ಕೇವಲ ಮಿಸ್ ಕಾಲ್ ಮೂಲಕ ತಿಳಿದುಕೊಳ್ಳಿ ಜನ್ ಧನ್ ಖಾತೆಯಲ್ಲಿ ಇರುವ ಬ್ಯಾಲೆನ್ಸ್

PM Jan Dhan Yojana 2022: ಜನ್ ಧನ್ ಖಾತೆಯ ಬ್ಯಾಲೆನ್ಸ್ ಅನ್ನು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಮೊದಲನೆಯದ್ದು ಮಿಸ್ಡ್ ಕಾಲ್ ಮೂಲಕ ಮತ್ತು ಎರಡನೆಯದ್ದು, PFMS ಪೋರ್ಟಲ್ ಮೂಲಕ..  

Written by - Ranjitha R K | Last Updated : Jul 7, 2022, 08:52 AM IST
  • ಜನ್-ಧನ್ ಯೋಜನೆ ಅಡಿಯಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲಾಗುತ್ತದೆ
  • ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ?
  • ಎರಡು ವಿಧಾನಗಳಲ್ಲಿ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು
ಕೇವಲ ಮಿಸ್ ಕಾಲ್ ಮೂಲಕ ತಿಳಿದುಕೊಳ್ಳಿ  ಜನ್ ಧನ್ ಖಾತೆಯಲ್ಲಿ ಇರುವ ಬ್ಯಾಲೆನ್ಸ್  title=
Jan dhan Account (file photo)

PM Jan Dhan Yojana 2022 : ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಅಡಿಯಲ್ಲಿ, ಅಂಚೆ ಕಚೇರಿಗಳು ಮತ್ತು  ಬ್ಯಾಂಕ್‌ಗಳಲ್ಲಿ ಬಡವರ ಖಾತೆಯನ್ನು ಶೂನ್ಯ ಬ್ಯಾಲೆನ್ಸ್‌ನಲ್ಲಿ ತೆರೆಯಲಾಗುತ್ತದೆ. ಈ ಯೋಜನೆಯಡಿ ಗ್ರಾಹಕರಿಗೆ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ. ಜನ ಧನ್ ಖಾತೆಯಲ್ಲಿ  ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾದರೆ ಬ್ಯಾಂಕ್ ಗೆ ಹೋಗಬೇಕೆಂದಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ಈ ಬಗ್ಗೆ ಮಾಹಿತಿಯನ್ನು ಪಡೆಯಬಹುದು. 

ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ? 
ಜನ್ ಧನ್ ಖಾತೆಯ ಬ್ಯಾಲೆನ್ಸ್ ಅನ್ನು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಮೊದಲನೆಯದ್ದು ಮಿಸ್ಡ್ ಕಾಲ್ ಮೂಲಕ ಮತ್ತು ಎರಡನೆಯದ್ದು, PFMS ಪೋರ್ಟಲ್ ಮೂಲಕ. ಅಂದರೆ, ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಬರೀ ನಿಮಿಷಗಳಲ್ಲಿ  ಬ್ಯಾಲೆನ್ಸ್  ತಿಳಿದುಕೊಳ್ಳಬಹುದು. 

ಇದನ್ನೂ ಓದಿ : Indian Railways Rule: ಟ್ರೈನ್ ಟಿಕೆಟ್ ಬುಕ್ ಮಾಡುವ ಮುನ್ನ ಬರ್ತ್‌ಗೆ ಸಂಬಂಧಿಸಿದ ಈ ನಿಮಯ ತಿಳಿಯಿರಿ

PFMS ಪೋರ್ಟಲ್ ಮೂಲಕ :
1. PFMS ಪೋರ್ಟಲ್‌ನಿಂದ ಬ್ಯಾಲೆನ್ಸ್ ತಿಳಿಯಲು, ಮೊದಲು https://pfms.nic.in/NewDefaultHome.aspx#  ಈ ಲಿಂಕ್‌ಗೆ ಹೋಗಬೇಕು  
2. ಈಗ ಇಲ್ಲಿ ನೀವು ‘Know Your Payment’ ಅನ್ನು ಕ್ಲಿಕ್ ಮಾಡಿ.
3. ಇದರ ನಂತರ ನೀವು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ.
4. ಈಗ ನೀವು ಇಲ್ಲಿ ಎರಡು ಬಾರಿ ಖಾತೆ ಸಂಖ್ಯೆಯನ್ನು ನಮೂದಿಸಬೇಕು.
5. ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ.
6. ಇಷ್ಟಾದ ಮೇಲೆ ಖಾತೆಯ ಬ್ಯಾಲೆನ್ಸ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಮಿಸ್ಡ್ ಕಾಲ್ ಮೂಲಕವೂ ಪರಿಶೀಲಿಸಬಹುದು  :
ಮಿಸ್ಡ್ ಕಾಲ್ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದರ ಅಡಿಯಲ್ಲಿ,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದರೆ, ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಅನ್ನು ಕಂಡುಹಿಡಿಯಬಹುದು. ಇದಕ್ಕಾಗಿ ನೀವು 18004253800 ಅಥವಾ 1800112211 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ಗ್ರಾಹಕರೂ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಮಾಡಬೇಕು.  ಆಗ ಮೆಸೇಜ್ ಮೂಲಕ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಸಲಾಗುತ್ತದೆ. 

ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಇಳಿಕೆ, ವಿಪರೀತ ಅಗ್ಗವಾಯಿತು ಬೆಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News