ಈ ಬಿಸ್ ನೆಸ್ ಆರಂಭಿಸಲು ಮಳೆಗಾಲವೇ ಬೆಸ್ಟ್! ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಆದಾಯ ಗಳಿಕೆ

ಅಣಬೆ ಕೃಷಿ ವ್ಯವಹಾರದಲ್ಲಿ ಅಣಬೆ ಉತ್ಪಾದನೆಗೆ ಸರಿಯಾದ  ಪರಿಸರವನ್ನು ಆಯ್ಕೆಮಾಡಿಕೊಳ್ಳಬೇಕು. ವಿವಿಧ ಪ್ರಭೇದಗಳಿಗೆ ವಿವಿಧ ರೀತಿಯ ಪರಿಸರದ ಅಗತ್ಯವಿರುತ್ತದೆ. 

Written by - Ranjitha R K | Last Updated : Jul 7, 2023, 08:52 AM IST
  • ವ್ಯಾಪಾರದಲ್ಲಿ ಹಲವು ವಿಧಗಳಿವೆ.
  • ಮಳೆಗಾಲದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಕಡಿಮೆ ಲಾಭವಿರುತ್ತದೆ.
  • ಈ ವ್ಯವಹಾರವನ್ನು ಆರಂಭಿಸಿದರೆ ಸಿಗುವುದು ಉತ್ತಮ ಲಾಭ
ಈ ಬಿಸ್ ನೆಸ್ ಆರಂಭಿಸಲು ಮಳೆಗಾಲವೇ ಬೆಸ್ಟ್! ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಆದಾಯ ಗಳಿಕೆ title=

ಬೆಂಗಳೂರು : ವ್ಯಾಪಾರದಲ್ಲಿ ಹಲವು ವಿಧಗಳಿವೆ. ಅನೇಕ ವ್ಯವಹಾರಗಳು ವಿವಿಧ ಋತುಗಳಲ್ಲಿ ಲಾಭವನ್ನು ನೀಡಲು ಪರಿಣಾಮಕಾರಿಯಾಗಿರುತ್ತದೆ.  ಇದೀಗ ಮಳೆಗಾಲ ನಡೆಯುತ್ತಿದೆ. ತಾಪಮಾನವೂ ಕುಸಿಯುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಕಡಿಮೆ ಲಾಭವಿರುತ್ತದೆ. ಆದರೆ, ಈ  ವ್ಯವಹಾರವನ್ನು ಆರಂಭಿಸುವ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು. 

ಅಣಬೆ ಕೃಷಿ :
ಮಳೆಗಾಲದಲ್ಲಿ ಅಣಬೆ ಕೃಷಿಯ ವ್ಯಾಪಾರ ಆರಂಭಿಸಬಹುದು. ಆರಂಭಿಕ ಹಂತದಲ್ಲಿ ಅಣಬೆ ಬೇಸಾಯಕ್ಕೆ ಅತಿ ಕಡಿಮೆ ಬಂಡವಾಳ ಹೂಡಿದರೆ ಸಾಕಾಗುತ್ತದೆ. ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭವನ್ನೂ ಗಳಿಸಬಹುದು. ಅಣಬೆ ಬೆಳೆಯುವ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸ್ವಲ್ಪ ಜ್ಞಾನವಿದ್ದು, ಸಣ್ಣ ಜಮೀನು ಇದ್ದರೆ ಸಾಕು ಅಣಬೆ ಕೃಷಿಯನ್ನು ಪ್ರಾರಂಭಿಸಬಹುದು.  

ಇದನ್ನೂ ಓದಿ Karnataka Budget 2023: ಇಂದು ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಅಣಬೆ ಕೃಷಿ ಲಾಭದಾಯಕವೇ? :
ಕಳೆದ ಕೆಲವು ವರ್ಷಗಳಿಂದ ಅಣಬೆ ಮಾರಾಟದಲ್ಲಿ ಭಾರೀ  ಏರಿಕೆಯಾಗಿದೆ. ಅಣಬೆ ಕೃಷಿಯ ವ್ಯವಹಾರವೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ವಿಶೇಷ ಅಣಬೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆಹಾರ ಪದಾರ್ಥಗಳ ಹೊರತಾಗಿ, ಇತರ ಸ್ಥಳಗಳಲ್ಲಿಯೂ ಅಣಬೆಗಳಿಗೆ ಬೇಡಿಕೆಯಿದೆ. ಅಣಬೆ ಕೃಷಿ ವ್ಯವಹಾರವು ಖಂಡಿತವಾಗಿಯೂ ಪ್ರಪಂಚದಾದ್ಯಂತದ ಅತ್ಯಂತ ಲಾಭದಾಯಕ ಒಳಾಂಗಣ ಕೃಷಿ ವ್ಯವಹಾರಗಳಲ್ಲಿ ಒಂದಾಗಿದೆ.

