ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದರೆ ಇಂದೇ ಮಾಡಿ ಈ ಕೆಲಸ ! ಸಿಗುವುದು 10 ಲಕ್ಷ ರೂಪಾಯಿ

5 ವರ್ಷ ಹಳೆಯ ಗ್ಯಾಸ್ ಪೈಪ್ ಬಳಸುತ್ತಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ಗ್ಯಾಸ್ ಪೈಪ್ ಅನ್ನು ಬದಲಾಯಿಸಬೇಕಾಗುತ್ತದೆ. ಭದ್ರತಾ ಕಾರಣಗಳಿಗಾಗಿ ಹೀಗೆ ಮಾಡಲಾಗುತ್ತಿದೆ.  

Written by - Ranjitha R K | Last Updated : Mar 22, 2023, 03:12 PM IST
  • ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ.
  • LPG ಗ್ರಾಹಕರು ಒಂದು ಪ್ರಮುಖ ವಿಷಯವನ್ನು ತಿಳಿದುಕೊಂಡಿರಬೇಕು.
  • ಇಲ್ಲದಿದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದರೆ ಇಂದೇ ಮಾಡಿ ಈ ಕೆಲಸ ! ಸಿಗುವುದು 10 ಲಕ್ಷ ರೂಪಾಯಿ  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಗ್ಯಾಸ್ ಪೈಪ್ಲೈನ್ ​​ಅನ್ನು ಸಹ ಬಳಸಲಾಗುತ್ತಿದೆ. ಆದರೂ LPG ಗ್ರಾಹಕರು ಒಂದು ಪ್ರಮುಖ ವಿಷಯವನ್ನು ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. 5 ವರ್ಷ ಹಳೆಯ ಗ್ಯಾಸ್ ಪೈಪ್ ಬಳಸುತ್ತಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ಗ್ಯಾಸ್ ಪೈಪ್ ಅನ್ನು ಬದಲಾಯಿಸಬೇಕಾಗುತ್ತದೆ. ಭದ್ರತಾ ಕಾರಣಗಳಿಗಾಗಿ ಹೀಗೆ ಮಾಡಲಾಗುತ್ತಿದೆ. ಒಂದು ವೇಳೆ ಈ ಕಾರ್ಯವನ್ನು ಗ್ರಾಹಕರು ಮಾಡದೇ ಹೋದಲ್ಲಿ ಎಲ್ಪಿಜಿ ಸಂಪರ್ಕಕ್ಕೆ ಸಂಬಂಧಿಸಿದ ವಿಮೆಯನ್ನು ಪಡೆಯುವುಡು ಸಾಧ್ಯವಾಗುವುದಿಲ್ಲ. 

ನೀವು ಕೂಡಾ ಮಾರುಕಟ್ಟೆಯಿಂದ ಖರೀದಿಸಿದ ಪೈಪ್ ಬಳಸುತ್ತಿದ್ದೀರಾ ? : 
ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಇಂಡಿಯನ್ ಆಯಿಲ್ ಅಧಿಕಾರಿಗಳು ಸೂಚನೆಗಳನ್ನು ನೀಡಿದ್ದಾರೆ. ಇದರ ಅಡಿಯಲ್ಲಿ, ತಮ್ಮ ಐದು ವರ್ಷ ಹಳೆಯ ಗ್ರಾಹಕರು ಗ್ಯಾಸ್ ಪೈಪ್ ಬದಲಾಯಿಸುವಂತೆ ಸೂಚನೆ ನೀಡುವಂತೆ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಹೇಳಲಾಗಿದೆ. ಗ್ರಾಹಕರು ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಪೈಪ್ ಖರೀದಿಸಬಹುದು. ಇದಕ್ಕಾಗಿ  200 ರೂ.ಯನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಮಾರುಕಟ್ಟೆಯಿಂದ ಖರೀದಿಸಿದ ಗ್ಯಾಸ್ ಪೈಪ್‌ಗಳನ್ನು ಬಳಸುತ್ತಿದ್ದರೆ, ಅಪಘಾತದ ಸಂದರ್ಭದಲ್ಲಿ ವಿಮೆಯನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ Aadhaar Card-Voter ID ಜೋಡಣೆಗೆ ಸಂಬಂಧಿಸಿದಂತೆ ಸರ್ಕಾರದ ಹೊಸ ಆದೇಶ ಜಾರಿ, ತಕ್ಷಣ ತಿಳಿದುಕೊಳ್ಳಿ!

ಕೇವಲ 200 ರೂಪಾಯಿ ಪಾವತಿಸಿದರೆ ಸಾಕು : 
 ಒಮ್ಮೆ ಖರೀದಿಸಿದ ಗ್ಯಾಸ್ ಪೈಪ್ ಅನ್ನು ಐದು ವರ್ಷಗಳವರೆಗೆ ಬಳಸಬಹುದು. ಐದು ವರ್ಷಗಳ ನಂತರ ಈ ಪೈಪ್ ಅನ್ನು ಬದಲಾಯಿಸಬೇಕು. ಹೀಗಾದಾಗ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇಲ್ಲಿ ಕೇವಲ ಪೈಪ್ ವೆಚ್ಚವನ್ನು ಮಾತ್ರ ಗ್ರಾಹಕರು ಪಾವತಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಯಾವುದೇ ಪ್ರತ್ಯೇಕ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಸಿಗುವುದು 10 ಲಕ್ಷ ರೂ.ವರೆಗೆ ಪರಿಹಾರ : 
ಮಾಹಿತಿಯ ಪ್ರಕಾರ, ಗ್ಯಾಸ್ ಸಿಲಿಂಡರ್‌ನಿಂದ ಅಪಘಾತ ಸಂಭವಿಸಿದಲ್ಲಿ, ಆ ಅಪಘಾತಕ್ಕೆ 10 ಲಕ್ಷ ರೂ.ವರೆಗೆ ಪರಿಹಾರವನ್ನು ಪಡೆಯಬಹುದು. ಅಪಘಾತದ ಪ್ರಕಾರಕ್ಕನುಗುಣವಾಗಿ, ಪರಿಹಾರದ ಮೊತ್ತವು ಹೆಚ್ಚು ಕಡಿಮೆಯಾಗಬಹುದು. ಆದರೆ, ಪೈಪ್ ಬಳಸಿ ಐದು ವರ್ಷಕ್ಕಿಂತ ಮೇಲ್ಪಟ್ಟು ಅಪಘಾತ ಸಂಭವಿಸಿದರೆ, ಈ ಹಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.  ಆದ್ದರಿಂದ ಗ್ಯಾಸ್ ಪೈಪ್ ಅನ್ನು ತಕ್ಷಣ ಬದಲಾಯಿಸುವುದು ಹೆಚ್ಚು ಸೂಕ್ತವಾಗಿದೆ.

ಇದನ್ನೂ ಓದಿ : Bank Holiday List: ಏಪ್ರಿಲ್ ಮೊದಲ ವಾರದಲ್ಲಿ 5 ದಿನ ಬ್ಯಾಂಕ್‌ಗಳಿಗೆ ರಜೆ,ಇಲ್ಲಿದೆ ಫುಲ್ ಲಿಸ್ಟ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News