ಭಾರತೀಯ ರೈಲ್ವೆ: ಈಗ ಪ್ರಯಾಣಿಕರು ರೈಲಿನಲ್ಲಿ ಟೆನ್ಶನ್ ಇಲ್ಲದೆ ಮಲಗಬಹುದು, ಮಿಸ್ ಆಗಲ್ಲ ನಿಮ್ಮ ಸ್ಟೇಷನ್

Indian Railway: ದೂರ ಪ್ರಯಾಣಕ್ಕೆ ಜನರು ಸಾಮಾನ್ಯವಾಗಿ ರೈಲು ಸಂಚಾರವನ್ನು ಇಷ್ಟಪಡುತ್ತಾರೆ. ಪ್ರಯಾಣದ ವೇಳೆ ನಿದ್ರೆ ಬರುವುದು ಸಹಜವೇ. ಆದರೆ, ನಿದ್ರೆ ಮಾಡಿದರೆ ಎಲ್ಲಿ ನಮ್ಮ ಸ್ಟೇಷನ್ ಬಂದಾಗ ಎಚ್ಚರ ಆಗುವುದಿಲ್ಲವೋ ಎಂಬ ಚಿಂತೆ ಹಲವರಿಗೆ ಇದ್ದೇ ಇರುತ್ತದೆ. ಇನ್ನೂ ಕೆಲವರು ನಿದ್ರಿಸುತ್ತ ತಮ್ಮ ನಿಲ್ದಾಣದಲ್ಲಿ ಇಳಿಯದೆ ಮುಂದಿನ ನಿಲ್ದಾಣಕ್ಕೆ ಹೋಗಿ ಇಳಿದಿರುವ ಹಲವು ಉದಾಹರಣೆಗಳನ್ನು ನೀವು ನೋಡಿರಬಹುದು. ಆದರೆ ಇನ್ನು ಮುಂದೆ ಈ ಚಿಂತೆ ಇರುವುದಿಲ್ಲ. ಭಾರತೀಯ ರೈಲ್ವೆ ಇದಕ್ಕಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. 

Written by - Yashaswini V | Last Updated : Aug 12, 2022, 02:24 PM IST
  • ದೂರ ಪ್ರಯಾಣಕ್ಕೆ ಜನರು ಸಾಮಾನ್ಯವಾಗಿ ರೈಲು ಸಂಚಾರವನ್ನು ಇಷ್ಟಪಡುತ್ತಾರೆ.
  • ಪ್ರಯಾಣದ ವೇಳೆ ನಿದ್ರೆ ಬರುವುದು ಸಹಜವೇ.
  • ಆದರೆ, ನಿದ್ರೆ ಮಾಡಿದರೆ ಎಲ್ಲಿ ನಮ್ಮ ಸ್ಟೇಷನ್ ಬಂದಾಗ ಎಚ್ಚರ ಆಗುವುದಿಲ್ಲವೋ ಎಂಬ ಚಿಂತೆ ಹಲವರಿಗೆ ಇದ್ದೇ ಇರುತ್ತದೆ.
ಭಾರತೀಯ ರೈಲ್ವೆ: ಈಗ ಪ್ರಯಾಣಿಕರು ರೈಲಿನಲ್ಲಿ ಟೆನ್ಶನ್ ಇಲ್ಲದೆ ಮಲಗಬಹುದು, ಮಿಸ್ ಆಗಲ್ಲ ನಿಮ್ಮ ಸ್ಟೇಷನ್   title=
Station Alert Wakeup Alarm service

