PPF ಖಾತೆ ಇದ್ದರೆ ಬಜೆಟ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ .! ಕೈ ಸೇರುವುದು 1.5 ಕೋಟಿ ರೂಪಾಯಿ

Public Provident Fund : ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಮೂಲಕ 1.5 ಕೋಟಿ ಮೊತ್ತವನ್ನು ಸಂಗ್ರಹಿಸಬಹುದು. ಈ ಹೂಡಿಕೆ ಮೂಲಕ ಗರಿಷ್ಠ ಬಡ್ಡಿಯನ್ನು ಪಡೆದು ಮೊತ್ತವನ್ನು ಹೆಚ್ಚಿಸಬಹುದು.    

Written by - Ranjitha R K | Last Updated : Jan 26, 2023, 07:26 PM IST
  • ಪಿಪಿಎಫ್‌ ಒಂದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ.
  • ಅದರಲ್ಲಿ ಹೂಡಿಕೆ ಮಾಡಿದ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
  • ಹೂಡಿಕೆಯ ಮೇಲೆ ಉತ್ತಮ ಬಡ್ಡಿ ಸಿಗುವುದಲ್ಲದೆ, ತೆರಿಗೆಯೂ ಉಳಿತಾಯವಾಗುತ್ತದೆ.
PPF ಖಾತೆ ಇದ್ದರೆ ಬಜೆಟ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ .!  ಕೈ ಸೇರುವುದು  1.5 ಕೋಟಿ ರೂಪಾಯಿ  title=

Public Provident Fund : ಪಿಪಿಎಫ್‌ ಒಂದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಅದರಲ್ಲಿ ಹೂಡಿಕೆ ಮಾಡಿದ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಈ ಹೂಡಿಕೆಯ ಮೇಲೆ ಉತ್ತಮ ಬಡ್ಡಿ ಸಿಗುವುದಲ್ಲದೆ, ತೆರಿಗೆಯೂ ಉಳಿತಾಯವಾಗುತ್ತದೆ. ಪಿಪಿಎಫ್ ನಲ್ಲಿ ಹೂಡಿಕೆಯ ಮಿತಿಯನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸುವಂತೆ ತಜ್ಞರು ಈ ಬಾರಿ ಹಣಕಾಸು ಸಚಿವರನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಮೂಲಕ 1.5 ಕೋಟಿ ಮೊತ್ತವನ್ನು ಸಂಗ್ರಹಿಸಬಹುದು. ಈ ಹೂಡಿಕೆ ಮೂಲಕ ಗರಿಷ್ಠ ಬಡ್ಡಿಯನ್ನು ಪಡೆದು ಮೊತ್ತವನ್ನು ಹೆಚ್ಚಿಸಬಹುದು.  

ಹೇಗೆ ಪಡೆಯಬಹುದು 1.5 ಕೋಟಿ :
ಪಿಪಿಎಫ್‌ ಖಾತೆಯಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಉದಾಹರಣೆಗೆ, ಪ್ರತಿ ತಿಂಗಳು 12,500 ರೂಪಾಯಿಗಳನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಿದ್ದರೆ , 15 ವರ್ಷಗಳ ಮೆಚ್ಯುರಿ ಟಿ 
ನಂತರ ನಿಮ್ಮ PPF ಖಾತೆಯನ್ನು 5-5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. ಹೀಗಾದಾಗ 30 ವರ್ಷಗಳ ನಂತರ, PPF ಖಾತೆಯಲ್ಲಿ   1.5 ಕೋಟಿಗಳಿಗಿಂತ ಹೆಚ್ಚು (1,54,50,911) ಹಣ ಸಂಗ್ರಹವಾಗುತ್ತದೆ. ಇದರಲ್ಲಿ ನಿಮ್ಮ ಹೂಡಿಕೆಯು 45 ಲಕ್ಷ ರೂಪಾಯಿಗಳಾಗಿದ್ದರೆ, ಬಡ್ಡಿಯಿಂದ ಬರುವ ಆದಾಯ ಸುಮಾರು 1.09 ಕೋಟಿ ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ : Old Pension Scheme : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು!

25 ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಪ್ರಾರಂಭಿಸಿ : 
ನೀವು ಎಷ್ಟು ಬೇಗ PPF ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ ಅಷ್ಟು ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 25 ವರ್ಷ ವಯಸ್ಸಿನವರು PPFನಲ್ಲಿ ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡುತ್ತಿದ್ದರೆ ,  55 ನೇ ವಯಸ್ಸಿನಲ್ಲಿ ಅಂದರೆ ನಿವೃತ್ತಿಯ ಹೊತ್ತಿಗೆ ಮಿಲಿಯನೇರ್ ಆಗಬಹುದು.

ಬಡ್ಡಿ ಹೇಗೆ ಲೆಕ್ಕ ಹಾಕಲಾಗುತ್ತದೆ : 
PPFನಲ್ಲಿ ಮಾಸಿಕ ಆಧಾರದ ಮೇಲೆ  ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಆದರೆ ಈ ಹಣವನ್ನು ಆರ್ಥಿಕ ವರ್ಷದ ಕೊನೆಯಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದರೆ, ಪ್ರತಿ ತಿಂಗಳು ಗಳಿಸುವ ಬಡ್ಡಿಯನ್ನು ಮಾರ್ಚ್ 31 ಕ್ಕೆ PPF ಖಾತೆಗೆ ಜಮಾ ಮಾಡಲಾಗುತ್ತದೆ. PPF ನಲ್ಲಿ ಹಣವನ್ನು ಯಾವಾಗ ಠೇವಣಿ ಮಾಡಬೇಕು ಎಂಬುದಕ್ಕೆ ಯಾವುದೇ ನಿಗದಿತ ದಿನಾಂಕವಿಲ್ಲ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಹಣವನ್ನು ಠೇವಣಿ ಮಾಡಬಹುದು.

ಯಾವುದೇ ತಿಂಗಳ 5 ನೇ ತಾರೀಕಿನವರೆಗೆ PPF ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದರೆ, ಅದೇ ತಿಂಗಳಲ್ಲಿ ಆ ಹಣದ ಮೇಲೆ ಬಡ್ಡಿ ಲಭ್ಯವಿರುತ್ತದೆ.  ಆದರೆ ನೀವು 5 ನೇ ಅಥವಾ 6 ನೇ ದಿನದ ನಂತರ ಹಣವನ್ನು ಠೇವಣಿ ಮಾಡಿದರೆ, ಮುಂದಿನ ಠೇವಣಿ ಮೊತ್ತಕ್ಕೆ ಬಡ್ಡಿಯು ಲಭ್ಯವಿರುತ್ತದೆ. 

ಇದನ್ನೂ ಓದಿ : Driving Licence : ಈಗ ಕಾರು, ಬೈಕ್, ಸ್ಕೂಟರ್ ಓಡಿಸಲು ಅಗತ್ಯವಿಲ್ಲ ಡಿಎಲ್ : ಅದಕ್ಕೆ ಈ ಕೆಲಸ ಮಾಡಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News