ಅಣಬೆ ಬೇಸಾಯಕ್ಕೆ ವೈವಿಧ್ಯವನ್ನು ಆರಿಸಿ : 
ವಿವಿಧ ರೀತಿಯ ಅಣಬೆಗಳು ವಿಭಿನ್ನ ಉತ್ಪಾದನಾ ವೆಚ್ಚಗಳನ್ನು ಹೊಂದಿರುತ್ತವೆ. ಲಭ್ಯವಿರುವ ಹಣ ಮತ್ತು ದೀರ್ಘಾವಧಿಯ ಪ್ರಯೋಜನಗಳ ಆಧಾರದ ಮೇಲೆ ಬಜೆಟ್ ಅನ್ನು ನಿಗದಿಪಡಿಸುವುದು ಮುಖ್ಯವಾಗಿದೆ. ಮೂರು ವಿಧದ ಅಣಬೆಗಳನ್ನು ಬೆಳೆಸಲಾಗುತ್ತದೆ. ಅವುಗಳೆಂದರೆ ಬಟನ್ ಮಶ್ರೂಮ್, ಆಯ್ಸ್ಟರ್ ಮಶ್ರೂಮ್ ಮತ್ತು ಪ್ಯಾಡಿ ಸ್ಟ್ರಾ ಮಶ್ರೂಮ್. ಅಣಬೆ ಕೃಷಿಯನ್ನು ಪ್ರಾರಂಭಿಸಲು ಉತ್ತಮ ವಿಧವೆಂದರೆ ಆಯ್ಸ್ಟರ್ ಮಶ್ರೂಮ್. ಇತರ ಲಾಭದಾಯಕ ಮತ್ತು ಸುಲಭವಾಗಿ ಬೆಳೆಯುವ ಪ್ರಭೇದಗಳೆಂದರೆ ಶಿಟೇಕ್, ಲಯನ್ಸ್ ಮೇನ್, ವೈಟ್ ಬಟನ್ ಮತ್ತು ಪೋರ್ಟೊಬೆಲ್ಲೋ.

ಇದನ್ನೂ ಓದಿ Income Tax Update: ಮೃತ ವ್ಯಕ್ತಿಗಳ ಐಟಿಆರ್ ಕೂಡ ದಾಖಲಿಸಬಹುದು, ಇಲ್ಲಿದೆ ವಿಧಾನ 

ಅಣಬೆ ಕೃಷಿಗೆ ಪರಿಸರ :
ಅಣಬೆ ಕೃಷಿಯ ವ್ಯವಹಾರದಲ್ಲಿ ಅಣಬೆ ಉತ್ಪಾದನೆಗೆ ಪರಿಸರವನ್ನು ಪರಿಗಣಿಸಿ.  ಉದಾಹರಣೆಗೆ, ಸಿಂಪಿ ಮಶ್ರೂಮ್ 15 ರಿಂದ 20 °C ತಾಪಮಾನ, 80 ರಿಂದ 90% ನಷ್ಟು ಆರ್ದ್ರತೆ, ಉತ್ತಮ ಗಾಳಿ, ಬೆಳಕು ಮತ್ತು ಶುಚಿತ್ವದಂತಹ ಕೆಲವು ಮೂಲಭೂತ ಪರಿಸರ ಅವಶ್ಯಕತೆಗಳನ್ನು ಹೊಂದಿದೆ.

ಅಣಬೆಗಳನ್ನು ಎಲ್ಲಿ ಮಾರಾಟ ಮಾಡುವುದು ? : 
ಅಣಬೆಗಳನ್ನು ಎಲ್ಲಿ ಮಾರಾಟ ಮಾಡಬೇಕೆಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆ ಇಲ್ಲದಿದ್ದರೆ, ಅವುಗಳನ್ನು ವಾಣಿಜ್ಯಿಕವಾಗಿ ಪ್ರಾರಂಭಿಸದಿರುವುದು ಒಳ್ಳೆಯದು. ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ನೀವು ಬೆಳೆದ ಅಣಬೆಯನ್ನು ಮಾರಾಟ ಮಾಡಿ. ದೊಡ್ಡ ಅಣಬೆಗಳನ್ನು ಖರೀದಿಸಲು ರೆಸ್ಟೋರೆಂಟ್‌ಗಳೇ ಉತ್ತಮ ಗ್ರಾಹಕರು. ಇಂದಿನ ದಿನಗಳಲ್ಲಿ ವ್ಯವಹಾರಗಳಿಗೆ ವೆಬ್‌ಸೈಟ್ ಹೊಂದುವುದು ಅವಶ್ಯಕ. ಇದು ಮಾರಾಟದ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ : Ration Card-Aadhaar Link: ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವ ಸಿಂಪಲ್ ವಿಧಾನ!

ಅಣಬೆ ಕೃಷಿ : 
ಪ್ರತಿ ಚದರ ಮೀಟರ್‌ಗೆ 10 ಕೆಜಿ ಅಣಬೆ ಉತ್ಪಾದನೆಯನ್ನು ಸುಲಭವಾಗಿ ಸಾಧಿಸಬಹುದು. ಕನಿಷ್ಠ 40×30 ಅಡಿ ಜಾಗದಲ್ಲಿ ತಲಾ ಮೂರು ಅಡಿ ಅಗಲದ ಮೂರು ರಾಕ್‌ಗಳನ್ನು ಮಾಡಿ ಅಣಬೆಗಳನ್ನು ಬೆಳೆಸಬಹುದು. ಹೆಚ್ಚುವರಿಯಾಗಿ, ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡಲು ಸರ್ಕಾರದ ಸಬ್ಸಿಡಿಗಳು ಸಹ ಲಭ್ಯವಿದೆ. ಅಣಬೆ ಬೇಸಾಯವು ಕೇವಲ 1 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ನಾಲ್ಕೈದು ತಿಂಗಳೊಳಗೆ ಸುಮಾರು 3-3.5 ಲಕ್ಷ ರೂಪಾಯಿಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೂಚನೆ : ಇಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಕಲ್ಪನೆಯ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ. ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ನೀವು ಸಂಬಂಧಿತ ಕ್ಷೇತ್ರದ ತಜ್ಞರಿಂದ ಸಲಹೆ ಪಡೆಯಬೇಕು. ಇದರೊಂದಿಗೆ, ಲಾಭದ ಅಂಕಿಅಂಶಗಳು ನಿಮ್ಮ ವ್ಯಾಪಾರದ ಮಾರಾಟವನ್ನು ಅವಲಂಬಿಸಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News