ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದೆ ಹೋದರೂ ಚಿಂತೆ ಮಾಡಬೇಕಿಲ್ಲ, ಈ ರೀತಿ ಪಡೆದುಕೊಳ್ಳಬಹುದು ಹಣ

ಹಬ್ಬದ ಋತುವಿನಲ್ಲಿ ಸ್ಯಾಲರಿ ಓವರ್ಡ್ರಾಫ್ಟ್ ನಿಮ್ಮ ಮುಂದಿರುವ ಉತ್ತಮ ಆಯ್ಕೆಯಾಗಿದೆ. ನೀವು ಉದ್ಯೋಗದಲ್ಲಿದ್ದರೆ, ಈ ಸೌಲಭ್ಯದ ಲಾಭ ಪಡೆಯಬಹುದು.   

Written by - Ranjitha R K | Last Updated : Nov 3, 2021, 12:53 PM IST
  • ಹಬ್ಬದ ಋತುವಿನಲ್ಲಿ, ಖರೀದಿ ಜೋರಾಗಿರುತ್ತದೆ
  • ಸ್ಯಾಲರಿ ಓವರ್‌ಡ್ರಾಫ್ಟ್ ಅಡಿಯಲ್ಲಿ ಹಣವನ್ನು ಪಡೆಯಬಹುದು
  • ಓವರ್‌ಡ್ರಾಫ್ಟ್ ಅನ್ನು ಮೊದಲೇ ಅನುಮೋದಿಸಲಾಗಿರುತ್ತದೆ
ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದೆ ಹೋದರೂ ಚಿಂತೆ ಮಾಡಬೇಕಿಲ್ಲ, ಈ ರೀತಿ ಪಡೆದುಕೊಳ್ಳಬಹುದು ಹಣ  title=
ಸ್ಯಾಲರಿ ಓವರ್‌ಡ್ರಾಫ್ಟ್ ಅಡಿಯಲ್ಲಿ ಹಣವನ್ನು ಪಡೆಯಬಹುದು (file photo)

ನವದೆಹಲಿ : ಹಬ್ಬದ ಸಂದರ್ಭದಲ್ಲಿ ಜನರು ಭರ್ಜರಿಯಾಗಿ ಶಾಪಿಂಗ್ (Shopping) ಮಾಡುತ್ತಾರೆ. ಎಲ್ಲಾ ಕಡೆಗಳಲ್ಲಿ ಬೆಲೆ ಏರಿಕೆಯ ಪರಿಣಾಮ, ಖರೀದಿಗಳಿಂದಾಗಿ ಬಜೆಟ್ ಸಂಪೂರ್ಣ ಹಾಳಾಗುತ್ತದೆ.  ಹಾಗಂತ ಕೇವಲ ಶಾಪಿಂಗ್‌ಗಾಗಿ ಎಫ್‌ಡಿ ಮುರಿಯುವುದು, ಎಲ್‌ಐಸಿ (LIC) ಹಣವನ್ನು ಪಡೆಯುವುದು ನಷ್ಟದ ದಾರಿ. ಆದರೆ ಈಗ ನಷ್ಟ ಮಾಡಿಕೊಳ್ಳದಂತೆ ಖರ್ಚು ನಿಭಾಯಿಸುವ ಸುಲಭ ದಾರಿಯೊಂದಿದೆ. 

ಸ್ಯಾಲರಿ ಓವರ್‌ ಡ್ರಾಫ್ಟ್ ಉತ್ತಮ ಆಯ್ಕೆ :  
ಹಬ್ಬದ ಋತುವಿನಲ್ಲಿ ಸ್ಯಾಲರಿ ಓವರ್ಡ್ರಾಫ್ಟ್ (Salary Overdraft) ನಿಮ್ಮ ಮುಂದಿರುವ ಉತ್ತಮ ಆಯ್ಕೆಯಾಗಿದೆ. ನೀವು ಉದ್ಯೋಗದಲ್ಲಿದ್ದರೆ, ಈ ಸೌಲಭ್ಯದ ಲಾಭ ಪಡೆಯಬಹುದು. ಬ್ಯಾಂಕ್ (Bank) ತನ್ನ ಗ್ರಾಹಕರಿಗೆ ಸ್ಯಾಲರಿ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ನೀವು ಖಾತೆಯಲ್ಲಿರುವ ಮೊತ್ತದಷ್ಟು ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಬ್ಯಾಂಕ್‌ನಿಂದ ಪಡೆಯಬಹುದು. ನಿಮ್ಮ ಸಂಬಳಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಬ್ಯಾಂಕಿನಿಂದ ತೆಗೆದುಕೊಳ್ಳಬಹುದು. ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ, ನೀವು ಇದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಬಹುದು. 

