ನವದೆಹಲಿ : ಸಾಮಾನ್ಯವಾಗಿ ಇಪಿಎಫ್ (EPF) ಖಾತೆದಾರರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN)) ಮರೆತು ಬಿಡುತ್ತಾರೆ. ಆದರೆ, ಪಿಎಫ್ ಹಣವನ್ನು ಹಿಂತೆಗೆದುಕೊಳ್ಳುವ ಸಮಯದಲ್ಲಿ, ಅಥವಾ, ಕೆಲಸವನ್ನು ಬದಲಾಯಿಸುವಾಗ, ಈ ಯುಎಎನ್ ಅವಶ್ಯಕವಾಗಿರುತ್ತದೆ. ಈ ಸಂದರ್ಭದಲ್ಲಿ ಈ ನಂಬರ್ ಇಲ್ಲದಿದ್ದಲ್ಲಿ ಹಣ ತೆಗೆಯುವುದೂ ಸಾಧ್ಯವಿಲ್ಲ, ಅಕೌಂಟ್ ಟ್ರಾನ್ಪರ್ ಕೂಡಾ ಆಗುವುದಿಲ್ಲ. ನೀವು ಕೂಡಾ ಈ ನಂಬರ್ ಅನ್ನು ಮರೆತಿದ್ದರೆ ಅದನ್ನು ಈಗ ಸುಲಭವಾಗಿ ಕಂಡುಹಿಡಿಯಬಹುದು. ಇದನ್ನು ಕಂಡುಹಿಡಿಯಬೇಕಾದರೆ ಪಿಎಫ್ ಖಾತೆದಾರರ ಮೊಬೈಲ್ ನಂಬರ್, EPFO ಜೊತೆ ನೋಂದಾಯಿಸಿಕೊಂಡಿರಬೇಕು.
EPFO ತನ್ನ ಇಪಿಎಫ್ (Employees’ Provident Fund) ಚಂದಾದಾರರಿಗೆ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು ನೀಡಿರುತ್ತದೆ. UAN ಮೂಲಕ ಚಂದಾದಾರರು ತಮ್ಮ ಇಪಿಎಫ್ ( EPF) ಖಾತೆಯನ್ನು ಟ್ರ್ಯಾಕ್ ಮಾಡಬಹುದು. ಇದಲ್ಲದೆ, ಆನ್‌ಲೈನ್ ಪಿಎಫ್ ಪಾಸ್‌ಬುಕ್ ಅನ್ನು ನೋಡಲು ಕೂಡಾ ಇದು ಸಹಾಯ ಮಾಡುತ್ತದೆ. ಒಂದಕ್ಕಿಂತ ಹೆಚ್ಚು ಪಿಎಫ್ ಅಕೌಂಟ್ ಇದ್ದಲ್ಲಿ, ಯುಎಎನ್ ಬಳಸಿ ಎಲ್ಲಾ ಪಿಎಫ್ ಖಾತೆಗಳ ವಿವರಗಳನ್ನು ಒಂದೇ ಸ್ಥಳದಲ್ಲಿ ನೋಡಬಹುದು.
ಇದನ್ನೂ ಓದಿ: Gold-Silver Rate : ಅಕ್ಷಯ ತೃತೀಯ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ..!
ಆನ್‌ಲೈನ್ ಮೂಲಕ ಹೀಗೆ ತಿಳಿದುಕೊಳ್ಳಬಹುದು :
- ಇಪಿಎಫ್‌ಒ ಚಂದಾದಾರರು ಮೊದಲು https://www.epfindia.gov.in/site_en/For_Employees.php ಗೆ ಭೇಟಿ ನೀಡಿ.
ಸರ್ವಿಸಸ್ ಸೆಕ್ಷನ್ ನಲ್ಲಿ Member UAN/Online Service (OCS/OTCP) ಮೇಲೆ ಕ್ಲಿಕ್ ಮಾಡಿ
- ಈಗ ಹೊಸದಾಗಿ ತೆರೆದ ಪುಟದಲ್ಲಿ ಬಲಭಾಗದಲ್ಲಿರುವ important section ನಲ್ಲಿ 'Know your UAN' ಮೇಲೆ ಕ್ಲಿಕ್ ಮಾಡಿ.
-ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು 'ರಿಕ್ವೆಸ್ಟ್ ಒಟಿಪಿ' ಕ್ಲಿಕ್ ಮಾಡಿ.
- ಮೊಬೈಲ್ ನಲ್ಲಿ ಬಂದಿರುವ OTPಯನ್ನು ಸೂಚಿಸಿದ ಸ್ಥಳದಲ್ಲಿ ಹಾಕಿ ಮತ್ತೊಮ್ಮೆ ಕ್ಯಾಪ್ಚಾ ನಮೂದಿಸಿ ಸಬ್ಮಿಟ್ ಮಾಡಿ.
- ಇದಾದ ನಂತರ ಒಪನ್ ಆಗುವ ಪೇಜ್ ನಲ್ಲಿ ಪಿಎಫ್ ಖಾತೆದಾರರ ಹೆಸರು, ಹುಟ್ಟಿದ ದಿನಾಂಕ ಮತ್ತು ಆಧಾರ್ ಅಥವಾ ಪ್ಯಾನ್ ಅಥವಾ ಮೆಂಬರ್ ಐಡಿ, ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ನಂತರ ಕ್ಯಾಪ್ಚಾವನ್ನು ನಮೂದಿಸಿ ಮತ್ತು 'Show my UAN’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಯುಎಎನ್ ಪಡೆಯಬಹುದು.
ಮಿಸ್ಡ್ ಕಾಲ್ ಮೂಲಕ ಕೂಡಾ UAN ಕಂಡುಹಿಡಿಯಬಹುದು :
ಮೊಬೈಲ್‌ನಿಂದ Missed call ನೀಡುವ ಮೂಲಕ ಕೂಡಾ UAN ಕಂಡುಹಿಡಿಯಬಹುದು. ಇದಕ್ಕಾಗಿ, ಇಪಿಎಫ್ ಖಾತೆದಾರನು ತನ್ನ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 01122901406 ಗೆ ಮಿಸ್ಡ್ ಕಾಲ್ ನೀಡಬೇಕಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಇಪಿಎಫ್‌ಒ ಯುಎಎನ್, ಇಪಿಎಫ್ ಚಂದಾದಾರರ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಸಂಖ್ಯೆ (Aadhaar) , ಒಟ್ಟು ಪಿಎಫ್ ಬ್ಯಾಲೆನ್ಸ್ ವಿವರಗಳ ಸಂದೇಶ ಬರುತ್ತದೆ.
ಇದನ್ನೂ ಓದಿ : Prepaid Recharge Plan: ಕೇವಲ 279 ರೂ.ಗಳಿಗೆ ಅನಿಯಮಿತ ಕರೆ-ಡೇಟಾದೊಂದಿಗೆ 4 ಲಕ್ಷದ ವಿಮೆ ಕೂಡ ಲಭ್ಯ
SMS ಮೂಲಕ ಕೂಡಾ ಪತ್ತೆಹಚ್ಚಬಹುದು UAN :
ಇಪಿಎಫ್‌ಒ ಚಂದಾದಾರರು SMS ಮೂಲಕ ಯುಎಎನ್ ಅನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಪಿಎಫ್‌ಒನಲ್ಲಿ (EPFO ) ನೋಂದಾಯಿಸಿಕೊಂಡಿರಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ EPFOHO UAN ENG ಎಂದ ಬರೆದು, ಅದನ್ನು 7738299899 ಗೆ ಕಳುಹಿಸಬೇಕು. ಕೆಲವೇ ಸೆಕೆಂಡುಗಳಲ್ಲಿ, ಯುಎಎನ್ ಸೇರಿದಂತೆ ಎಲ್ಲಾ ವಿವರಗಳು ಮೊಬೈಲ್ ನಲ್ಲಿ (Mobile) ಲಭ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.