Go First ವಿಮಾನಯಾನ ಸೇವೆ ಶೀಘ್ರದಲ್ಲಿ ಪುನರಾರಂಭ, ಪ್ರಸ್ತಾವನೆಗೆ ಷರತ್ತುಬದ್ಧ ಅನುಮತಿ ನೀಡಿದ DGCA

Go First ವಿಮಾನಯಾನ ಸಂಸ್ಥೆಗೆ ಮತ್ತೊಮ್ಮೆ ವಿಮಾನಯಾನ ಸೇವೆ ಆರಂಭಿಸಲು ಡಿಜಿಸಿಎ ಅನುಮತಿಯನ್ನು ನೀಡಿದೆ. ಆದರೆ, ಡಿಜಿಸಿಎ ಷರತ್ತುಗಳೊಂದಿಗೆ ಗೋಫಸ್ಟ್‌ಗೆ ಮತ್ತೆ ವಿಮಾನ ಹಾರಾಟ ನಡೆಸಲು ಈ ಅನುಮತಿ ನೀಡಿದೆ.  

Written by - Nitin Tabib | Last Updated : Jul 21, 2023, 06:17 PM IST
  • ಅಧಿಕೃತ ಹೇಳಿಕೆಯ ಪ್ರಕಾರ, ಎಲ್ಲಾ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಗೋ ಫರ್ಸ್ಟ್ ಗೆ ವಿಮಾನ ಸೇವೆ ಪುನರಾರಂಭಿಸಲು ಅನುಮತಿಸಲಾಗಿದೆ.
  • IRP ಷರತ್ತನ್ನು ಪೂರೈಸಿದ ನಂತರ DGCA ಯಿಂದ ವಿಮಾನ ವೇಳಾಪಟ್ಟಿ ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
  • ಅದರ ನಂತರ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಬುಕಿಂಗ್ ಜೊತೆಗೆ, ಮರುಪಾವತಿಗೆ ಸಂಬಂಧಿಸಿದಂತೆ ಕಂಪನಿ ಮುಂದುವರೆಯಲಿದೆ.
Go First ವಿಮಾನಯಾನ ಸೇವೆ ಶೀಘ್ರದಲ್ಲಿ ಪುನರಾರಂಭ, ಪ್ರಸ್ತಾವನೆಗೆ ಷರತ್ತುಬದ್ಧ ಅನುಮತಿ ನೀಡಿದ DGCA title=

Go First ವಿಮಾನಯಾನ ಸಂಸ್ಥೆಗೆ ಮತ್ತೊಮ್ಮೆ ವಿಮಾನಯಾನ ಸೇವೆ ಆರಂಭಿಸಲು ಡಿಜಿಸಿಎ ಅನುಮತಿಯನ್ನು ನೀಡಿದೆ. ಡಿಜಿಸಿಎ ಷರತ್ತುಗಳೊಂದಿಗೆ ಗೋಫಸ್ಟ್‌ಗೆ ಸೇವೆ ಪುನಾರಂಭಿಸಾಲು ಅನುಮತಿ ನೀಡಿದೆ. ಮತ್ತೆ ಹಾರಾಟ ನಡೆಸುವ ಗೋ ಪ್ರಸ್ತಾವನೆಯನ್ನು ಡಿಜಿಸಿಎ ಷರತ್ತುಬದ್ಧವಾಗಿ ಒಪ್ಪಿಕೊಂಡಿದೆ. ಲೆಕ್ಕಪರಿಶೋಧನೆಯ ನಂತರ ನಿಯಂತ್ರಕರ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಗೋ ಫಸ್ಟ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ
ಅಧಿಕೃತ ಹೇಳಿಕೆಯ ಪ್ರಕಾರ, ಎಲ್ಲಾ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಗೋ ಫರ್ಸ್ಟ್ ಗೆ ವಿಮಾನ ಸೇವೆ ಪುನರಾರಂಭಿಸಲು ಅನುಮತಿಸಲಾಗಿದೆ. IRP ಷರತ್ತನ್ನು ಪೂರೈಸಿದ ನಂತರ DGCA ಯಿಂದ ವಿಮಾನ ವೇಳಾಪಟ್ಟಿ ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರ ನಂತರ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಬುಕಿಂಗ್ ಜೊತೆಗೆ, ಮರುಪಾವತಿಗೆ ಸಂಬಂಧಿಸಿದಂತೆ ಕಂಪನಿ ಮುಂದುವರೆಯಲಿದೆ.

ಇದನ್ನೂ ಓದಿ-ಕೇವಲ 8.29 ಲಕ್ಷ ರೂ. ಬೆಲೆಯ ಈ ಎಸ್ಯುವಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ...!

ಕಳೆದ ಎರಡು ತಿಂಗಳಿನಿಂದ ಗೋ ಫಸ್ಟ್ ಸೇವೆ ನಿಲ್ಲಿಸಲಾಗಿದೆ
ಮೇ 3 ರಿಂದ, ಏರ್‌ಲೈನ್ ತನ್ನ ಎಲ್ಲಾ ರೂಟ್ ಗಳಿಗೆ ವಿಮಾನ ಸೇವೆಯನ್ನು ರದ್ದುಗೊಳಿಸಿತ್ತು, ಜೂನ್ 30, 2023 ರವರೆಗೆ ಸೇವೆಯನ್ನು ರದ್ದುಗೊಳಿಸಿತ್ತು. ಇದನ್ನು ವಿಮಾನಯಾನ ಸಂಸ್ಥೆ ಟ್ವಿಟರ್‌ನಲ್ಲಿಯೂ ಪ್ರಕಟಿಸಿದೆ.

ಇದನ್ನೂ ಓದಿ-ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!

ಮರುಪಾವತಿ ನೀತಿ ಏನು
ವಿಮಾನಯಾನ ಕಂಪನಿಯು ವಿಮಾನವನ್ನು ರದ್ದುಗೊಳಿಸಿದರೆ, ಅದು ತನ್ನ ಪ್ರಯಾಣಿಕರಿಗೆ ಟಿಕೆಟ್‌ನ ಶೇ.100 ರಷ್ಟು ಮರುಪಾವತಿ ನೀಡಲಿದೆ. ಇದೇ ವೇಳೆ, ಪ್ರಯಾಣಿಕರ ಶಿಫಾರಸಿನ ಮೇರೆಗೆ ಮರುಪಾವತಿಯನ್ನು ಸಹ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News