ರೈಲ್ವೇ ಸ್ಟೇಷನ್ ಅಲರ್ಟ್ ವೇಕಪ್ ಅಲಾರ್ಮ್ ಸೇವೆ: ರೈಲಿನಲ್ಲಿ ಪ್ರಯಾಣಿಸುವವರಿಗೆ ಪ್ರಮುಖ ಸುದ್ದಿ ಇದೆ. ರೈಲ್ವೆ ನಿರಂತರವಾಗಿ ತನ್ನ ಸೇವೆಗಳನ್ನು ಸುಧಾರಿಸುತ್ತಿದೆ ಮತ್ತು ಹೊಸ ನವೀಕರಣಗಳನ್ನು ಪರಿಚಯಿಸುತ್ತಿದೆ. ಇದೇ ವೇಳೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದೆ. ಈಗ ನೀವು ರೈಲಿನಲ್ಲಿ ನಿದ್ರಿಸುವಾಗ ನಿಮ್ಮ ರೈಲು ನಿಲ್ದಾಣ ಮಿಸ್ ಆಗಬಹುದು ಎಂಬ ಚಿಂತೆ ಇರುವುದಿಲ್ಲ. ಈಗ, ನೀವು ನಿಮ್ಮ ಸ್ಟೇಷನ್ ಬಗ್ಗೆ ಚಿಂತಿಸದೆ ಆರಾಮವಾಗಿ ಮಲಗಬಹುದು. ನೀವು ನಿಲ್ದಾಣಕ್ಕೆ ಬರುವ 20 ನಿಮಿಷಗಳ ಮೊದಲು ರೈಲ್ವೆ ನಿಮ್ಮನ್ನು ಎಬ್ಬಿಸುತ್ತದೆ.  ಅದು ಹೇಗೆ ಅಂತ ಯೋಚಿಸ್ತಿ ದ್ದೀರಾ... ಈ ಸುದ್ದಿ ಓದಿ... 

ವಾಸ್ತವವಾಗಿ, ದೂರ ಪ್ರಯಾಣಕ್ಕೆ ಜನರು ಸಾಮಾನ್ಯವಾಗಿ ರೈಲು ಸಂಚಾರವನ್ನು ಇಷ್ಟಪಡುತ್ತಾರೆ. ಪ್ರಯಾಣದ ವೇಳೆ ನಿದ್ರೆ ಬರುವುದು ಸಹಜವೇ. ಆದರೆ, ನಿದ್ರೆ ಮಾಡಿದರೆ ಎಲ್ಲಿ ನಮ್ಮ ಸ್ಟೇಷನ್ ಬಂದಾಗ ಎಚ್ಚರ ಆಗುವುದಿಲ್ಲವೋ ಎಂಬ ಚಿಂತೆ ಹಲವರಿಗೆ ಇದ್ದೇ ಇರುತ್ತದೆ. ಇನ್ನೂ ಕೆಲವರು ನಿದ್ರಿಸುತ್ತ ತಮ್ಮ ನಿಲ್ದಾಣದಲ್ಲಿ ಇಳಿಯದೆ ಮುಂದಿನ ನಿಲ್ದಾಣಕ್ಕೆ ಹೋಗಿ ಇಳಿದಿರುವ ಹಲವು ಉದಾಹರಣೆಗಳನ್ನು ನೀವು ನೋಡಿರಬಹುದು. ಆದರೆ ಇನ್ನು ಮುಂದೆ ಈ ಚಿಂತೆ ಇರುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ರೈಲ್ವೆ ಹೊಸ ಸೇವೆಯನ್ನು ಆರಂಭಿಸಿದೆ. ರೈಲ್ವೆಯ ಈ ವಿಶೇಷ ಸೇವೆಯ ಹೆಸರು 'ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್'. ಸಾಮಾನ್ಯವಾಗಿ ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದೆ. 139 ಸಂಖ್ಯೆಯ ವಿಚಾರಣೆ ಸೇವೆಯಲ್ಲಿ ರೈಲ್ವೆ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಚಾರಣಾ ವ್ಯವಸ್ಥೆ ಸಂಖ್ಯೆ 139 ನಲ್ಲಿ ಎಚ್ಚರಿಕೆಯ ಸೌಲಭ್ಯವನ್ನು ಕೇಳಬಹುದು.

