ಈ ಮೂರು ಕಾರಣಗಳಿಂದಾಗಿ ಬ್ಯಾಂಕ್ ನಿಂದ ಬಂಗಾರದ ಕಾಯಿನ್ ಖರೀದಿಸಬಾರದು ! ನಷ್ಟ ಅನುಭವಿಸಬೇಕಾಗುತ್ತದೆ

ಹೂಡಿಕೆ ಮಾಡಲು ಬಯಸಿದರೆ, ಪ್ರೀಮಿಯಂ ದರ ಪಾವತಿಸುವ ಮೂಲಕ ಯಾವುದೇ ದುಬಾರಿ ಲೋಹವನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿಯಾಗಿರುವುದಿಲ್ಲ. 

Written by - Ranjitha R K | Last Updated : Jul 7, 2023, 10:51 AM IST
  • ಇತ್ತೀಚೆಗಷ್ಟೇ ಚಿನ್ನದ ಬೆಲೆ 10 ಗ್ರಾಂಗೆ 60,000 ರೂಪಾಯಿ ದಾಟಿತ್ತು
  • ಬ್ಯಾಂಕಿನಲ್ಲಿ ಕೂಡಾ ಚಿನ್ನದ ನಾಣ್ಯಗಳ ಮೇಲೆ ಹೂಡಿಕೆ ಆಯ್ಕೆ
  • ಗೋಲ್ಡ್ ಕಾಯಿನ್ ಖರೀದಿಸಿದರೆ ನಷ್ಟ
ಈ ಮೂರು ಕಾರಣಗಳಿಂದಾಗಿ ಬ್ಯಾಂಕ್ ನಿಂದ ಬಂಗಾರದ ಕಾಯಿನ್ ಖರೀದಿಸಬಾರದು ! ನಷ್ಟ ಅನುಭವಿಸಬೇಕಾಗುತ್ತದೆ  title=

ಬೆಂಗಳೂರು : ಇತ್ತೀಚೆಗಷ್ಟೇ ಚಿನ್ನದ ಬೆಲೆ 10 ಗ್ರಾಂಗೆ 60,000 ರೂಪಾಯಿ ದಾಟಿತ್ತು. ಬೆಲೆಯಲ್ಲಿ ತ್ವರಿತ ಹೆಚ್ಚಳದ ನಡುವೆಯೂ ಅನೇಕ ಜನರು ಹೂಡಿಕೆಗೆ ಇದು ಉತ್ತಮ ಆಯ್ಕೆ ಎಂದೇ ಪರಿಗಣಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಕೂಡಾ ಚಿನ್ನದ ನಾಣ್ಯಗಳ ಮೇಲೆ ಹೂಡಿಕೆ ಮಾಡುವ ಆಯ್ಕೆಯನ್ನು ಉತ್ತಮ ಆಯ್ಕೆಯಾಗಿ ಪ್ರಸ್ತುತಪಡಿಸುವ ಸಾಧ್ಯತೆಯಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ಕೂಡಾ ಚಿನ್ನದ ನಾಣ್ಯಗಳನ್ನು ಖರೀದಿಸಿದ್ದಿರಬಹುದು. ಆದರೆ ಇದನ್ನು ಪದೇ ಪದೇ  ಮಾಡುತ್ತಿದ್ದರೆ, ಸ್ವಲ್ಪ ಯೋಚಿಸಬೇಕಾಗುತ್ತದೆ. 

ಚಿನ್ನದ ನಾಣ್ಯ ಖರೀದಿಸುವುದು ಹೇಗೆ? :
ಬ್ಯಾಂಕಿನಿಂದ ಚಿನ್ನದ ನಾಣ್ಯಗಳನ್ನು ಖರೀದಿಸುವುದು ನಿಮಗೆ ಲಾಭದಾಯಕ ವ್ಯವಹಾರವಲ್ಲ ಎಂದು ಹೇಳುವ ಮೊದಲು, ನೀವು ಬ್ಯಾಂಕಿನಿಂದ ಚಿನ್ನದ ನಾಣ್ಯಗಳನ್ನು ಹೇಗೆ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ. ನಿಮ್ಮ KYCಯನ್ನು ಪೂರ್ಣಗೊಳಿಸಿದ್ದರೆ, ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. ನೆಟ್ ಬ್ಯಾಂಕಿಂಗ್ ಮೂಲಕ ಕೂಡಾ ಕೆಲವು ಬ್ಯಾಂಕ್‌ಗಳಿಂದ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. 50,000 ರೂ.ಗಿಂತ ಹೆಚ್ಚಿನ ಖರೀದಿಗೆ ಪ್ಯಾನ್ ನೀಡುವುದು ಅವಶ್ಯಕವಾಗಿರುತ್ತದೆ.  ಈಗ ಬ್ಯಾಂಕ್‌ನಿಂದ ಚಿನ್ನದ ನಾಣ್ಯಗಳನ್ನು ಖರೀದಿಸುವ ಅನಾನುಕೂಲಗಳ ಬಗ್ಗೆ ನೋಡೋಣ. 

