ಕೊನೆಯಾಯಿತು ಸರ್ಕಾರಿ ನೌಕರರ ನಿರೀಕ್ಷೆ! ಭಾರೀ ಹೆಚ್ಚಳದೊಂದಿಗೆ ಖಾತೆ ಸೇರುವುದು ವೇತನ ! ಎಷ್ಟಾಗಲಿದೆ ಹೆಚ್ಚಳ ಇಲ್ಲಿದೆ ಲೆಕ್ಕಾಚಾರ
ಹಲ್ದಿರಾಮ್ ವ್ಯವಹಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಲಾಗಿದೆ. ಒಪ್ಪಂದಕ್ಕೆ ಮೊದಲು, ಹಲ್ದಿರಾಮ್‌ನ ಮೂರೂ ಭಾಗಗಳನ್ನು ವಿಲೀನಗೊಳಿಸಲಾಗುವುದು.ಅಗರ್ವಾಲ್ ಕುಟುಂಬವು ಹಲ್ದಿರಾಮ್ ಫುಡ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಹಲ್ದಿರಾಮ್ ಸ್ನ್ಯಾಕ್ ಫುಡ್ ಪ್ರೈವೇಟ್ ಲಿಮಿಟೆಡ್ ಅನ್ನು ಹೊಂದಿರುತ್ತದೆ.ಹಲ್ದಿರಾಮ್ ಅವರ ವ್ಯವಹಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ನಾಗ್ಪುರ ವ್ಯವಹಾರವನ್ನು ಹಲ್ದಿರಾಮ್ ಫುಡ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಮತ್ತು ದೆಹಲಿ ವ್ಯವಹಾರವನ್ನು ಹಲ್ದಿರಾಮ್ ಸ್ನಾಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ.ವಿಲೀನದ ನಂತರ, ಹಲ್ದಿರಾಮ್ ಸ್ನಾಕ್ಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ರಚಿಸಲಾಗುವುದು.ದೆಹಲಿಯ ಮನೋಹರ್ ಅಗರ್ವಾಲ್ ಮತ್ತು ಮಧು ಸೂದನ್ ಅಗರ್ವಾಲ್ ಇದರಲ್ಲಿ ಶೇ.55 ರಷ್ಟು ಪಾಲು ಹೊಂದಿರುತ್ತಾರೆ.ನಾಗ್ಪುರದ ಕಮಲಕಿಶನ್ ಅಗರ್ವಾಲ್ ಶೇ.45 ರಷ್ಟು ಪಾಲು ಹೊಂದಿರುತ್ತಾರೆ.
ಹಲ್ದಿರಾಮ್ ಹೇಗೆ ಆರಂಭವಾಯಿತು ಎಂದರೆ,ಸ್ವಲ್ಪ ಹಣದಲ್ಲಿ ಆರಂಭವಾದ ಕಂಪನಿ ಇಂದು 78000 ಕೋಟಿ ರೂ.ಬೆಲೆ ಬಾಳುತ್ತದೆ. ಈ ಕಂಪನಿ ಆರಂಭದ ಕಥೆಯೂ ಬಹಳ ಸ್ವಾರಸ್ಯಕರವಾಗಿದೆ.ಹಲ್ದಿರಾಮ್ 1937 ರಲ್ಲಿ ಗಂಗಾ ವಿಷನ್ ಅಗರ್ವಾಲ್ ಅವರಿಂದ ಪ್ರಾರಂಭವಾಯಿತು.ಅವರು ಬಿಕಾನೇರ್‌ನ ಬೀದಿ ಮೂಲೆಯಲ್ಲಿರುವ ಸಣ್ಣ ಅಂಗಡಿಯಲ್ಲಿ ಭುಜಿಯಾವನ್ನು ಮಾರಾಟ ಮಾಡಲು ಪ್ರಾರಂಭಿಸಿದರು.ಗಂಗಾ ವಿಷನ್ ಅಗರ್ವಾಲ್ ಅವರ ತಾಯಿ ಅವರನ್ನು ಹಲ್ದಿರಾಮ್ ಎಂದು ಕರೆಯುತ್ತಿದ್ದರು.ಆದ್ದರಿಂದ ಅವರು ತಮ್ಮ ಅಂಗಡಿಗೆ ಹಲ್ದಿರಾಮ್ ಭುಜಿವಾಲಾ ಎಂದು ಹೆಸರಿಟ್ಟರು.ಅವರ ನಮ್ಕೀನ್‌ನ ರುಚಿಯನ್ನು ಜನರು ತುಂಬಾ ಇಷ್ಟಪಟ್ಟರು, ಕ್ರಮೇಣ ಅವರ ನಮ್ಕೀನ್ ಎಲ್ಲಾ ಕಡೆ ಮನೆ ಮಾತಾಯಿತು.
