Cabinet Decision: ದೇಶದ ಲಕ್ಷಾಂತರ ಅನ್ನದಾತರಿಗೊಂದು ಭಾರಿ ಸಂತಸದ ಸುದ್ದಿ!

Cabinet Decision: ವರ್ಷ 2022-23ನೇ ಸಾಲಿನ ಖಾರೀಫ್ ಫಸಲಿನ ಕನಿಷ್ಠ ಬೆಂಬಲ ಬೆಲೆ ಹೆಚ್ಚಾಗಲಿದೆ. ಮೂಲಗಳು ನೀಡಿರುವ ವರದಿಗಳನ್ನು ನಂಬುವುದಾದರೆ, ವರ್ಷ 2022-23ನೇ ಸಾಲಿನ ಖಾರೀಫ್ ಬೆಲೆಯ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ ) ಶೇ.5 ರಿಂದ ಶೇ.20ಕ್ಕೆ ಹೆಚ್ಚಾಗಲಿದೆ.  

Written by - Nitin Tabib | Last Updated : Jun 8, 2022, 02:16 PM IST
  • ವರ್ಷ 2022-23ನೇ ಸಾಲಿನ ಖಾರೀಫ್ ಫಸಲಿನ ಕನಿಷ್ಠ ಬೆಂಬಲ ಬೆಲೆ ಹೆಚ್ಚಾಗಲಿದೆ!
  • ಮೂಲಗಳು ನೀಡಿರುವ ವರದಿಗಳನ್ನು ನಂಬುವುದಾದರೆ,
  • ವರ್ಷ 2022-23ನೇ ಸಾಲಿನ ಖಾರೀಫ್ ಬೆಲೆಯ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ ) ಶೇ.5 ರಿಂದ ಶೇ.20ಕ್ಕೆ ಹೆಚ್ಚಾಗಲಿದೆ ಎನ್ನಲಾಗಿದೆ.
Cabinet Decision: ದೇಶದ ಲಕ್ಷಾಂತರ ಅನ್ನದಾತರಿಗೊಂದು ಭಾರಿ ಸಂತಸದ ಸುದ್ದಿ! title=
Cabinet Decision

Cabinet Decision: ದೇಶಾದ್ಯಂತ ಇರುವ ಲಕ್ಷಾಂತರ ರೈತರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಖಾರಿಫ್ ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬುಧವಾರ ನಡೆದ ಮೋದಿ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆ. 2022-23ನೇ ಸಾಲಿನ ಖಾರಿಫ್ ಬೆಳೆಗಳ ಎಂಎಸ್‌ಪಿ ಇದೀಗ ಹೆಚ್ಚಾಗಲಿದೆ. ಸಂಜೆ 4 ಗಂಟೆಗೆ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗುವುದು ಎನ್ನಲಾಗಿದೆ.

MSP ಎಷ್ಟು ಹೆಚ್ಚಾಗಲಿದೆ?
ಬಲ್ಲ ಮೂಲಗಳು ನೀಡಿರುವ ಮಾಹಿತಿಯನ್ನು ಒಂದು ವೇಳೆ ನಂಬುವುದಾದರೆ, 2022-23ನೇ ಸಾಲಿನ ಖಾರಿಫ್ ಬೆಳೆಗಳ MSP ಶೇ.5 ರಿಂದ ಶೇ.20ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಸಚಿವ ಸಂಪುಟದ ನಿರ್ಧಾರದ ನಂತರ ಖಾರಿಫ್ ಬೆಳೆಗಳಾಗಿರುವ ಭತ್ತ, ಸೋಯಾಬೀನ್‌ ಇತ್ಯಾದಿಗಳ ಎಂಎಸ್‌ಪಿಯಲ್ಲಿ ಏರಿಕೆಯಾಗಲಿದೆ. ಇದೇ ವೇಳೆ ಮೆಕ್ಕೆಜೋಳದ ಎಂಎಸ್‌ಪಿ ಹೆಚ್ಚಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ಎಂಎಸ್ಪಿಯಲ್ಲಿ ಇಷ್ಟೊಂದು ಏರಿಕೆ
2018-19 ರ ಬಳಿಕ ಇದೆ ಮೊದಲ ಬಾರಿಗೆ MSP ಯಲ್ಲಿ ಇಷ್ಟೊಂದು ಏರಿಕೆಯಾಗಲಿದೆ. ಭತ್ತ, ಸೋಯಾಬೀನ್, ಮೆಕ್ಕೆಜೋಳ ಹೊರತುಪಡಿಸಿ ಶೇಂಗಾ, ಹುಣಸೆ, ಮೋಸಂಬಿ, ಜೋಳ, ಸಜ್ಜೆ, ರಾಗಿ ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೂ ಕೂಡ ಅನುಮೋದನೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಹಂಗಾಮಿನಲ್ಲಿ ಒಟ್ಟು 14 ಬೆಳೆಗಳ ಎಂಎಸ್‌ಪಿ ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೆಳೆಗಳಲ್ಲಿ ಸರ್ಕಾರ ಗರಿಷ್ಠ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದೂ ಕೂಡ ಚರ್ಚಿಸಲಾಗುತ್ತಿದೆ

MSP ಎಂದರೇನು?
MSP- ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ಕನಿಷ್ಠ ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆ ಎಂದು ಕರೆಯುತ್ತಾರೆ. ರೈತನಿಂದ ಖರೀದಿಸಿದ ಬೆಳೆಗೆ ಸರಕಾರ ಕೊಡುವ ಹಣವೇ ಎಂಎಸ್‌ಪಿ ಎಂದರೂ ಕೂಡ ತಪ್ಪಾಗಲಾರದು. ಅಂದರೆ, ಈ ಬೆಲೆಗಿಂತ ಕಡಿಮೆ ಬೆಲೆಯನ್ನು ರೈತರಿಗೆ ನೀಡಲಾಗುವುದಿಲ್ಲ ಎಂದರ್ಥ.

ಇದನ್ನೂ ಓದಿ-RBI Update: ಇನ್ಮುಂದೆ ಕ್ರೆಡಿಟ್ ಕಾರ್ಡ್ ಮೂಲಕವೂ ಯುಪಿಐ ಪೇಮೆಂಟ್ ಮಾಡಬಹುದು!

MSP ಅನ್ನು ಏಕೆ ನಿರ್ಧರಿಸಲಾಗಿದೆ?
ಯಾವುದೇ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗೆ ಸಮಂಜಸವಾದ ಕನಿಷ್ಠ ಬೆಲೆಯನ್ನು ಪಡೆಯಲು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

ಇದನ್ನೂ ಓದಿ-RBI Hikes Repo Rate: ರೆಪೋ ರೇಟ್ ಹೆಚ್ಚಿಸಿದ RBI.! ಹೆಚ್ಚಾಗಲಿದೆ ಗ್ರಾಹಕರ ಲೋನ್ EMI

MSP ಯಾರು ನಿರ್ಧರಿಸುತ್ತಾರೆ?
ರಬಿ ಮತ್ತು ಖಾರಿಫ್ ಋತುಗಳು ಎಂಬಂತೆ ವರ್ಷಕ್ಕೆ ಎರಡು ಬಾರಿ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿನ ಮೇರೆಗೆ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಕಬ್ಬಿನ ಬೆಂಬಲ ಬೆಲೆಯನ್ನು ಕಬ್ಬು ಆಯೋಗ ನಿರ್ಧರಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News