ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ! ಸರ್ಕಾರ ನೀಡಲಿದೆ ಸಿಹಿ ಸುದ್ದಿ

Union Budget 2023 Expectations:ರೈತರು ಮತ್ತು ಉದ್ಯೋಗಸ್ಥರು ಭಾರೀ ನಿರೀಕ್ಷೆಯೊಂದಿಗೆ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ. ಪ್ರಸ್ತುತ ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ. ಆಗಿದೆ. ಅಂದರೆ, ವಾರ್ಷಿಕವಾಗಿ ಎರಡೂವರೆ ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವ ವ್ಯಕ್ತಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

Written by - Ranjitha R K | Last Updated : Dec 19, 2022, 12:59 PM IST
  • ಕೇಂದ್ರ ಬಜೆಟ್‌ ಮೇಲೆ ನೌಕರ ವರ್ಗ ಭಾರೀ ನಿರೀಕ್ಷೆ
  • ಬಜೆಟ್ ಮೇಲೆ ರೈತರು ಮತ್ತು ಉದ್ಯೋಗಸ್ಥರ ನಿರೀಕ್ಷೆ
  • 5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತ!
ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ!  ಸರ್ಕಾರ ನೀಡಲಿದೆ ಸಿಹಿ ಸುದ್ದಿ  title=
Union Budget 2023 Expectations

ಬೆಂಗಳೂರು : Union Budget 2023 Expectations : ಕೇಂದ್ರ ಬಜೆಟ್‌ ಮೇಲೆ ನೌಕರ ವರ್ಗ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಫೆಬ್ರವರಿ ಒಂದರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,  ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ರೈತರು ಮತ್ತು ಉದ್ಯೋಗಸ್ಥರು ಭಾರೀ ನಿರೀಕ್ಷೆಯೊಂದಿಗೆ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ. ಪ್ರಸ್ತುತ ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ. ಆಗಿದೆ. ಅಂದರೆ, ವಾರ್ಷಿಕವಾಗಿ ಎರಡೂವರೆ ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವ ವ್ಯಕ್ತಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಈ ಮಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೋಟ್ಯಂತರ ಉದ್ಯೋಗಿಗಳಿಂದ ಕೇಳಿ ಬಂದಿದೆ. 

5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತ! :
ಸೆಕ್ಷನ್ 87A ಅಡಿಯಲ್ಲಿ ನೀಡಲಾದ ವಿನಾಯಿತಿಯಿಂದಾಗಿ 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ರಿಯಾಯಿತಿ ಲಭ್ಯವಿದೆ. ನಿಯಮಗಳ ಪ್ರಕಾರ, 2.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಮೇಲೆ ಆದಾಯ ತೆರಿಗೆ ಪಾವತಿಸಲು ಅವಕಾಶವಿದೆ. ಆದರೆ, 2.5 ರಿಂದ 5 ಲಕ್ಷದವರೆಗಿನ ಆದಾಯದ ಮೇಲೆ ಪಾವತಿಸಿದ ತೆರಿಗೆ ಮೊತ್ತಕ್ಕೆ ಹಣಕಾಸು ಸಚಿವಾಲಯವು ಸೆಕ್ಷನ್ 87A ಅಡಿಯಲ್ಲಿ ವಿನಾಯಿತಿ ನೀಡಿದೆ. ಈ ಮೂಲಕ 5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತವಾಗುತ್ತದೆ. ಆದರೆ ನಿಮ್ಮ ಆದಾಯ 5 ಲಕ್ಷಕ್ಕಿಂತ ಹೆಚ್ಚಿದ್ದರೆ 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : Gold Price Today : ನಿಮ್ಮ ನಗರದಲ್ಲಿ ಇಂದು ಎಷ್ಟಿದೆ ಗೊತ್ತಾ ಚಿನ್ನ ಬೆಳ್ಳಿ ದರ ?

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವ :
ಇದೇ ಕಾರಣಕ್ಕೆ ಈ ಹಿಂದಿನಂತೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಅಸೋಸಿಯೇಟ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ  ವತಿಯಿಂದ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಬೇಡಿಕೆಯನ್ನು ವಿತ್ತ ಸಚಿವರು ಒಪ್ಪಿಕೊಂಡರೆ ಉದ್ಯೋಗ ವರ್ಗಕ್ಕೆ ಲಾಭವಾಗಲಿದೆ. 

ಫೆಬ್ರವರಿ 1, 2023 ರಂದು ಹೊರ ಬೀಳುವುದು ಘೋಷಣೆ  :
ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾದ ಶಿಫಾರಸಿನಲ್ಲಿ, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಅಸೋಸಿಯೇಟ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ  ಹೇಳಿದೆ. ಇದರಿಂದ ಜನಸಾಮಾನ್ಯರಿಗೆ ಹಣ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ.  ಅಲ್ಲದೆ, ಶ್ರೀಸಾಮಾನ್ಯನ ಖರೀದಿ ಸಾಮರ್ಥ್ಯ ಹೆಚ್ಚಲಿದ್ದು, ಮಾರುಕಟ್ಟೆ ಕೂಡಾ ವೇಗ ಪಡೆಯಲಿದೆ. ಆದಾಯ ತೆರಿಗೆಯ ಕುರಿತು ಯಾವುದೇ ರೀತಿಯ ನಿರ್ಧಾರವನ್ನು ಹಣಕಾಸು ಸಚಿವಾಲಯ ತೆಗೆದುಕೊಂಡರೆ, ಹಣಕಾಸು ಸಚಿವರು ಫೆಬ್ರವರಿ 1, 2023 ರಂದು ಬಜೆಟ್ ಮಂಡನೆ ಸಮಯದಲ್ಲಿ ಘೋಷಿಸುತ್ತಾರೆ.

ಇದನ್ನೂ ಓದಿ : Car Buying Tips : ನಿಮ್ಮ ಸಂಬಳದ ಪ್ರಕಾರ ನೀವು ಯಾವ ಖರೀದಿಸಬಹುದು, ಇಲ್ಲಿದೆ ನೋಡಿ ಲೆಕ್ಕಾಚಾರ

ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸಲು ಸಾಧ್ಯವೇ ? : 
ಈ ಹಿಂದೆ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳ ಉತ್ಕರ್ಷವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಸೋಸಿಯೇಟ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ  ಅಧ್ಯಕ್ಷ ಸುಮಂತ್ ಸಿನ್ಹಾ  ಹೇಳಿದ್ದರು. ಇನ್ನೊಂದೆಡೆ, ಗ್ರಾಹಕರ ಕೈಯಲ್ಲಿ ಹೆಚ್ಚು ಹಣ ಬಿಟ್ಟರೆ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News