ಇದನ್ನೂ ಓದಿ : Gold Rate Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..ಚಿನ್ನದ ಬೆಲೆಯಲ್ಲಿ ₹10,000 ಇಳಿಕೆ..!
40 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ ವ್ಯಾಪಾರ :
ಗಂಗಾ ವಿಷನ್ ಅಗರ್ವಾಲ್ ಅವರು ಬಿಕಾನೇರ್ ಮಹಾರಾಜ ಡುಂಗರ್ ಸಿಂಗ್ ಅವರ ಹೆಸರನ್ನು ಭುಜಿಯಾಗೆ ಇತ್ತು ಅದನ್ನು 'ಡುಂಗರ್ ಸೇವ್' ಎಂದು ಕರೆದರು. ಭುಜೀಯ ಮಹಾರಾಜರ ಹೆಸರಿನೊಂದಿಗೆ ಮಾರುಕಟ್ಟೆಗೆ ಬಂದಾಗ ವ್ಯಾಪಾರ ಕೂಡಾ ಎರಡು ಪಟ್ಟು ಹೆಚ್ಚಿತು. ಆಗ ಪ್ರತಿ ಕೆಜಿಗೆ 5 ಪೈಸೆಗೆ ಮಾರಾಟವಾಗುತ್ತಿದ್ದ ಡುಂಗರ್ ಸೇವ್ ಬಿಕಾನೇರ್ ನಲ್ಲಿ ಫೇಮಸ್ ಆಗಿತ್ತು.1941 ರ ಹೊತ್ತಿಗೆ, ಹಲ್ದಿರಾಮ್ ನಮ್ಕೀನ್ ಬಿಕಾನೇರ್‌ನಾದ್ಯಂತ ಪ್ರಸಿದ್ಧವಾಯಿತು. ಮದುವೆಗೆಂದು ಕೋಲ್ಕತ್ತಾಗೆ ಹೋದಾಗ ಜನರು ತಮ್ಮ ನಮ್ಕೀನ್ ಅನ್ನು ಸವಿಯುವಂತೆ ಮಾಡಿದರು.ಜನ ಇಷ್ಟಪಟ್ಟಿದ್ದರಿಂದ ಕೋಲ್ಕತ್ತಾದಲ್ಲೂ ಅಂಗಡಿ ತೆರೆದರು.ಕೋಲ್ಕತ್ತಾದ ನಂತರ,ಹಲ್ದಿರಾಮ್ ಅವರ ಮೊದಲ ಮಳಿಗೆಯನ್ನು 1970 ರಲ್ಲಿ ನಾಗ್ಪುರದಲ್ಲಿ ತೆರೆಯಲಾಯಿತು.ನಂತರ 1982 ರಲ್ಲಿ ಹಲ್ದಿರಾಮ್ ಪ್ರಯಾಣ ದೆಹಲಿಯತ್ತ ಸಾಗಿತು. 8ನೇ ತೇರ್ಗಡೆಯಾಗಿದ್ದ ಗಂಗಾ ವಿಷನ್ ಅಗರ್ವಾಲ್ ಆರಂಭಿಸಿದ ಹಲ್ದಿರಾಮ್ ಉದ್ಯಮ ಇಂದು 40ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.