ಇದನ್ನೂ ಓದಿ- ಪಿಎಂ ಕಿಸಾನ್ ಫಲಾನುಭವಿಗಳಿಗೆ ಗುಡ್ ನ್ಯೂಸ್

ನಿಮ್ಮ ಗಮ್ಯಸ್ಥಾನವನ್ನು ತಲುಪುವ  20 ನಿಮಿಷಗಳ ಮೊದಲು ಅಲರ್ಟ್:
ನೀವೂ ಸಹ ಈ ಸೇವೆಯ ಲಾಭವನ್ನು ಪಡೆಯಲು ಬಯಸಿದರೆ, ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಈ ಸೌಲಭ್ಯವು ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಇದಕ್ಕೆ ರೈಲ್ವೆ ಇಲಾಖೆಯಿಂದ ಕೇವಲ 3 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ನೀವು ಈ ಸೇವೆಯನ್ನು ತೆಗೆದುಕೊಂಡರೆ, ನಿಮ್ಮ ನಿಲ್ದಾಣದ 20 ನಿಮಿಷಗಳ ಮೊದಲು ನಿಮ್ಮ ಫೋನ್‌ಗೆ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ಇದರಿಂದ ನೀವು ನಿಮ್ಮ ಲಗೇಜ್ ಇತ್ಯಾದಿಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಮತ್ತು ನೀವು ನಿಲ್ದಾಣದಲ್ಲಿ ಇಳಿಯಲು ಸಹಾಯಕವಾಗುತ್ತದೆ.  

ಇದನ್ನೂ ಓದಿ- 8 ಲಕ್ಷಕ್ಕಿಂತ ಕಡಿಮೆ ಬೆಲೆಯ Mahindra Bolero.. ಕೇವಲ 25 ಸಾವಿರಕ್ಕೆ ಮನೆಗೆ ತನ್ನಿ

ರೈಲ್ವೆಯ ಈ ಸೇವೆಯನ್ನು ಪಡೆಯಲು ಹಂತ-ಹಂತದ ಪ್ರಕ್ರಿಯೆ: 
* 'ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್' ಸೇವೆಯನ್ನು ಪ್ರಾರಂಭಿಸಲು, ನೀವು IRCTC ಸಹಾಯವಾಣಿ 139 ಗೆ ಕರೆ ಮಾಡಬೇಕು.
* ಕರೆ ಸ್ವೀಕರಿಸಿದಾಗ ನಿಮ್ಮ ಭಾಷೆಯನ್ನು ಆಯ್ಕೆಮಾಡಿ.
* ಗಮ್ಯಸ್ಥಾನದ ಎಚ್ಚರಿಕೆಗಾಗಿ, ಮೊದಲು ಸಂಖ್ಯೆ 7 ಮತ್ತು ನಂತರ ಸಂಖ್ಯೆ 2 ಒತ್ತಿರಿ.
* ಇದರ ನಂತರ, ಪ್ರಯಾಣಿಕರಿಂದ 10-ಅಂಕಿಯ PNR ಸಂಖ್ಯೆಯನ್ನು ಕೇಳಲಾಗುತ್ತದೆ.
* PNR ಅನ್ನು ನಮೂದಿಸಿದ ನಂತರ, ಖಚಿತಪಡಿಸಲು 1 ಅನ್ನು ಡಯಲ್ ಮಾಡಿ.
* ಈ ಪ್ರಕ್ರಿಯೆಯ ನಂತರ, ಸಿಸ್ಟಮ್ PNR ಸಂಖ್ಯೆಯನ್ನು ಪರಿಶೀಲಿಸಿ ಮತ್ತು ವೇಕ್ಅಪ್ ಎಚ್ಚರಿಕೆಯನ್ನು ನೀಡಿ ಆಯ್ಕೆಯನ್ನು ಆರಿಸಿ. 
* ಇದರ ದೃಢೀಕರಣ ಎಸ್ ಎಂಎಸ್ ಪ್ರಯಾಣಿಕರ ಮೊಬೈಲ್ ಗೆ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News