Karnataka Budget 2024:ಒಲಿಂಪಿಕ್, ಕಾಮನ್ ವೆಲ್ತ್ ವಿಜೇತರಿಗೆ ಭರ್ಜರಿ ಘೋಷಣೆ

Karnataka Budget 2024:ಓಲಂಪಿಕ್ ಮತ್ತು ಕಾಮನ್ ವೆಲ್ತ್ ನಲ್ಲಿ ಪದಕ ಗೆದ್ದು ಸಾಧನೆ ತೋರಿದ ಕ್ರೀಡಾಪಟುಗಳಿಗೆ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ.

Written by - Ranjitha R K | Last Updated : Feb 16, 2024, 12:02 PM IST
  • ಪ್ಯಾರಿಸ್ ಓಲಂಪಿಕ್ ನಲ್ಲಿ ಪದಕ ಗೆದ್ದವರಿಗೆ ಭರ್ಜರಿ ಬಹುಮಾನ
  • ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆದ್ದವರಿಗೂ ಪ್ರೋತ್ಸಾಹ ಧನ
  • ಬೆಂಗಳೂರಿನಲ್ಲಿ ಕ್ರೀಡಾ ನಗರ ನಿರ್ಮಾಣ
Karnataka Budget 2024:ಒಲಿಂಪಿಕ್, ಕಾಮನ್ ವೆಲ್ತ್ ವಿಜೇತರಿಗೆ ಭರ್ಜರಿ ಘೋಷಣೆ  title=

ಬೆಂಗಳೂರು : Latest news on Karnataka state budget 2024: ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಪಟುಗಳಿಗೆ ಬಂಪ ಕೊಡು ಗೆಗಗಳನ್ನು ನೀಡಿದ್ದಾರೆ. ಓಲಂಪಿಕ್ ನಲ್ಲಿ ಪದಕ ಗೆದ್ದು ಸಾಧನೆ ತೋರಿದ ಕ್ರೀಡಾಪಟುಗಳಿಗೆ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ. ಚಿನ್ನದ ಪದಕ ಗೆದ್ದವರಿಗೆ ೬ ಕೋಟಿ,ಬೆಳ್ಳಿ ಪದಕ ಗೆದ್ದವರಿಗೆ ೪ ಕೋಟಿ ಮತ್ತು  ಕಂಚಿನ ಪದಕ ಗೆದ್ದವರಿಗೆ ೩ ಕೋಟಿ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.  

ಪ್ಯಾರಿಸ್ ಓಲಂಪಿಕ್ ನಲ್ಲಿ ಪದಕ ಗೆದ್ದವರಿಗೆ ಭರ್ಜರಿ ಬಹುಮಾನ ಘೋಷಿಸಿದ ಮುಖ್ಯಮಂತ್ರಿ : 

1.ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ ೬ ಕೋಟಿ
2.ಬೆಳ್ಳಿ ಪದಕ ಗೆದ್ದವರಿಗೆ ೪ ಕೋಟಿ 
3.ಕಂಚಿನ ಪದಕ ಗೆದ್ದವರಿಗೆ ೩ ಕೋಟಿ ಪ್ರೋತ್ಸಾಹ ಧನ

ಇದನ್ನೂ ಓದಿ :Karnataka Budget 2024: ರಾಜ್ಯ ರೈತರಿಗಾಗಿ "ರೈತ ಸಮೃದ್ಧಿ ಯೋಜನೆ" ಜಾರಿ

ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆದ್ದವರಿಗೆ :
1.ಚಿನ್ನದ ಪದಕ ಗೆದ್ದವರಿಗೆ ೩೫ ಲಕ್ಷ 
2.ಬೆಳ್ಳಿ ಪದಕ ಗೆದ್ದವರಿಗೆ ೨೫ ಲಕ್ಷ
3.ಕಂಚಿನ ಪದಕ ಗೆದ್ದವರಿಗೆ ೧೫ ಲಕ್ಷ ಬಹುಮಾನ

ಬೆಂಗಳೂರಿನಲ್ಲಿ ಕ್ರೀಡಾ ನಗರ ನಿರ್ಮಾಣ :
ಇದಲ್ಲದೆ, ಬೆಂಗಳೂರಿನಲ್ಲಿ ಕ್ರೀಡಾ ನಗರ ನಿರ್ಮಾಣವನ್ನು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ೭೦ ಎಕರೆ ಪ್ರದೇಶದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣದ ಬಗ್ಗೆಯೂ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಬೆಂಗಳೂರಿನ ೪ ಕಡೆ ಬಹು ಕ್ರೀಡಾ ಸಂಕೀರ್ಣನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ೧೪ ವರ್ಷ ವಯಸ್ಸಿನೊಳಗಿನವರಿಗೆ ಮಿನಿ ಓಲಂಪಿಕ್ ಆಯೋಜನೆ ಮಾಡುವ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 

ಇದನ್ನೂ ಓದಿ : Karnataka Budget 2024: ಶೇ.3ರ ಬಡ್ಡಿ ದರದಲ್ಲಿ 15ಲಕ್ಷದ ವರೆಗೆ ಸಾಲ : ಸಿಎಂ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News