ದಾಖಲೆ ಮಟ್ಟ ತಲುಪಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ!

Gold-Silver Price Today: 56883 ರೂ.ಗೆ ತಲುಪಿದ್ದ ಬಂಗಾರದ ಬೆಲೆಯಲ್ಲಿ ಇದೀಗ ಭಾರೀ ಕುಸಿತ ಕಂಡಿದೆ. ಆದರೆ, ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. 

Written by - Ranjitha R K | Last Updated : Jan 18, 2023, 02:28 PM IST
  • ಚಿನ್ನದ ಬೆಲೆಯಲ್ಲಿ ಇಳಿಕೆ
  • ಬೆಳ್ಳಿ ದರದಲ್ಲಿ ಸ್ವಲ್ಪ ಏರಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
ದಾಖಲೆ ಮಟ್ಟ ತಲುಪಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ!  title=

Gold-Silver Price Today : ಎರಡು ದಿನಗಳ ಹಿಂದೆ  ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ಈಗ ಇಳಿಮುಖ ಕಾಣುತ್ತಿದೆ.  ಕಳೆದ ಕೆಲವು ದಿನಗಳಿಂದ  ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಬುಧವಾರ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್ ಮತ್ತು ಬುಲಿಯನ್ ಮಾರುಕಟ್ಟೆ  ವಹುವಾಟಿನ ಪ್ರಕಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.  56883 ರೂ.ಗೆ ತಲುಪಿದ್ದ ಬಂಗಾರದ ಬೆಲೆಯಲ್ಲಿ ಇದೀಗ ಭಾರೀ ಕುಸಿತ ಕಂಡಿದೆ. ಆದರೆ, ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. 

ಚಿನ್ನ ಅಗ್ಗ ಬೆಳ್ಳಿ ದುಬಾರಿ : 
ಬುಧವಾರ, ಬುಲಿಯನ್ ಮಾರುಕಟ್ಟೆಯೊಂದಿಗೆ, ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿಎರಡೂ ಲೋಹಗಳ ಮಾರುಕಟ್ಟೆ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿನ್ನದ ಬೆಲೆ 132 ರೂಪಾಯಿ ಇಳಿಕೆಯಾಗಿ 10 ಗ್ರಾಂಗೆ 56220 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 131 ರೂಪಾಯಿ ಏರಿಕೆಯೊಂದಿಗೆ 69317 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ

ಇದನ್ನೂ ಓದಿ : ಬಜೆಟ್ ನಂತರ ಸರ್ಕಾರಿ ನೌಕರರಿಗೆ ಬಂಪರ್ .! 9,000 ರೂಪಾಯಿಯಷ್ಟು ಹೆಚ್ಚಾಗುವುದು ವೇತನ

ಬುಲಿಯನ್ ಮಾರುಕಟ್ಟೆಯಲ್ಲಿ ದರ ಇಳಿಕೆ!
ಬುಧವಾರದಂದು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದ್ದರೂ ಬೆಳ್ಳಿ ಹಳೆಯ ಮಟ್ಟದಲ್ಲಿಯೇ ಇತ್ತು. ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com ) ಬುಧವಾರ ಬಿಡುಗಡೆ ಮಾಡಿರುವ ಬೆಲೆಯ ಪ್ರಕಾರ, 24 ಕ್ಯಾರೆಟ್ ಚಿನ್ನ 147 ರೂ.ನಷ್ಟು ಕುಸಿದು 10 ಗ್ರಾಂ ಬೆಲೆ  56605 ರೂ.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 68661 ರೂಪಾಯಿ ಆಗಿದೆ. 

ಬುಧವಾರದ ವಹಿವಾಟಿನಲ್ಲಿ 23 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 56378 ರೂ., 22 ಕ್ಯಾರೆಟ್ 10 ಗ್ರಾಂಗೆ 51850 ರೂ., 18 ಕ್ಯಾರೆಟ್ 10 ಗ್ರಾಂಗೆ 42454 ರೂ. ಆಗಿದೆ. ಮಂಗಳವಾರದಂದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 56752 ರೂ. ಆಗಿತ್ತು. 

ಇದನ್ನೂ ಓದಿ : ಮಾರುತಿ, ಹ್ಯುಂಡೈ ಸೇರಿದಂತೆ ಹಲವು ದೊಡ್ಡ ಕಾರು ಕಂಪನಿಗಳಿಗೆ ಟಕ್ಕರ್ ನೀಡಿದ ಭಾರತೀಯ ಕಂಪನಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News