ಇದನ್ನೂ ಓದಿ : ಈ ಬಿಸ್ ನೆಸ್ ಆರಂಭಿಸಲು ಮಳೆಗಾಲವೇ ಬೆಸ್ಟ್! ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಆದಾಯ ಗಳಿಕೆ

ಪ್ರೀಮಿಯಂ ದರ ಪಾವತಿಸಬೇಕು : 
ಬ್ಯಾಂಕ್‌ಗಳು ಮಾರಾಟ ಮಾಡುವ ನಾಣ್ಯಗಳ ಗುಣಮಟ್ಟ ಹೆಚ್ಚು. ಇವುಗಳನ್ನು ಸಾಮಾನ್ಯವಾಗಿ ಸ್ವಿಟ್ಜರ್ಲೆಂಡ್ ಮತ್ತು ಪಶ್ಚಿಮದಲ್ಲಿರುವ ಇತರ ಅಂತರರಾಷ್ಟ್ರೀಯ ಗಣಿಗಾರಿಕೆ ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಕಾರಣಕ್ಕಾಗಿ, ದರವು ಮಾರುಕಟ್ಟೆ ದರಕ್ಕಿಂತ 7 ರಿಂದ 10 ಪ್ರತಿಶತ ಹೆಚ್ಚಾಗಿರುತ್ತದೆ. ಪ್ರಸ್ತುತ ಚಿನ್ನದ ಮಾರುಕಟ್ಟೆ ದರವು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿರುವುದು ಗಮನಾರ್ಹವಾಗಿದೆ. ನೀವು ಹೂಡಿಕೆ ಮಾಡಲು ಬಯಸಿದರೆ, ಪ್ರೀಮಿಯಂ ದರ ಪಾವತಿಸುವ ಮೂಲಕ ಯಾವುದೇ ದುಬಾರಿ ಲೋಹವನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿಯಾಗಿರುವುದಿಲ್ಲ.  

ಬ್ಯಾಂಕ್‌ಗೆ ಮರಳಿ ಮಾರಾಟ ಮಾಡಲು ಸಾಧ್ಯವಿಲ್ಲ : 
ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚನೆಗಳ ಪ್ರಕಾರ ಬ್ಯಾಂಕ್‌ಗಳು ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುತ್ತವೆಯೇ ಹೊರತು ಅವುಗಳನ್ನು ಖರೀದಿಸುವುದಿಲ್ಲ. ನೀವು ಬ್ಯಾಂಕಿನಿಂದ ಚಿನ್ನವನ್ನು ಖರೀದಿಸಿದರೂ ಅಥವಾ ಈಗಾಗಲೇ ಖರೀದಿಸಿದ್ದರೂ, ಆ ನಾಣ್ಯಗಳನ್ನು ಅವರಿಗೆ ಮರಳಿ ಬ್ಯಾಂಕ್ ಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಇದನ್ನು ಮಾರಾಟ ಮಾಡುವಾಗ ಬ್ಯಾಂಕಿಗೆ ಪಾವತಿಸಿದ ಪ್ರೀಮಿಯಂ ಬದಲಿಗೆ ಮಾರುಕಟ್ಟೆ ದರವನ್ನು ನೀಡಲಾಗುವುದು. ಪ್ರೀಮಿಯಂ ಆಭರಣ ಬ್ರ್ಯಾಂಡ್‌ಗಳು ಚಿನ್ನದ ನಾಣ್ಯದ ಬದಲಿಗೆ ತಮ್ಮ ಆಭರಣಗಳನ್ನು ನಿಮಗೆ ಮಾರಾಟ ಮಾಡುತ್ತಾರೆ.  

ಇದನ್ನೂ ಓದಿ Karnataka Budget 2023: ಇಂದು ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಚಿನ್ನವನ್ನು ಮಾರಿದರೆ ನಿಮಗೆ ಪೂರ್ಣ ಹಣ ಸಿಗುವುದಿಲ್ಲ :
ಮೊದಲೇ ಹೇಳಿದಂತೆ ಬ್ಯಾಂಕ್‌ನಿಂದ ಖರೀದಿಸಿದ ನಾಣ್ಯಗಳನ್ನು ಮಾರಾಟ ಮಾಡುವುದಾದರೆ ಮಾರುಕಟ್ಟೆ ದರದ ಪ್ರಕಾರವೇ ಹಣ ಸಿಗುತ್ತದೆ. ನಿಮಗೆ ತುರ್ತು ಹಣದ ಅಗತ್ಯವಿದ್ದರೆ, ನೀವು ಅವುಗಳನ್ನು ಸ್ಥಳೀಯ ಆಭರಣ ವ್ಯಾಪಾರಿಗಳಿಗೆ  ಮಾರಾಟ ಮಾಡಬಹುದು. ಆದರೆ ಆ ವ್ಯಾಪಾರಿ ನಿಮಗೆ ಪ್ರೀಮಿಯಂ ದರವನ್ನು ಪಾವತಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News