Cumin Prices Hike : ಪೆಟ್ರೋಲ್, ನಿಂಬೆ ಹಣ್ಣಿನ ನಂತರ ಈಗ ಜೀರಿಗೆ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಬೇಡಿಕೆ ಇದ್ದಷ್ಟು ಜೀರಿಗೆ ಮಾರುಕಟ್ಟೆಗೆ ಬಂದಿಲ್ಲ, ಅಲ್ಲದೆ, ರೈತರು ಈ ಭಾರಿ ಬಿತ್ತನೆ ಕಡಿಮೆ ಪ್ರಮಾಣದಲ್ಲಿ ಮಾಡಿದ ಕಾರಣ ಹಾಗೂ ಅತಿವೃಷ್ಟಿಯಿಂದ ಜೀರಿಗೆ ಬೆಳೆ ಹಾನಿಯಾಗಿದ್ದರಿಂದ ಶೇ.30-35ರಷ್ಟು ಬೆಲೆ ಏರಿಕೆಯಾಗಿ 5 ವರ್ಷದ ಗರಿಷ್ಠ ಮಟ್ಟ ತಲುಪಬಹುದು. ಕ್ರಿಸಿಲ್ ರಿಸರ್ಚ್ ವರದಿಯಲ್ಲಿ, ಕಡಿಮೆ ಇಳುವರಿಯಿಂದಾಗಿ, ಜೀರಿಗೆ ಬೆಲೆ ಕೆಜಿಗೆ 165-170 ರೂ.ಗೆ ಏರಬಹುದು ಎಂದು ಹೇಳಲಾಗಿದೆ.
ಜೀರಿಗೆ ಬೆಲೆ ಕೆಜಿಗೆ 165 ರೂ.
2021-22 ರ ಬೆಳೆ ಋತುವಿನಲ್ಲಿ (ನವೆಂಬರ್-ಮೇ), ವಿವಿಧ ಕಾರಣಗಳಿಂದ ಜೀರಿಗೆ ಉತ್ಪಾದನೆಯು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಈ ಕಾರಣದಿಂದಾಗಿ ಜೀರಿಗೆ ಬೀಜಗಳ ಬೆಲೆಗಳು 5 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಬಹುದು. 2021-2022 ರ ರಬಿ ಋತುವಿನಲ್ಲಿ ಜೀರಿಗೆ ಬೆಲೆಗಳು 30-35 ಪ್ರತಿಶತದಷ್ಟು ಹೆಚ್ಚಾಗಬಹುದು ಮತ್ತು ಪ್ರತಿ ಕೆಜಿಗೆ 165-170 ರೂ.ಗೆ ತಲುಪಬಹುದು ಎಂದು CRISIL ಅಂದಾಜಿಸಿದೆ.
ಇದನ್ನೂ ಓದಿ : PM Kisan ಯೋಜನೆಯ 11ನೇ ಕಂತು: ತ್ವರಿತವಾಗಿ ಪರಿಶೀಲಿಸಲು ಈ ಕೆಲಸ ಮಾಡಿ
ಕಡಿಮೆ ಪ್ರಮಾಣದಲ್ಲಿ ಬೆಳೆ
ಕ್ರಿಸಿಲ್ ಪ್ರಕಾರ, 2021-2022 ರ ರಾಬಿ ಋತುವಿನಲ್ಲಿ ಜೀರಿಗೆ ಪ್ರದೇಶವು ವರ್ಷದಿಂದ ವರ್ಷಕ್ಕೆ 21 ಪ್ರತಿಶತದಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ 9.83 ಲಕ್ಷ ಹೆಕ್ಟೇರ್. ಎರಡು ಪ್ರಮುಖ ಜೀರಿಗೆ ಉತ್ಪಾದಿಸುವ ರಾಜ್ಯಗಳ ಪೈಕಿ ಗುಜರಾತ್‌ನಲ್ಲಿ ಶೇ.22ರಷ್ಟು ಮತ್ತು ರಾಜಸ್ಥಾನದಲ್ಲಿ ಶೇ.20ರಷ್ಟು ಕೃಷಿ ಪ್ರದೇಶ ಕಡಿಮೆಯಾಗಿದೆ.
ವರದಿಯ ಪ್ರಕಾರ ರೈತರು ಸಾಸಿವೆ ಮತ್ತು ಅವರೆ ಬೆಳೆಗಳತ್ತ ಮುಖ ಮಾಡಿರುವುದರಿಂದ ವಿಸ್ತೀರ್ಣ ಕುಸಿತವಾಗಿದೆ. ಸಾಸಿವೆ, ಹೆಸರುಬೇಳೆ ಬೆಲೆ ಏರಿಕೆಯಿಂದ ರೈತರು ಕೃಷಿಯತ್ತ ಆಕರ್ಷಿತರಾಗಿದ್ದಾರೆ.
ಇದನ್ನೂ ಓದಿ : Arecanut Today Price: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.