ಇದನ್ನೂ ಓದಿ : Indian Railways: ಟಿಕೆಟ್ ಬುಕಿಂಗ್ ವೇಳೆ ಕನ್ಫರ್ಮ್ ಲೋವರ್ ಬರ್ತ್ ಬೇಕಿದ್ದರೆ ಹೀಗೆ ಮಾಡಬೇಕು

ಸ್ಯಾಲರಿ  ಓವರ್‌ಡ್ರಾಫ್ಟ್ ಎಂದರೇನು? :
ಸ್ಯಾಲರಿ ಓವರ್‌ಡ್ರಾಫ್ಟ್ ಎಂದರೆ ಬ್ಯಾಂಕ್ ನಿಂದ ನೀಡುವ ಲೋನ್ ಆಗಿರುತ್ತದೆ. ಇದನ್ನೂ ನಿಮ್ಮ ಹಿಂದಿನ ರೆಕಾರ್ಡ್ ನೋಡಿ ನೀಡಲಾಗುತ್ತದೆ. ಇತರ ಸಾಲ ಮರುಪಾವತಿಗೆ ಹೇಗೆ ಬಡ್ಡಿ ಕಟ್ಟಬೇಕೋ ಅದೇ ರೀತಿ ಈ ಲೋನ್ ಮರುಪಾವತಿಗೂ ಬಡ್ಡಿ ಕಟ್ಟಬೇಕು. ಆದರೆ, ಅದರ ಬಡ್ಡಿಯು ಕ್ರೆಡಿಟ್ ಕಾರ್ಡ್‌ಗಳಿಗಿಂತ (Credit card) ಅಗ್ಗವಾಗಿರುತ್ತದೆ.

ಓವರ್‌ಡ್ರಾಫ್ಟ್ ಸೌಲಭ್ಯದ ಪ್ರಯೋಜನಗಳು :
ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿಲ್ಲದಿದ್ದರೂ, ಅವನು ಒಂದು ಮಿತಿಯವರೆಗೆ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಮನೆ, ಎಫ್‌ಡಿ ಅಥವಾ ವಿಮಾ ಪಾಲಿಸಿಯನ್ನು ಮೇಲಾಧಾರವಾಗಿ ಇಟ್ಟುಕೊಂಡ ನಂತರ ಈ ಹಣವನ್ನು ಪಡೆಯಬಹುದು. ಇಷ್ಟೇ ಅಲ್ಲ, ಈಗ ನೀವು ಈಕ್ವಿಟಿ ಮೂಲಕ ಓವರ್‌ಡ್ರಾಫ್ಟ್ ಸೌಲಭ್ಯದ ಲಾಭವನ್ನೂ ಪಡೆಯಬಹುದು. 

ಇದನ್ನೂ ಓದಿ :  Edible Oil Price: ಖಾದ್ಯ ತೈಲಗಳ ಸಗಟು ಬೆಲೆ ಲೀಟರ್‌ಗೆ 5 ರೂಪಾಯಿ ಇಳಿಕೆ

ಹಣ ಹಿಂಪಡೆಯುವುದು ಕೂಡ ಸುಲಭ :
ಈ ಓವರ್‌ಡ್ರಾಫ್ಟ್ ಅನ್ನು ಮೊದಲೇ ಅನುಮೋದಿಸಲಾಗಿರುತ್ತದೆ. ಮತ್ತು ಮಿತಿಯನ್ನು ನಿಗದಿಪಡಿಸಲಾಗಿರುತ್ತದೆ.   ಓವರ್‌ಡ್ರಾಫ್ಟ್ ಸೌಲಭ್ಯಕ್ಕಾಗಿ, ನೀವು ಪ್ರತಿ ತಿಂಗಳು 1 ರಿಂದ 3 ಪ್ರತಿಶತದಷ್ಟು ಬಡ್ಡಿಯನ್ನು (Interest rate) ಪಾವತಿಸಬೇಕಾಗುತ್ತದೆ. ಅಂದರೆ, ಈ ಸಾಲದ ಮೇಲೆ ನೀವು ವಾರ್ಷಿಕವಾಗಿ 12 ರಿಂದ 30 ಪ್ರತಿಶತದಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News