ಇಸ್ರೇಲ್-ಇರಾನ್ ಯುದ್ಧ ಪರಿಣಾಮ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಏರಿಕೆ : 12 ಪ್ರತಿಶತದಷ್ಟು ದುಬಾರಿಯಾದ ಕಚ್ಚಾತೈಲ

ಇಸ್ರೇಲ್-ಇರಾನ್ ಯುದ್ಧ ಪರಿಣಾಮ  ಭಾರತದ ಮೇಲೆ ಕೂಡಾ ಗೋಚರಿಸುತ್ತಿದೆ. ಈ ಯುದ್ಧದಿಂದಾಗಿ ಕಚ್ಚಾ ತೈಲಗಳ ಬೆಲೆಗಳು ಹೆಚ್ಚಾಗತೊಡಗಿದೆ.   

Written by - Ranjitha R K | Last Updated : Oct 8, 2024, 12:30 PM IST
  • ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದೆ
  • ಯುದ್ಧವು ಹಣದುಬ್ಬರದ ಮೇಲೆ ಪ್ರಭಾವ ಬೀರುತ್ತಿದೆ.
  • ಕಚ್ಚಾ ತೈಲದ ಬೆಲೆ ಶೇಕಡಾ 12 ರಷ್ಟು ಹೆಚ್ಚಾಗಿದೆ.
ಇಸ್ರೇಲ್-ಇರಾನ್ ಯುದ್ಧ ಪರಿಣಾಮ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಏರಿಕೆ : 12 ಪ್ರತಿಶತದಷ್ಟು ದುಬಾರಿಯಾದ ಕಚ್ಚಾತೈಲ  title=

ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು, ಅದರ ಪ್ರಭಾವ ಇಡೀ ಜಗತ್ತಿನ ಮೇಲೆ ಕಾಣುತ್ತಿದೆ.ಯುದ್ಧವು ಹಣದುಬ್ಬರದ ಮೇಲೆ ಪ್ರಭಾವ ಬೀರುತ್ತಿದೆ. ಮಧ್ಯಪ್ರಾಚ್ಯದಲ್ಲಿನ ಈ ಉದ್ವಿಗ್ನತೆಯು ಈಗ ಹಣದುಬ್ಬರದ ರೂಪದಲ್ಲಿ ಸಾಮಾನ್ಯ ಜನರ ಮೇಲೆ ಗೋಚರಿಸುತ್ತದೆ.ಈ ಯುದ್ಧದಿಂದಾಗಿ ಕಚ್ಚಾ ತೈಲಗಳ ಬೆಲೆಗಳು ಹೆಚ್ಚಾಗತೊಡಗಿದೆ.ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ ಕಚ್ಚಾ ತೈಲದ ಬೆಲೆ ಶೇಕಡಾ 12 ರಷ್ಟು ಹೆಚ್ಚಾಗಿದೆ. 

ಯುದ್ಧದ ಪರಿಣಾಮ  :
ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ,ಕಚ್ಚಾ ತೈಲ ಬೆಲೆಗಳು ಅಕ್ಟೋಬರ್ ನಲ್ಲಿ ಸುಮಾರು 12 ಪ್ರತಿಶತದಷ್ಟು ಏರಿಕೆ ಕಂಡಿವೆ.ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರತದ ಮೇಲೆ ತೈಲ ಆಮದಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಸರ್ಕಾರಿ ನೌಕರರ ಬಹುದಿನದ ಬೇಡಿಕೆಗೆ ಅಸ್ತು !ಕನಿಷ್ಠ ವೇತನ 34,560 ರೂ.ಗೆ ಏರಿಕೆ

ಕಚ್ಚಾ ತೈಲ ಬೆಲೆ :
ಆದರೆ ಒಪೆಕ್ ಸದಸ್ಯ ರಾಷ್ಟ್ರಗಳು,ರಷ್ಯಾ ಮತ್ತು ಇತರ ಕೆಲವು ಪೆಟ್ರೋಲಿಯಂ ಉತ್ಪಾದಿಸುವ ದೇಶಗಳು ಈ ವರ್ಷದ ಡಿಸೆಂಬರ್‌ನಿಂದ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.ಹಾಗಾಗಿ ವರ್ಷಾಂತ್ಯದ ವೇಳೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯಬಹುದು. ಹಮಾಸ್ ಮತ್ತು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಕ್ರಮದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ.ಇದರ ಮಧ್ಯೆ ಈಗ ಇರಾನ್ ಕೂಡಾ ಇಸ್ರೇಲ್ ವಿರುದ್ಧ ನಿಂತಿದೆ.ಇರಾನ್ ಸೇರಿದಂತೆ ಪಶ್ಚಿಮ ಏಷ್ಯಾದ ದೇಶಗಳು ಪೆಟ್ರೋಲಿಯಂನ ದೊಡ್ಡ ರಫ್ತುದಾರರು.

ವಾಸ್ತವವಾಗಿ, ಭಾರತವು ನಿವ್ವಳ ಪೆಟ್ರೋಲಿಯಂ ಆಮದು ಮಾಡಿಕೊಳ್ಳುವ ದೇಶವಾಗಿದೆ.ಅಂದರೆ ನಾವು ಕಚ್ಚಾ ತೈಲ ಮತ್ತು LNG-PNG ನಂತಹ ಉತ್ಪನ್ನಗಳಿಗೆ ಆಮದುಗಳನ್ನು ಅವಲಂಬಿಸಿರುತ್ತೇವೆ.ಇತರ ಇಂಧನ ಆಯ್ಕೆಗಳನ್ನು ಅಳವಡಿಸಿಕೊಂಡು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆಯಾದರೂ, ಪ್ರಸ್ತುತ ಅದು ಸಾಧ್ಯವಾಗುತ್ತಿಲ್ಲ.  

ಇದನ್ನೂ ಓದಿ :  Arecanut Price October 8th: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News